Film News

ಸರಳವಾಗಿ ಮದುವೆಯಾಗಲಿದ್ದಾರಂತೆ ಪೂಜಾ ಗಾಂಧಿ, ಕನ್ನಡ ಹುಡುಗನ್ನು ವರಿಸಲಿದ್ದಾರೆ ಮಳೆ ಹುಡುಗಿ…..!

ಸ್ಯಾಂಡಲ್ ವುಡ್ ನಲ್ಲಿ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಪೂಜಾ ಗಾಂಧಿ ಸಹ ಒಬ್ಬರಾಗಿದ್ದಾರೆ. ಮುಂಗಾರು ಮಳೆ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡ ಈಕೆಯನ್ನು ಮಳೆ ಹುಡುಗಿ ಎಂತಲೇ ಕರೆಯಲು ಶುರು ಮಾಡಿದರು. ಇನ್ನೂ ಸೌತ್ ಸಿನಿರಂಗದಲ್ಲಿ 50 ಕೋಟಿ ಬಾಚಿದ ಮೊದಲ ಸಿನೆಮಾ ಎಂದು ಪ್ರಖ್ಯಾತಿಗೂ ಸಹ ಮುಂಗಾರು ಮಳೆ ಪಾತ್ರವಾಗಿದೆ. ಈ ಸಿನೆಮಾದ ಮೂಲಕ ಪೂಜಾಗಾಂಧಿಯ ದಿಕ್ಕು ಬದಲಾಯಿತು ಎಂದೂ ಸಹ ಹೇಳಬಹುದು. ಇದೀಗ ಆಕೆ ನ.29 ರಂದು ಸರಳವಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದ್ದು, ವೈರಲ್ ಆಗುತ್ತಿದೆ.

ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಸಕ್ರೀಯರಾಗಿರುವ ಪೂಜಾ ಗಾಂಧಿ ಮದುವೆ ವಯಸ್ಸಾದರೂ ಸಹ ಇನ್ನೂ ಮದುವೆಯಾಗಿಲ್ಲ ಎಂದು ಹೇಳಬಹುದಾಗಿದೆ. ಆಕೆಯ ಮದುವೆಯ ಬಗ್ಗೆ ಅನೇಕ ಬಾರಿ ಅಭಿಮಾನಿಗಳಿಂದ ಪ್ರಶ್ನೆಗಳೂ ಸಹ ಕೇಳಿಬಂದಿತ್ತು. ಇದೀಗ ಪೂಜಾ ಗಾಂಧಿಯವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂದು ಹೇಳಲಾಗುತ್ತಿದೆ. ನ.29 ರಂದು ಪೂಜಾ ಗಾಂಧಿ ಸರಳವಾಗಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ಪೂಜಾ ಗಾಂಧಿಯ ಮದುವೆ ಸಂಭ್ರಮ ನೆರವೇರಲಿದೆಯಂತೆ. ಆಕೆ ಉದ್ಯಮಿಯೊಬ್ಬರ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಲಾಜಿಸ್ಟಿಕ್ ಕಂಪನಿಯ ಮಾಲೀಕ ವಿಜಯ್ ಎಂಬಾತನೊಂದಿ‌ಗೆ ಪೂಜಾ ಗಾಂಧಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಕೆಲವು ವರ್ಷಗಳಿಂದ ವಿಜಯ್ ಹಾಗೂ ನಟಿ ಪೂಜಾ ಗಾಂಧಿ ಪ್ರೀತಿಸಿಕೊಳ್ಳುತ್ತಿದ್ದಾರಂತೆ. ಈಗ ಇಬ್ಬರೂ ಮದುವೆಯಾಗುತ್ತಿದ್ದಾರೆ. ನಟಿ ಪೂಜಾ ಗಾಂಧಿ ಮೂಲತಃ ಉತ್ತರ ಪ್ರದೇಶದವರಾಗಿದ್ದಾರೆ. ಅವರ ಮಾತೃ ಭಾಷೆ ಹಿಂದಿಯಾಗಿತ್ತು. ಆದರೆ ಆಕೆ ಮಾತ್ರ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಕಂಡುಕೊಂಡಿದ್ದಾರೆ. ಪೂಜಾ ಗಾಂಧಿಯವರಿಗೆ ವಿಜಯ್ ರವೇ ಕನ್ನಡ ಕಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡ ಭಾಷೆಯನ್ನು ಕಲಿತು ಕನ್ನಡ ಸಿನಿರಂಗದಲ್ಲಿ ಫೇಂ ಪಡೆದುಕೊಂಡ ಪೂಜಾ ಗಾಂಧಿ ಇದೀಗ ಕರ್ನಾಟಕದ ಸೊಸೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಗಾರು ಮಳೆ ಎಂಬ ಬ್ಲಾಕ್ ಬ್ಲಸ್ಟರ್‍ ಹಿಟ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಈ ಹಿಂದೆ 2012 ರಲ್ಲಿ ಪೂಜಾಗಾಂಧಿ ಹಾಗೂ ಉದ್ಯಮಿ ಆನಂದ್ ಗೌಡ ರವರ ಎಂಗೇಜ್ ಮೆಂಟ್ ಸಹ ಆಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಆ ಮದುವೆ ಮುರಿದುಬಿದಿತ್ತು. ಇದೀಗ ಉದ್ಯಮಿ ವಿಜಯ್ ಜೊತೆಗೆ ಪೂಜಾ ಗಾಂಧಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಘೋಷಣೆಯಾಗಬೇಕಿದೆ.

Most Popular

To Top