Film News

ರಾಣಾ ನಾಯುಡು ವೆಬ್ ಸಿರೀಸ್ ವಿರುದ್ದ ಕಿಡಿಕಾರಿದ ಸೀನಿಯರ್ ನಟಿ ಕಂ ರಾಜಕಾರಣಿ ವಿಜಯಶಾಂತಿ…!

ವಿಕ್ಟರಿ ವೆಂಕಟೇಶ್ ಹಾಗೂ ರಾಣಾ ಜೊತೆಯಲ್ಲಿ ನಟಿಸಿದ ರಾಣಾ ನಾಯುಡು ವೆಬ್ ಸಿರೀಸ್ ಮಾ.10 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ವೆನ್ ಸಿರೀಸ್ ವಿಮರ್ಶಕರಿಂದ ಒಳ್ಳೆಯ ರಿವ್ಯೂ ಪಡೆದುಕೊಂಡರೂ ಸಹ ವೆಂಕಟೇಶ್ ಪಾತ್ರದ ಕಾರಣದಿಂದ ಅವರ ಫ್ಯಾನ್ಸ್ ತುಂಬಾನೆ ಬೇಸರವಾಗಿದ್ದಾರೆ. ಈ ಸೀರೀಸ್ ನಲ್ಲಿ ತುಂಬಾ ಅಡಲ್ಟ್ ಕಂಟೆಂಟ್ ಇರುವ ಕಾರಣದಿಂದ ಅನೇಕರು ವಿಮರ್ಶೆಗಳನ್ನು ಮಾಡಿದ್ದಾರೆ. ಇದೀಗ ಸೀನಿಯರ್‍ ನಟಿ ಕಂ ರಾಜಕಾರಣಿ ವಿಜಯಶಾಂತಿ ಸಹ ಈ ಸೀರೀಸ್ ಕುರಿತು ಕಿಡಿಕಾರಿದ್ದಾರೆ.

ಇನ್ನೂ ಈ ಸೀರಿಸ್ ಅಮೇರಿಕನ್ ಹಿಟ್ ಸೀರಿಸ್ ಡೋನೋ ವ್ಯಾನ್ ಎಂಬ ಸೀರಿಸ್ ರಿಮೇಕ್ ಆಗಿದೆ. ಈ ಸೀರಿಸ್ ನೆಟ್ ಫ್ಲಿಕ್ಸ್ ನಲ್ಲಿ ಮಾ.10 ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಅಂದಿನಿಂದ ಈ ಸೀರಿಸ್ ಒಳ್ಳೆಯ ಹಿಟ್ ಟಾಕ್ ಸಹ ಬರುತ್ತಿದೆ. ಅದಕ್ಕಿಂತ ಹೆಚ್ಚಿನ ಮಟ್ಟಿಗೆ ನೆಗೆಟೀವ್ ಟಾಕ್ ಸಹ ಕೇಳಿಬರುತ್ತಿದೆ. ಅಡಲ್ಟ್ ಕಂಟೆಂಟ್ ಹೆಚ್ಚಾಗಿರುವ ಕಾರಣದಿಂದ ಅನೇಕ ವಿಮರ್ಶೆಗಳು ಕೇಳಿಬರುತ್ತಿವೆ. ಇನ್ನೂ ವಿಕ್ಟರಿ ವೆಂಕಟೇಶ್ ಫ್ಯಾಮಿಲಿ ಪ್ರೇಕ್ಷಕರಿಗೆ ತುಂಬಾನೆ ಅಚ್ಚು ಮೆಚ್ಚು. ಆದರೆ ವೆಂಕಟೇಶ್ ರವರಿಂದ ಇಂತಹ ಸೀರಿಸ್ ಅವರ ಅಭಿಮಾನಿಗಳು ನಿರೀಕ್ಷೆ ಮಾಡಿರಲಿಲ್ಲ. ಅದೇ ರೀತಿ ರಾಣಾ ರವರ ಮೇಲೂ ಸಹ ಅನೇಕ ವಿಮರ್ಶೆಗಳು ಕೇಳಿಬರುತ್ತಿದ್ದು, ಆ ಕಾಮೆಂಟ್ ಗಳಿಗೆ ರಾಣಾ ಸಹ ಸ್ಪಂದಿಸುತ್ತಿದ್ದಾರೆ. ಈ ಸೀರಿಸ್ ಅಸಹ್ಯ ಮಾಡಿಕೊಂಡವರಿಗೆ, ವಿಮರ್ಶೆ ಮಾಡುವವರಿಗೆ ಕ್ಷಮೆಯನ್ನು ಕೋರುತ್ತಿದ್ದಾರೆ. ಸೀರಿಸ್ ಮೆಚ್ಚಿದವರಿಗೆ ಧನ್ಯವಾದಗಳನ್ನು ಸಹ ತಿಳಿಸುತ್ತಿದ್ದಾರೆ.

