ನನ್ನ ತಂದೆಯಿಂದಲೇ ನಾನು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದೆ ಎಂದ ಸೀನಿಯರ್ ನಟಿ ಖುಷ್ಬು?

Follow Us :

ಸೌತ್ ಸಿನಿರಂಗದ ಸೀನಿಯರ್‍ ನಟಿ ಖುಷ್ಬು ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಕಲಿಯುವ ಪಾಂಡವುಲು ಎಂಬ ಸಿನೆಮಾದಲ್ಲಿ ವಿಕ್ಟರಿ ವೆಂಕಟೇಶ್ ಜೊತೆಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಆಕೆ ತೆಲುಗು ಹಾಗೂ ತಮಿಳು ಭಾಷೆಯ ಅನೇಕ ಸಿನೆಮಾಗಳಲ್ಲಿ ನಟಿಸಿ ಕ್ರೇಜಿ ನಟಿಯಾದರು. ಇನ್ನೂ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಜ್ಞಾತವಾಸಿ, ಸ್ಟಾಲೀನ್, ಯಮದೊಂಗ ಮೊದಲಾದ ಸಿನೆಮಾಗಳಲ್ಲಿ ನಟಿಸಿದ ಖುಷ್ಬು ಇದೀಗ ರಾಜಕೀಯದಲ್ಲೂ ಸಹ ಸಕ್ರೀಯರಾಗಿದ್ದಾರೆ. ಅದೇ ರೀತಿ ಕಿರುತೆರೆಯಲ್ಲೂ ಸಹ ಬ್ಯುಸಿಯಾಗಿದ್ದು, ಜಬರ್ದಸ್ತ್‌ ಶೋನ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಖುಷ್ಬು ಬಿಜೆಪಿ ಪಕ್ಷದಲ್ಲಿ ಆಕ್ಟೀವ್ ಆಗಿದ್ದಾರೆ. ನ್ಯಾಷನಲ್ ವುಮೆನ್ ಕಮಿಷನ್ ನಲ್ಲಿ ಆಕೆ ಸದಸ್ಯರಾಗಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಮಹಿಳೆಯರ ಬಗ್ಗೆ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಆಕೆಯ ಜೀವನದಲ್ಲಿ ಎದುರಾದ ಕೆಲವೊಂದು ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ತನ್ನ ತಂದೆಯೇ ಲೈಂಗಿಕ ದೌರ್ಜನ್ಯ ಮಾಡಿದ ಬಗ್ಗೆ ಆಕೆ ಹೇಳಿಕೊಂಡಿದ್ದಾರೆ. ಇನ್ನೂ ಹುಡುಗನಿಗಾಗಲೀ ಅಥವಾ ಹುಡುಗಿಗಾಗಲಿ ಚಿಕ್ಕಂದಿನಿಂದಲೇ ಇಂತಹ ದೌಜನ್ಯಗಳು ಎದುರಾದರೇ ಆ ಜೀವನ ತುಂಭಾ ಭಯಂಕರವಾಗಿರುತ್ತದೆ. ನನ್ನ ತಾಯಿ ಸಹ ಮದುವೆಯಾಗಿದ ಬಳಿಕ ತುಂಬಾನೆ ನೋವನ್ನು ಅನುಭವಿಸಿದ್ದಾರೆ. ಒಬ್ಬ ಗಂಡಸು ತನ್ನ  ಹೆಂಡತಿಯನ್ನು ಹೊಡೆಯುವುದು, ಮಕ್ಕಳನ್ನು ಹೊಡೆಯುವುದು, ಮಗಳನ್ನು ಸಹ ಅಸಭ್ಯವಾಗಿ ಬೈಯುವುದು ಎಲ್ಲವೂ ಜನ್ಮಸಿದ್ದ ಹಕ್ಕು ಎಂದು ಭಾವಿಸುವಂತಹ ದಿನಗಳು ಅಂದಿದ್ದವು. ನನಗೆ ಎಂಟು ವರ್ಷ ವಯಸ್ಸಿರುವಾಗಲೇ ನನ್ನ ತಂದೆಯಿಂದ ನನ್ನ ಮೇಲೆ ದೌರ್ಜನ್ಯಗಳು ಶುರುವಾದವು. ಎಲ್ಲವನ್ನೂ ಎದುರಿಸಲು ನನಗೆ ತುಂಬಾನೆ ಸಮಯ ಬೇಕಾಯಿತು ಎಂದಿದ್ದಾರೆ.

ಇನ್ನೂ ಈ ವಿಚಾರವನ್ನು ನಮ್ಮ ತಾಯಿಗೆ ತಿಳಿಸಿದರೂ ಸಹ ಆಕೆ ನಂಬುತ್ತಿರಲಿಲ್ಲ. ಆಕೆ ತನ್ನ ಪತಿಯನ್ನು ದೈವ ಎಂಬ ಭಾವನೆಯಲ್ಲಿದ್ದರು. ಏನೆ ಆದರೂ ಆತನೇ ತನ್ನ ಆರಾಧ್ಯ ಧೈವ ಎಂಬ ಭಾವನೆಯಲ್ಲಿದ್ದರು. ಆದರೆ ನನಗೆ 15 ವರ್ಷ ವಯಸ್ಸಾದಾಗ ನಾನು ನನ್ನ ತಂದೆಯ ವಿರುದ್ದ ತಿರುಗಿಬಿದ್ದೆ. ಆದರೆ ನನಗೆ 16 ವರ್ಷ ವಯಸ್ಸಾದಾಗ ನನ್ನ ತಂದೆ ಮರಣಹೊಂದಿದರು. ಬಳಿಕ ನಮಗೆ ಒಂದು ಹೊತ್ತು ಕಳೆಯುವುದು ತುಂಬಾನೆ ಕಷ್ಟಕರವಾಗಿತ್ತು ಎಂದು ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಸದ್ಯ ಖುಷ್ಬು ನೀಡಿದ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ.