Film News

ಡೈರೆಕ್ಟರ್ ಇವಿವಿ ಸತ್ಯನಾರಾಯಣ ನನ್ನ ರೂಂ ಗೆ ಕರೆದಿದ್ದರು, ನನ್ನ ಮೇಲೆ ಆಸೆ ಪಟ್ಟಿದ್ದರು ಎಂದ ಶಕೀಲಾ, ವೈರಲ್ ಆದ ಕಾಮೆಂಟ್ಸ್……!

ಸಿನಿರಂಗದಲ್ಲಿ ಶೃಂಗಾರ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ನಟಿ ಶಕೀಲಾ ಇದೀಗ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಮಲಯಾಳಂ ನ ಅನೇಕ ಮಾದಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡ ಶಕೀಲಾ ಒಂದು ಕಾಲದಲ್ಲಿ ಅಡಲ್ಟ್ ಸಿನೆಮಾಗಳಲ್ಲಿ ಸಹ ಹೆಚ್ಚಾಗಿ ನಟಿಸಿದ್ದು, ಇದೀಗ ಕೆಲವೊಂದು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ನಿರ್ದೇಶಕ ತೇಜ ಜಯಂ, ನಿಜಂ ಸಿನೆಮಾಗಳಲ್ಲಿ ಅವಕಾಶ ನೀಡಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಂಡರು.

ಇತ್ತೀಚಿಗೆ ಶಕೀಲಾ ಬಿಗ್ ಬಾಸ್ ಹೌಸ್ ಗೂ ಸಹ ಎಂಟ್ರಿ ಕೊಟ್ಟಿದ್ದರು. ಸ್ಟಾರ್‍ ನಟ ನಾಗಾರ್ಜುನ್ ಹೋಸ್ಟ್ ಮಾಡುವಂತಹ ಬಿಗ್ ಬಾಸ್ ಸೀಸನ್ 7 ತೆಲುಗು ವರ್ಷನ್ ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಆದರೆ ಆಕೆ ಎರಡನೇ ವಾರದಲ್ಲೇ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದರು. ಇನ್ನೂ ನಟಿ ಶಕೀಲಾ ಸದಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿರುತ್ತಾರೆ. ಶಕೀಲ ಅನೇಕ ಸಿನೆಮಾಗಳಲ್ಲಿ ಅಶ್ಲೀಲವಾದ ಪಾತ್ರಗಳನ್ನು ಮಾಡಿದ್ದರು. ಅದರಿಂದ ಆಕೆ ತುಂಬಾನೆ ಕಿರುಕುಳಕ್ಕೆ ಗುರಿಯಾಗಿದ್ದರು ಎಂದು ಈ ಹಿಂದೆ ಆಕೆ ಹೇಳಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ವಿಚಿತ್ರ ಎಂಬ ನಟಿಯೊಬ್ಬರು ಸ್ಟಾರ್‍ ಹಿರೋ ಒಬ್ಬರು ನನ್ನನ್ನು ರೂಂ ಗೆ ಕರೆದಿದ್ದ, ಕಿರುಕುಳ ನೀಡಿದ್ದ ಎಂದು ಆರೋಪ ಮಾಡಿದ್ದರು. ಈ ಬಗ್ಗೆ ಇದೀಗ ಶಕೀಲಾ ರಿಯಾಕ್ಟ್ ಆಗಿದ್ದಾರೆ. ವಿಚಿತ್ರ ನಾನು ಸ್ನೇಹಿತರು. ಇಬ್ಬರೂ ಅನೇಕ ಸಿನೆಮಾಗಳಲ್ಲಿ ನಟಿಸಿದ್ದೇವೆ. ಆದರೆ ಆಕೆಗೆ ಕಿರುಕುಳ ನೀಡಿದ್ದು ಯಾರು ಎಂಬ ವಿಚಾರ ಸಹ ಆಕೆ ಹೊರ ಹಾಕಿದ್ದರೇ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಇನ್ನೂ ನನಗೂ ಸಹ ಅಂತಹ ಅನುಭವ ಎದುರಾಗಿತ್ತು ಎಂದು ಹೇಳಿದ ಆಕೆ ಆತನ ಹೆಸರನ್ನು ನೇರವಾಗಿ ನಿರ್ಭಯವಾಗಿ ಹೇಳಿದ್ದಾರೆ. ನಟಿ ಶಕೀಲಾಗೆ ಸ್ಟಾರ್‍ ನಿರ್ದೇಶಕ ಇವಿವಿ ಸತ್ಯನಾರಾಯಣ ರವರು ರೂಂಗೆ ಬರೋಕೆ ಹೇಳಿದ್ದರಂತೆ. ಈ ಕುರಿತು ಶಕೀಲಾ ಮಾತನಾಡಿದ್ದು, ನಾನು ಇವಿವಿ ಯವರ ನಿರ್ದೆಶನದಲ್ಲಿ ಸಿನೆಮಾದಲ್ಲಿ ನಟಿಸಿದ್ದೆ. ಆ ಸಮಯದಲ್ಲಿ ಆತ ನನಗೆ ಅಡ್ಜಸ್ಟ್ ಮೆಂಟ್ ಕೇಳಿದ್ದರು. ನೀನು ನನ್ನೊಂದಿಗೆ ಅಡ್ಜೆಸ್ಟ್ ಆಗು, ನನ್ನ ರೂಂಗೆ ಬಾ ಎಂದು ಕರೆದಿದ್ದರು. ನೀನು ಆ ರೀತಿ ಮಾಡಿದರೇ ನನ್ನ ಮುಂದಿನ ಸಿನೆಮಾದಲ್ಲೂ ನಿನಗೆ ಅವಕಾಶ ನೀಡುತ್ತೇನೆ ಹೇಳಿದ್ದರಂತೆ. ಅದಕ್ಕೆ ಆಕೆ ಸರ್‍ ಈ ಸಿನೆಮಾದಲ್ಲಿ ನಟಿಸಿದ್ದಕ್ಕೆ ನನಗೆ ಸಂಭಾವನೆ ಬಂದಿದೆ. ಮುಂದಿನ ಸಿನೆಮಾದಲ್ಲಿ ನನಗೆ ಅವಕಾಶ ಬೇಡ. ಏಕೆಂದರೇ ನನಗೆ ಆ ಅವಶ್ಯಕತೆ ಇಲ್ಲ ಎಂದು ಮುಖದ ಮೇಲೆಯೇ ಹೇಳಿದ್ದಾರೆ ಎಂದು ಶಕೀಲಾ ಈ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.

Most Popular

To Top