Film News

ಸೀನಿಯರ್ ನಟಿ ಸನಾ ಬೇಗಂ ಸಂಚನಾತ್ಮಕ ಕಾಮೆಂಟ್ ಗಳು, ನನ್ನ ಮಗಳನ್ನು ಕರೆದುಕೊಂಡು ಹೋಗಿ ಹಿಂಸೆ ನೀಡಿದ್ದರು ಎಂದ ನಟಿ….!

ಸಿನೆಮಾಗಳ ಮೂಲಕ ದೊಡ್ಡ ಪರದೆಯ ಮೇಲೆ ರಂಜಿಸುವಂತಹ ಅನೇಕ ಕಲಾವಿದರ ನಿಜ ಜೀವನದಲ್ಲಿ ಅನೇಕ ಸಮಸ್ಯೆಗಳಿರುತ್ತವೆ. ಆದರೆ ತೆರೆಯ ಮೇಲೆ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ತನ್ನ ನಿಜ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು, ನೋವುಗಳನ್ನು ಅನುಭವಿಸಿದ್ದಾಗಿ ಟಾಲಿವುಡ್ ಸೀನಿಯರ್‍ ನಟಿ ಸನಾ ಬೇಗಂ ಸಂದರ್ಶನವೊಂದಲ್ಲಿ ತಿಳಿಸಿದ್ದಾರೆ. 50 ರ ವಯಸ್ಸಿನಲ್ಲೂ ಸಹ ಸನಾ ಬೇಗಂ ಸುಂದರವಾಗಿದ್ದು, ಹಿರೋ ಹಾಗೂ ಹಿರೋಯಿನ್ ಗಳಿಗೆ ತಾಯಿಯಂತಹ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಅನೇಕ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ರೋಲ್ಸ್ ನಲ್ಲಿ ಕಾಣಿಸಿಕೊಂಡ ಸನಾ ಬೇಗಂ ಇತ್ತೀಚಿಗೆ ತೆರೆಕಂಡ ಕೃಷ್ಣವಂಶಿ ನಿರ್ದೇಶನದ ರಂಗಮಾರ್ತಾಂಡ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ತಮ್ಮ ಕರಿಯರ್‍ ಹಾಗೂ ವೈಯುಕ್ತಿಕ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆ ಮಾತನಾಡುತ್ತಾ ಮಾಡಲಿಂಗ್ ಮೂಲಕ ನಾನು ಕೆರಿಯರ್‍ ಪ್ರಾರಂಭಿಸಿ, ಕೆಲವೊಂದು ಜಾಹಿರಾತುಗಳಲ್ಲಿ ನಟಿಸಿದ್ದೆ. ಸಿನೆಮಾಗಳಲ್ಲಿ ಅವಕಾಶಗಳು ಬರುವ ಸಮಯದಲ್ಲೇ ನನಗೆ ಮದುವೆಯಾಗಿತ್ತು. ನಮ್ಮ ತಂದೆ ತಾಯಿಯವರು ಚಿಕ್ಕ ವಯಸ್ಸಿನಲ್ಲೆ ನನಗೆ ಮದುವೆ ಮಾಡಿದರು. ಆದರೆ ನಮ್ಮ ಅತ್ತೆ ಮಾವ ರವರು ನನಗೆ ಒಳ್ಳೆಯ ಬೆಂಬಲ ನೀಡಿದರು. ಬಳಿಕ ಹಿರೋಯಿನ್ ಆಗಿ ಅವಕಾಶಗಳೂ ಸಹ ಬಂದವು. ಆದರೆ ಆಗ ಎದುರಾದ ಕೆಲವೊಂದು ಪರಿಸ್ಥಿತಿಗಳು ನನಗೆ ಇಷ್ಟವಾಗಿಲ್ಲ. ಹಿರೋಯಿನ್ ಆಗಲು ಸ್ವಿಮ್ ಸ್ಯೂಟ್ ಧರಿಸಬೇಕು, ತುಂಬಾ ಎಕ್ಸ್ ಪೋಸ್ ಮಾಡಬೇಕು ಎಂದು ಹೇಳಿದರು. ಜೊತೆಗೆ ಮದುವೆ, ಮಕ್ಕಳ ಬಗ್ಗೆ ಸಹ ಎಲ್ಲೂ ಹೇಳಬಾರದು ಎಂದು ಹೇಳಿದ್ದರು. ಈ ಕಾರಣದಿಂದ ನಾನು ಹಿರೋಯಿನ್ ಆಫರ್‍ ಗಳನ್ನು ನಿರಾಕರಿಸಿದೆ.

