ಆಶಿಷ್ ವಿದ್ಯಾರ್ಥಿ ಹಾಗೂ ರುಪಾಲಿ ಎರಡನೇ ಮದುವೆ ಬಗ್ಗೆ ಆಶಿಷ್ ಮೊದಲ ಪತ್ನಿ ಶಾಕಿಂಗ್ ಕಾಮೆಂಟ್ಸ್…..!

Follow Us :

ಕಳೆದೆರಡು ದಿನಗಳ ಹಿಂದೆಯಷ್ಟೆ ತೆಲುಗು ಸಿನಿರಂಗದ ಕ್ಯಾರೆಕ್ಟರ್‍ ಆರ್ಟಿಸ್ಟ್ ಹಾಗೂ ವಿಲನ್ ಪಾತ್ರಗಳನ್ನು ಪೋಷಣೆ ಮಾಡಿ ಖ್ಯಾತಿ ಪಡೆದುಕೊಂಡ ಆಶಿಷ್ ವಿದ್ಯಾರ್ಥಿ ರುಪಾಲಿ ಎಂಬ ಮಹಿಳೆಯೊಂದಿಗೆ ಎರಡನೇ ವಿವಾಹವಾದರು. ಆಶಿಷ್ ತಮ್ಮ 60 ನೇ ವಯಸ್ಸಿನಲ್ಲಿ 33 ವರ್ಷದ ರೂಪಾಲಿಯನ್ನು ಎರಡನೇ ಮದುವೆಯಾಗಿದ್ದಾರೆ. ಅವರ ಮದುವೆ ಸಿನಿರಂಗದಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ಆಶಿಷ್ ವಿದ್ಯಾರ್ಥಿ ಯವರ ಮೊದಲನೆ ಪತ್ನಿ ಆಶಿಷ್ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವರು ವೈರಲ್ ಆಗುತ್ತಿವೆ.

ನಟ ಆಶಿಷ್ ವಿದ್ಯಾರ್ಥಿ ಎರಡನೇ ಮದುವೆಯ ಬಗ್ಗೆ ಸುದ್ದಿಗಳು ಜೋರಾಗಿದೆ. ಈ ಹಾದಿಯಲ್ಲೇ ಮಿಡಿಯಾಗಳು ಆಶಿಷ್ ಮೊದಲನೇ ಪತ್ನಿಯ ಜೊತೆ ಮಾತನಾಡಿವೆ. ಈ ವೇಳೆ ಮಿಡಿಯಾದವರು ಆಶಿಷ್ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಆಕೆ ನೀಡಿದ ಉತ್ತರಗಳು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಆಶಿಷ್ ಮೊದಲನೇ ಪತ್ನಿ ರಾಜೌಷಿ ಮಾತನಾಡಿ ನಾವು ಕಳೆದ 2001 ರಲ್ಲೇ ವಿಚ್ಚೇದನ ಪಡೆದುಕೊಂಡಿದ್ದೇವೆ. ಅಲ್ಲಿಂದ ನಾವು ಆಗಾಗ ಭೇಟಿ ಯಾಗುತ್ತಿದ್ದೆವು. ನಾವು ಬೇರಯಾಗಿ 22ವರ್ಷಗಳು ಕಳೆದಿದೆ. ಆದರೆ ಕಳೆದ ವರ್ಷ ಅಕ್ಟೋಬರ್‍ ಮಾಹೆಯಲ್ಲಿ ಕಾನೂನಾತ್ಮಕವಾಗಿ ವಿಚ್ಚೇದನ ಪಡೆದುಕೊಂಡೆವು. ಆ ವಿಚ್ಚೇದನ ಈ ವರ್ಷ ಮಂಜೂರಾಗಿದೆ. ನನಗೆ ಆಶಿಷ್ ಎಂದೂ ಮೋಸ ಮಾಡಲಿಲ್ಲ. ಜನರು ಊಹಿಸಿಕೊಳ್ಳುತ್ತಿರುವಂತೆ ಆತ ಹಿಂಸೆ ಕಷ್ಟಗಳು ಏನು ಕೊಟ್ಟಿಲ್ಲ ಎಂದಿದ್ದಾರೆ.

ನಾವಿಬ್ಬರೂ ಬೇರೆ ಬೇರೆ, ನಾವು ಪ್ರತ್ಯೇಕ ದಾರಿಯಲ್ಲಿ ಹೋಗುತ್ತಿದ್ದೆವೆ. ಇದೀಗ ಆತ ತನ್ನ ಕರಿಯರ್‍ ನಲ್ಲಿ ಸಕ್ಸಸ್ ಕಾಣುತ್ತಿದ್ದಾರೆ. ನಾನು ಸಹ ನನ್ನ ಐದು ವರ್ಷಗಳಿಂದ ಉಳಿದಂತಹ ವಿಚಾರಗಳ್ನು ನೋಡಿಕೊಳ್ಳುತ್ತಿದ್ದೇನೆ. ನನ್ನ ವಯುಕ್ತಿಕ ಜೀವನದಲ್ಲಿ ಬೇರೆ ಬೇರೆ ಅವಸರಗಳು, ಗುರಿಗಳು ಇದೆ. ಆಶಿಷ್ ಶ್ರೀಮತಿಯಾಗಿ ನಾನು ನನ್ನ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂಬ ಕಾರಣದಿಂದ ನಾನೇ ದೂರವಾದೆ. ಇವೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಆತ ಎರಡನೇ ಮದುವೆಯಾಗಿದ್ದಾನೆ ಎಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಆಶಿಷ್ ಹಾಗೂ ರಾಜೌಶಿ ಗೆ ಒಬ್ಬ ಮಗನಿದ್ದಾನೆ. ಆತ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಇನ್ನೂ ಆಶಿಷ್ ವಿದ್ಯಾರ್ಥಿ ಈ ಎರಡನೇ ಮದುವೆ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಅವರ ಮದುವೆ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಅವರ ಮದುವೆಯನ್ನು ಕೆಲವರು ಬೆಂಬಲಿಸಿದರೇ, ಮತ್ತೆ ಕೆಲವರು ವಿಮರ್ಶೆ ಮಾಡುತ್ತಿದ್ದಾರೆ.