Film News

ಸ್ಟಾರ್ ನಟಿಯರೇ ಅಸೂಯೆಪಡುವಂತೆ ಸೆಲ್ಫಿ ಹಂಚಿಕೊಂಡ ಬನ್ನಿ ವೈಫ್, ಮಿರರ್ ಸೆಲ್ಫಿ ಮೂಲಕ ಸದ್ದು ಮಾಡಿದ ಸ್ನೇಹಾ…!

ಇತ್ತೀಚಿಗೆ ಟಾಲಿವುಡ್ ರಂಗದ ಅನೇಕರು ಬಾಲಿವುಡ್ ಸಂಪ್ರದಾಯತ್ತ ಮುಖ ಮಾಡುತ್ತಿದ್ದಾರೆ. ಅನೇಕ ಸ್ಟಾರ್‍ ನಟರ ಪತ್ನಿಯರೂ ಸಹ ಗ್ಲಾಮರಸ್ ಪೋಸ್ ಗಳನ್ನು ನೀಡುವತ್ತ ಸಾಗುತ್ತಿದ್ದಾರೆ. ಪತಿಯರಂತೆ ಪತ್ನಿಯರೂ ಸಹ ತಮ್ಮದೇ ಆದ ಇಮೇಜ್ ಸಂಪಾದಿಸಿಕೊಳ್ಳಲು  ಪ್ರಯತ್ನಿಸುತ್ತಿರುತ್ತಾರೆ. ಈ ಸಾಲಿಗೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ಸಹ ಸೇರುತ್ತಾರೆ ಎನ್ನಬಹುದಾಗಿದೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಅನ್ನೋ ಹಾಗೆ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಪೋಸ್ ಕೊಡುತ್ತಾರೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ರವರನ್ನು ಸೋಷಿಯಲ್ ಮಿಡಿಯಾದಲ್ಲಿ ಫ್ಯಾಷನ್ ಐಕಾನ್ ಎಂದೇ ಕರೆಯುತ್ತಾರೆ. ಅಲ್ಲು ಕುಟುಂಬದ ಸೊಸೆ ಸ್ನೇಹಾ ರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತಲೂ ತಾನು ಕಡಿಮೆಯಿಲ್ಲ ಎಂಬಂತೆ ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಹೊಂದಿರುವ ಈಕೆ ತನ್ನ ಕುಟುಂಬದ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ. ವೆಕೇಷನ್ ಗೇ ಹೋದಾಗಲೂ ಸಹ ಅಲ್ಲಿನ ಪೊಟೋಗಳನ್ನು ಸ್ನೇಹಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಆಗಾಗ ಟ್ರೆಂಡಿ ಔಟ್ ಫಿಟ್, ಟ್ರೆಡಿಷನಲ್ ಡ್ರೆಸ್ ಗಳಲ್ಲೂ ಸಹ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಿಂದ ಕೂಡಿದ ರೀಲ್ಸ್ ಹಂಚಿಕೊಂಡಿದ್ದಾರೆ. ಈ ರೀಲ್ ನಲ್ಲಿ ಆಕೆ ಟ್ರೆಂಡಿ ವೇರ್‍ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟೈಲೀಷ್ ಸ್ಯೂಟ್ ಧರಿಸಿ ಬ್ಯೂಟಿಪುಲ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳ ಮೂಲಕ ಅಭಿಮಾನಿಗಳನ್ನು ಮಸ್ಮರೈಜ್ ಮಾಡಿದ್ದಾರೆ. ಇನ್ನೂ ಈ ರೀಲ್ ಜೊತೆಗೆ ಮಿರರ್‍ ಸೆಲ್ಫಿ ಯಾರು ತಾನೆ ಇಷ್ಟಪಡೊಲ್ಲ ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಈ ಸ್ಟೈಲಿಷ್ ಲುಕ್ಸ್ ಇರುವಂತಹ ಸ್ನೇಹಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳೂ ಸಹ ಆಕೆಯ ಪೊಟೋಗಳನ್ನು ಹೊಗಳುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ಸ್ನೇಹಾರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಫ್ಯಾಷನ್ ಐಕಾನ್ ಆಗಿ ಕ್ರೇಜ್ ಪಡೆದುಕೊಂಡಿದ್ದು 8.3 ಮಿಲಿಯನ್ ಫಾಲೋವರ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ತನ್ನ ಕುಟುಂಬದ ಅಪ್ಡೇಟ್ ಗಳ ಜೊತೆಗೆ ಕೆಲವೊಂದು ಹೆಲ್ತ್ ಟಿಪ್ಸ್ ಸಹ ನೀಡುತ್ತಿರುತ್ತಾರೆ. ಇದೀಗ ಆಕೆಯ ಮಿರರ್‍ ಸೆಲ್ಫಿ ರೀಲ್ ವಿಡಿಯೋ ವೈರಲ್ ಆಗುತ್ತಿದೆ.

Most Popular

To Top