Film News

ಮುದುಕರಿಗೆಲ್ಲಾ ಮದುವೆಯಾಗುತ್ತಿದೆ ನನಗೆ ಆಗುತ್ತಿಲ್ಲ ಎಂದ ಸೀನಿಯರ್ ನಟಿ ಸುರೇಖಾವಾಣಿ, ವೈರಲ್ ಆದ ವಿಡಿಯೋ…..!

ತೆಲುಗು ಸಿನಿರಂಗದಲ್ಲಿ ಅನೇಕ ಮಹಿಳಾ ಕಲಾವಿದರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಕಲಾವಿದರೂ ಸಹ ದೊಡ್ಡದಾಗಿಯೇ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೀನಿಯರ್‍ ಕಲಾವಿದರಾದ ಪ್ರಗತಿ, ಹೇಮಾ ಮೊದಲಾದವರು ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಸೀನಿಯರ್‍ ನಟಿ ಸುರೇಖಾವಾಣಿ ಸಹ ಸೇರುತ್ತಾರೆ. ಸೋಷಿಯಲ್ ಮಿಡಿಯಾದ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಆಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ವಿಡಿಯೋ ಮೂಲಕ ಆಕೆ ಸದ್ದು ಮಾಡುತ್ತಿದ್ದಾರೆ.

ತೆಲುಗು ಸಿನಿರಂಗದ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾ ವಾಣಿ ಬಗ್ಗೆ ಅಷ್ಟೊಂದು ಪರಿಚಯದ ಅಗತ್ಯವಿಲ್ಲ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಆಕೆ ಹಾಗೂ ತನ್ನ ಪುತ್ರಿ ಸುಪ್ರೀತಾ ಜೊತೆಗೆ ಸೇರಿ ಸೋಷಿಯಲ್ ಮಿಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಿರುತ್ತಾರೆ. ವೇಕೇಷನ್, ಶಾಪಿಂಗ್ ಸೇರಿದಂತೆ ಅನೇಕ ಕಡೆ ಇಬ್ಬರೂ ಜೊತೆಗೆ ಹೋಗಿ ಡ್ಯಾನ್ಸ್ ಮಾಡುತ್ತಾ, ಗ್ಲಾಮರಸ್ ಪೊಟೋಗಳನ್ನು, ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಜೊತೆಗೆ ಅವರ ಪೋಸ್ಟ್ ಗಳ ಕಾರಣದಿಂದ ಇಬ್ಬರೂ ಟ್ರೋಲಿಂಗ್ ಗೆ ಸಹ ಗುರಿಯಾಗುತ್ತಿರುತ್ತಾರೆ. ಆದರೆ ಟ್ರೋಲ್ ಗಳು ಮಿತಿಮೀರಿದರೇ ಸ್ಟ್ರಾಂಗ್ ಆಗಿಯೇ ಕೌಂಟರ್‍ ಸಹ ನೀಡುತ್ತಿರುತ್ತಾರೆ.

ಇನ್ನೂ ಸುರೇಖಾ ವಾಣಿ ತನ್ನ ಇನ್ಸ್ಟಾ ಖಾತೆಯಲ್ಲಿ ಇಂಟ್ರಸ್ಟಿಂಗ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ನರೇಶ್ ಹಾಗೂ ಪವಿತ್ರ, ಕಳೆದೆರಡು ದಿನಗಳ ಹಿಂದೆಯಷ್ಟೆ ಮದುವೆಯಾದ ಆಶೀಷ್ ವಿದ್ಯಾರ್ಥಿಯವರನ್ನು ಟ್ರೋಲ್ ಮಾಡುತ್ತಾ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಮುದುಕರಿಗೆಲ್ಲಾ ಮದುವೆಯಾಗುತ್ತಿದೆ, ನನಗೆ ಮಾತ್ರ ಆಗುತ್ತಿಲ್ಲ ಎಂದು ವಿಡಿಯೋ ಮಾಡಿದ್ದಾರೆ. ನರೇಶ್ ಹಾಗೂ ಪವಿತ್ರಾ ಮಳ್ಳಿ ಪೆಳ್ಳಿ ಎಂಬ ಸಿನೆಮಾ ಶುಕ್ರವಾರ ಬಿಡುಗಡೆಯಾಗಿದೆ. ಇನ್ನೂ 60 ವರ್ಷದ ವಯಸ್ಸಿನಲ್ಲಿ ಹಿರಿಯ ನಟ ಆಶಿಷ್ ವಿದ್ಯಾರ್ಥಿ ಎರಡನೇ ಮದುವೆಯಾಗಿದ್ದಾರೆ. ಈ ಹಾದಿಯಲ್ಲೇ ಆಕೆ ಈ ಫನ್ನಿ ವಿಡಿಯೋ ಮೂಲಕ ಟ್ರೋಲ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕಾಮೆಂಟ್ ಗಳು ಹರಿದು ಬರುತ್ತಿವೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಸುರೇಖಾವಾಣಿ ಹಾಗೂ ಸುಪ್ರಿತಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಸುಪ್ರಿತಾ ತನ್ನ ತಾಯಿಗೆ ಮತ್ತೆ ಮದುವೆ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಸುರೇಖಾವಾಣಿ ಹಂಚಿಕೊಂಡ ವಿಡಿಯೋ ಕಾರಣದಿಂದ ಆಕೆ ಮತ್ತೆ ಮದುವೆಯಾಗಲು ಪರಿತಪಿಸುತ್ತಾರೆ ಎಂಬ ಕಾಮೆಂಟ್ ಗಳು ಕೇಳಿಬರುತ್ತಿವೆ.

Most Popular

To Top