ಕನ್ನಡ ಸಿನಿರಂಗದಲ್ಲೂ ಸಹ ನಾನು ಅನೇಕ ಅವಮಾನಗಳನ್ನು ಎದುರಿಸಿದ್ದೇನೆ. ಲಾಕ್ ಡೌನ್ ಸಮಯದಲ್ಲಿ ಆರ್‍.ಜಿ.ವಿ ಯವರ ವೆಬ್ ಸಿರೀಸ್ ಸಮಯದಲ್ಲಿ ನನ್ನ ಕೈಗೆ ಪೆಟ್ಟಾಗಿತ್ತು. ಇದರಿಂಗಾಗಿ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಂಡೆ. ಮುಂದುವರೆದು ಆಕೆ ತನ್ನ ಮಗಳ ಬಗ್ಗೆ ಸಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮಗಳ ವಿಚಾರದಲ್ಲಿ ನನಗೆ ಸದಾ ನೋವುಗಳು ಇರುತ್ತವೆ. ನನ್ನ ಮಗಳಿಗೆ ಮದುವೆಯಾದ ಬಳಿಕ ಆಕೆ ನರಕ ಅನುಭವಿಸಿದ್ದಾರೆ. ಆಕೆಯನ್ನು ತನ್ನ ಗಂಡನ ಕುಟುಂಬದವರು ದುಬೈಗೆ ಕರೆದುಕೊಂಡು ಹೋದರು. ಅಲ್ಲಿ ಕನಿಷ್ಟ ಆಹಾರ ಸಹ ನೀಡದೇ ಹಿಂಸೆ ನೀಡಿದರು. ಆದರೆ ಯಾವತ್ತೂ ಸಹ ನನ್ನ ಮಗಳು ಆ ಕಷ್ಟಗಳನ್ನು ಹೇಳಿರಲಿಲ್ಲ. ನನಗೆ ಒಂದು ಬಾರಿ ಅನುಮಾನ ಬಂದು ಕೇಳಿದರೇ ಆಗ ಸತ್ಯಾಂಶ ಹೊರಬಂತು ಎಂದಿದ್ದಾರೆ.

ಇನ್ನೂ ನನ್ನ ಕೈಯಾರೆ ಅನೇಕ ಮದುವೆಗಳನ್ನು ಮಾಡಿದೆ. ಎಲ್ಲರೂ ಚೆನ್ನಾಗಿದ್ದಾರೆ. ಆದರೆ ನನ್ನ ಮಗಳ ಜೀವನ ಮಾತ್ರ ಈ ರೀತಿಯಾಗಿರುವುದು ತುಂಬಾ ನೋವು ತಂದಿದೆ. ಇನ್ನೂ ನನ್ನ ಮಗಳು ವಿಚ್ಚೇದನ ಪಡೆದುಕೊಂಡಿದ್ದಾರೆ. ಆ ಡಿಪ್ರೆಷನ್ ನಿಂದ ಹೊರಬಂದು ಯೂಟ್ಯೂಬ್ ಚಾನಲ್ ನಡೆಸುತ್ತಿದ್ದಾರೆ. ಐದು ವರ್ಷದ ಮಗನನ್ನು ನೋಡಿಕೊಳ್ಳುತ್ತಾ ಜೀವನ ಸಾಗಿಸುತ್ತಿದ್ದಾಳೆ ಎಂದು ಸನಾ ಬೇಗಂ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆ ಸಂದರ್ಶನದ ಹೇಳಿಕೆಗಳು ವೈರಲ್ ಆಗಿದೆ.

Most Popular

To Top