ಇನ್ನೂ ಈ ಸೀರಿಸ್ ನಲ್ಲಿ ಅಸಭ್ಯವಾದ ಡೈಲಾಗ್ ಗಳು, ಅಸಭ್ಯ ದೃಶ್ಯಗಳು ಹೆಚ್ಚಾಗಿದ್ದು, ಅವುಗಳ ಬಗ್ಗೆಯೇ ಹೆಚ್ಚು ವಿಮರ್ಶೆಗಳು ಎದುರಾಗುತ್ತಿವೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸೀನಿಯರ್‍ ನಟಿ ವಿಜಯಶಾಂತಿ ಸಹ ಪರೋಕ್ಷವಾಗಿ ಈ ವೆಬ್ ಸೀರಿಸ್ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಆಕೆ ಹಂಚಿಕೊಂಡಿರುವ ಪೋಸ್ಟ್ ನಂತೆ ಇತ್ತೀಚಿಗೆ ಬಿಡುಗಡೆಯಾದ ಒಂದು ಒಟಿಟಿ ಕುರಿತು ಅನೇಕರು ಬೇಸರಗೊಂಡಿದ್ದಾರೆ. ಪ್ರಜೆಗಳ ಮನೋಭಾವನೆಯನ್ನು ನಾನು ಇಲ್ಲಿ ಹೇಳುತ್ತಿದ್ದೇನೆ. ಮಹಿಳಾ ಉದ್ಯಮಗಳು ಉಂಟಾಗದಂತೆ. ಸಂಬಂಧಪಟ್ಟ ನಟರು ಹಾಗೂ ನಿರ್ಮಾಪಕರು ಒಟಿಟಿಯಿಂದ ಜನರ ಮನೋಭಾವಗಳಿಗೆ ಧಕ್ಕೆಯಾಗುವಂತಹ ದೃಶ್ಯಗಳಿಗೆ ಕಡಿವಾಣ ಹಾಕಬೇಕು. ಪ್ರಜೆಗಳು ಕೊಟ್ಟ ಅಭಿಮಾನಿವನ್ನು ಮತಷ್ಟು ಗೌರವದಿಂದ ಕಾಪಾಡಿಕೊಳ್ಳಬೇಕು ಎಂಬ ಅರ್ಥ ಬರುವ ರೀತಿಯಲ್ಲಿ ಆಕೆ ಪೋಸ್ಟ್ ಮಾಡಿದ್ದಾರೆ.

ಇತ್ತೀಚಿಗೆ ಒಟಿಟಿ ಸೀರಿಸ್ ಗಳಿಗೂ ಸಹ ಸೆನ್ಸಾರ್‍ ಗೆ ಒಳಪಡಿಸಬೇಕು ಎಂಬ ಕೂಗು ಜೋರಾಗಿಯೇ ಕೇಳಿಬರುತ್ತಿದೆ. ಒಟಿಟಿ ಫ್ಲಾಟ್ ಫಾರಂ ನಲ್ಲಿ ಯಾವುದೇ ಸೀರಿಸ್ ಗಳು ಬಿಡುಗಡೆಯಾಗುವುದಕ್ಕೂ ಮುಂಚೆ ಸೆನ್ಸಾರ್‍ ಕಡ್ಡಾಯವಾಗಿ ಮಾಡಬೇಕು ಎಂಬ ಅಭಿಪ್ರಾಯವನ್ನೂ ಸಹ ವಿಜಯಶಾಂತಿ ವ್ಯಕ್ತಪಡಿಸಿದ್ದಾರೆ.

Most Popular

To Top