ಯಧುವೀರ್ ರವರೇ, ದೇಶಕ್ಕಾಗಿ, ಮೋದಿಗಾಗಿ ತಯಾರಿ ಆರಂಭಿಸೋಣ ಎಂದ ಪ್ರತಾಪ್ ಸಿಂಹ, ವೈರಲ್ ಆದ ಪೋಸ್ಟ್…..!

Follow Us :

ಲೋಕಸಭಾ ಚುನಾವಣೆ ನಿಮಿತ್ತ ಬಿಜೆಪಿ ಪಕ್ಷ 400 ಸೀಟ್ ಗಳನ್ನು ಗೆಲ್ಲಲು ಭಾರಿ ಪ್ರಯತ್ನಗಳನ್ನು ನಡೆಸುತ್ತಿದೆ. ನಿನ್ನೆಯಷ್ಟೆ ಕರ್ನಾಟಕದ 20 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಈ ಪಟ್ಟಿಯಲ್ಲಿ ಹಾಲಿ ಸಂಸದರೂ ಸೇರಿದಂತೆ ಟಿಕೆಟ್ ನೀರಿಕ್ಷೆಯಲ್ಲಿದ್ದವರಿಗೆ ನಿರಾಸೆ ಸಿಕ್ಕಿದೆ ಎನ್ನಲಾಗಿದೆ. ಮೈಸೂರು ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹರವರ ಬದಲಿಗೆ ಈ ಬಾರಿ ಯಧುವೀರ್‍ ಒಡೆಯರ್‍ ರವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಪ್ರತೀ ಭಾರಿಯಂತೆ ಈ ಬಾರಿಯೂ ಸಹ ಬಿಜೆಪಿ ಪಕ್ಷ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದೆ. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರತಾಪ್ ಸಿಂಹರವರ ಬದಲಿಗೆ ಯಧುವೀರ್‍ ಒಡೆಯರ್‍ ಗೆ ಟಿಕೆಟ್ ಘೋಷಣೆ ಮಾಡಿದೆ. ಯಧುವೀರ್‍ ರವರಿಗೆ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಪ್ರತಾಪ್ ಸಿಂಗ್ ಅವರಿಗೆ ಶುಭಾಷಯ ಕೋರಿದ್ದಾರೆ. ಜೊತೆಗೆ ತಮ್ಮ ಟ್ವಿಟರ್‍ (ಎಕ್ಸ್) ಖಾತೆಯಲ್ಲಿ ಮಹಾರಾಜ ಶ್ರೀ ಯಧುವೀರ್‍ ರವರಿಗೆ ಶುಭಾಷಯಗಳು ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ ದೇಶ್ಕಕಾಗ ಹಾಗೂ ಮೋದಿಗಾಗಿ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಯಧುವೀರ್‍ ರವರಿಗೆ ಕರೆ ಮಾಡಿದ್ದು, ಕರೆಯ ಮೂಲಕ ಅಭಿನಂದನೆ ಸಲ್ಲಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ ಎಂದು ಎಲ್ಲರಿಗೂ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೂ ಪ್ರತಾಪ್ ಸಿಂಹ ತಮಗೆ ಟಿಕೆಟ್ ಮಿಸ್ ಆದರೂ ಸಹ ದೇಶ ಹಾಗೂ ಪಕ್ಷಕ್ಕಾಗಿ ಚುನಾವಣೆ ಎದುರಿಸೋಣ, ಚುನಾವಣೆ ಗೆಲ್ಲೋಣ ಎಂದು ಹೇಳಿದ್ದು, ಪ್ರತಾಪ್ ಸಿಂಹ ರವರ ಪೋಸ್ಟ್ ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಅನೇಕರು ಟಿಕೆಟ್ ಮಿಸ್ ಆಗಿದ್ದಕ್ಕೆ ಬೇಸರ ಸಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಪ್ರತಾಪ್ ಸಿಂಹ ರವರ ವಿರುದ್ದ ಸ್ಥಳೀಯ ನಾಯಕರ ವಿರೋಧ ಹಾಗೂ ಮೈಸೂರಿಗೆ ಹೆಚ್ಚು ಅನುದಾನ ನೀಡಿದ್ದಾರೆ, ಕೊಡುಗಿಗೆ ಕಡಿಮೆ ಎಂದು ಆರೋಪ ಸಹ ಕೇಳಿಬಂದಿತ್ತು.