Film News

ಬಿಕ್ಕಿ ಬಿಕ್ಕಿ ಅತ್ತಾ ನಟಿ ಸದಾ, ನನಗದು ದೊಡ್ಡ ಶಾಕ್, ನನ್ನ ಕೈಯಲ್ಲಿ ಆಗುತ್ತಿಲ್ಲ ಎಂದು ಎಮೋಷನಲ್ ಆದ ನಟಿ…..!

ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ 2002 ರಲ್ಲಿ ತೆರೆಕಂಡ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಮೂಲಕವೇ ಸದಾ ಹಾಗೂ ನಿತಿನ್ ಇಬ್ಬರೂ ದೊಡ್ಡ ಸ್ಟಾರ್‍ ಗಳಾದರು.  ಜಯಂ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಸದಾಗೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಸದ್ಯ ಆಕೆ ಕಿರುತೆರೆಯ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ತೆಲುಗಿನ ಜಯಂ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಸದಾ ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡರು. ಮೊದಲನೇ ಸಿನೆಮಾಗೆ ಆಕೆ ಉತ್ತಮ ನಟಿಯಾಗಿ ಫಿಲಂ ಫೇರ್‍ ಅವಾರ್ಡ್ ಸಹ ಪಡೆದುಕೊಂಡರು.  ಬಳಿಕ ತೆಲುಗು ಸೇರಿದಂತೆ ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಹ ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಆದರೆ ಇತ್ತಿಚಿಗೆ ಆಕೆ ಕಿರುತೆರೆಗೆ ಸೀಮಿತವಾಗಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುವಂತಹ ಕೆಲವೊಂದು ಶೋಗಳಿಗೆ ಆಕೆ ಜಡ್ಜ್ ಆಗಿದ್ದಾರೆ. ಜೊತೆಗೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಯಂಗ್ ನಟಿಯರನ್ನು ನಾಚಿಸುವಂತೆ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ನಟಿ ಸದಾ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆಕೆ ಮುಂಬೈನಲ್ಲಿ ಅರ್ಥ್‌ಲಿಂಗ್ಸ್ ಕೆಫೆ ಎಂಬ ವೆಜ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಈ ಕೆಫೆ ನೋಡಿಕೊಳ್ಳಲು ಆಕೆಗೆ ತುಂಬಾ ತೃಪ್ತಿಯಾಗಿದೆ ಎಂದು ಅನೇಕ ಬಾರಿ ಆಕೆ ಹೇಳಿಕೊಂಡಿದ್ದಾರೆ. ಆದರೆ ಕೆಲವೊಂದು ಕಾರಣಗಳಿಂದ ಆಕೆ ಈ ಕೆಫೆ ಮುಚ್ಚುವ ಪರಿಸ್ಥಿತಿ ಬಂದಿದೆಯೆಂದು ಈ ವಿಚಾರವನ್ನು ಆಕೆ ಕಣ್ಣೀರಾಕುತ್ತಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಕಳೆದ 2019 ಏಪ್ರಿಲ್ 29 ರಂದು ಈ ಕೆಫೆ ಆರಂಭಿಸಿದೆ. ಇದು ನನ್ನ ಮೊದಲನೇ ವ್ಯಾಪಾರ. ಈ ವ್ಯಾಪಾರವನ್ನು ನಾನು ಹೆತ್ತ ಮಗುವಿನಂತೆ ನೋಡಿಕೊಳ್ಳುತ್ತಿದ್ದೇನೆ. ಇನ್ನೂ 2023 ಏಪ್ರಿಲ್ 23 ದಿನ ನನಗೆ ನೋವಿನ ದಿನವಾಗಿದೆ.  ಸ್ಥಳದ ಮಾಲೀಕರು ಪೋನ್ ಮಾಡಿ ಖಾಲಿ ಮಾಡುವಂತೆ ತಿಳಿಸಿದ್ದಾರೆ. ಅದಕ್ಕಾಗಿ ಅವರು ತಿಂಗಳ ಸಮಯ ಸಹ ನೀಡಿದ್ದಾರೆ. ಇದರಿಂದ ನನಗೆ ದೊಡ್ಡ ಶಾಕ್ ಸಿಕ್ಕಿದೆ. ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಸಹ ನನಗೆ ಕಣ್ಣೀರು ನಿಲ್ಲುತ್ತಿಲ್ಲ ಎಂದು ಎಮೋಷನಲ್ ಆಗಿದ್ದಾರೆ.

ಇನ್ನೂ ಕೆಫೆ ಇಡುವುದಕ್ಕೂ ಮುಂಚೆ ಆ ಸ್ಥಳ ಹದೆಗಟ್ಟಿತ್ತು. ಕೋವಿಡ್ ಟೈಂ ನಲ್ಲಿ ದಿನಕ್ಕೆ ನಾನು 12 ಗಂಟೆಗಳ ಕಾಲ ಇಲ್ಲೇ ಇದ್ದು ಕೆಲಸ ಮಾಡಿದ್ದೇನೆ. ಒಂದೂವರೆ ವರ್ಷ ಕಷ್ಟಪಟ್ಟಿದ್ದೇನೆ. ಎಲ್ಲವನ್ನೂ ಪಕ್ಕಕ್ಕಿಟ್ಟು ಇದೇ ನನ್ನ ಪ್ರಪಂಚ ಎಂದು ಬದುಕಿದ್ದೆ. ಲಾಕ್ ಡೌನ್ ಸಮಯದಲ್ಲಿ ವ್ಯಾಪಾರ ಇಲ್ಲದೇ ಇದ್ದರೂ ಸಹ ತಪ್ಪದೇ ತಿಂಗಳಿಗೆ ಬಾಡಿಗೆ ಸಹ ಪೇ ಮಾಡುತ್ತಿದ್ದೆ. ಚೆನ್ನಾಗಿ ಕೆಫೆ ನಡೆಯುತ್ತಿದ್ದಾಗ ಆತ ಖಾಲಿ ಮಾಡಿ ಎಂದು ಹೇಳಿದ್ದಾರೆ. ನಾನು ನನ್ನ ಕೆಫೆ ಬಿಟ್ಟು ಹೋಗಬೇಕು ಎಂದು ಇಲ್ಲ ಎಂದು ಎಮೋಷನಲ್ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋಗೆ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top