ಅಲ್ಲು ಅರ್ಜುನ್ ನನ್ನ ಸೋಷಿಯಲ್ ಮಿಡಿಯಾದಲ್ಲಿ ಬ್ಲಾಕ್ ಮಾಡಿದ್ದಾರೆ ಎಂದ ನಟಿ, ಬಳಿಕ ಅನ್ ಬ್ಲಾಕ್ ಮಾಡಿದ ಅಲ್ಲು ಅರ್ಜುನ್….!

ಟಾಲಿವುಡ್ ನ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಮಾತ್ರವಲ್ಲದೇ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಫೇಂ ಸಂಪಾದಿಸಿಕೊಂಡರು.…

ಟಾಲಿವುಡ್ ನ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಮಾತ್ರವಲ್ಲದೇ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಫೇಂ ಸಂಪಾದಿಸಿಕೊಂಡರು. ಅನೇಕ ನಟ ನಟಿಯರೂ ಸಹ ಬನ್ನಿ ಮ್ಯಾನರಿಜಂಗೆ ಫಿದಾ ಆಗಿದ್ದಾರೆ. ಈ ಹಿಂದೆ ಬನ್ನಿ ಜೊತೆ ನಟಿಸಿದ್ದ ನಟಿಯೊಬ್ಬರು ಆತನ ಮೇಲೆ ಆರೋಪ ಮಾಡಿದ್ದಾರೆ. ತನ್ನನ್ನು ಸೋಷಿಯಲ್ ಮಿಡಿಯಾದಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಸ್ಕ್ರೀನ್ ಶಾಟ್ ಸಹ ಹಂಚಿಕೊಂಡು ಪೋಸ್ಟ್ ಮೂಲಕ ಆವೇದನೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆ ನಟಿ ಯಾರೂ ಎಂಬ ವಿಚಾರಕ್ಕೆ ಬಂದರೇ.

ಸುಮಾರು 12 ವರ್ಷಗಳ ಹಿಂದೆ ಅಲ್ಲು ಅರ್ಜುನ್ ರವರ ವರುಡು ಎಂಬ ಸಿನೆಮಾ ತೆರೆಗೆ ಬಂದಿತ್ತು. ಈ ಸಿನೆಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ನಟಿಸಿದ್ದ ನಟಿಯೇ ಈ ಆರೋಪ ಮಾಡಿರುವುದು. ವರುಡು ಸಿನೆಮಾದ ಹಿರೋಯಿನ್ ಭಾನುಶ್ರೀ ಮೆಹ್ರಾ ರವರೇ ಇದೀಗ ಅಲ್ಲು ಅರ್ಜುನ್ ರವರು ತನ್ನನ್ನು ಸೋಷಿಯಲ್ ಮಿಡಿಯಾದಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇನ್ನೂ ವರುಡು ಸಿನೆಮಾ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಅಭಿಮಾನಿಗಳಿಗೆ ಮಾತ್ರ ನೆನಪಿರುವ ಸಿನೆಮಾ ಆಗಿದೆ ಎಂದು ಹೇಳಬಹುದಾಗಿದೆ. ಈ ಸಿನೆಮಾದ ಬಳಿಕ ಭಾನುಶ್ರೀ ರವರಿಗೆ ಸಿನೆಮಾಗಳಲ್ಲಿ ಅವಕಾಶಗಳೂ ಸಹ ಬಂದವು.

ಇದೀಗ ಅಲ್ಲು ಅರ್ಜುನ್ ತನ್ನನ್ನು ಟ್ವಿಟರ್‍ ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ರವರು ಟ್ಟೀಟರ್‍ ನಲ್ಲಿ ಬ್ಲಾಕ್ ಮಾಡಿರುವ ಪೇಜ್ ಅನ್ನು ಸ್ಕ್ರೀನ್ ಶಾಟ್ ಸಹ ತೆಗೆದು ಟ್ವಿಟರ್‍ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ವರುಡು ಸಿನೆಮಾದಲ್ಲಿ ಬನ್ನಿ ಜೊತೆಗೆ ನಟಿಸಿದ್ದೇನೆ. ಇಂದಿಗೂ ಸಹ ದೊಡ್ಡ ಅವಕಾಶಗಳು ಇಲ್ಲ. ಆದರೂ ಸಹ ಅವಕಾಶಗಳಿಗಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಇಂತಹ ಸಮಯದಲ್ಲಿ ಅಲ್ಲು ಅರ್ಜುನ್ ನನ್ನನ್ನು ಬ್ಲಾಕ್ ಮಾಡಿದ್ದಾರೆ. ಸಬ್ ಸ್ಕ್ರೈಬ್ ಮಾಡು ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಭಾನು ಶ್ರೀ ಟ್ವೀಟ್ ವೈರಲ್ ಆಗುತ್ತಿದ್ದಂತೆ ಬನ್ನಿ ಎರಡು ಮೂರು ಗಂಟೆಗಳ ಬಳಿಕ ಆಕೆಯನ್ನು ಅನ್ ಬ್ಲಾಕ್ ಮಾಡಿದ್ದಾರೆ. ಈ ಬಗ್ಗೆ ಸಹ ಮತ್ತೊಂದು ಟ್ವೀಟ್ ಮೂಲಕ ಭಾನುಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಲು ಅರ್ಜುನ್ ಅನ್ ಬ್ಲಾಕ್ ಮಾಡಿದ ಬಳಿಕ ಟ್ವೀಟ್ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಗ್ರೇಟ್ ನ್ಯೂಸ್ ಅಲ್ಲು ಅರ್ಜುನ್ ನನ್ನನ್ನು ಅನ್ ಬ್ಲಾಕ್ ಮಾಡಿದ್ದಾರೆ. ನನ್ನ ಕೆರಿಯರ್‍ ಸೆಟ್ ಬ್ಯಾಕ್ ಮಾಡಿಕೊಳ್ಳಲು ಆತನನ್ನು ಬ್ಲೇಮ್ ಮಾಡಲಿಲ್ಲ. ನನ್ನ ಕಷ್ಟಗಳಲ್ಲಿ ನಗುತ್ತಾ ಮುಂದೆ ಸಾಗುವುದನ್ನು ಕಲಿತಿದ್ದೇನೆ. ಮುಂದೆ ಮತಷ್ಟು ಒಳ್ಳೆಯದ್ದಕ್ಕಾಗಿ ಕಾದು ನೋಡಿ, ಅಲ್ಲು ಅರ್ಜುನ್ ರವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಆಕೆಯನ್ನು ಬ್ಲಾಕ್ ಮಾಡಿದ್ದು ಏಕೆ, ಅನ್ ಬ್ಲಾಕ್ ಮಾಡಿದ್ದು ಏಕೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.