Film News

ಮದುವೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ ಸದಾ, ಮದುವೆಯಾದರೇ ಆ ರೀತಿಯಲ್ಲಿ ಬದುಕೊಕೆ ಆಗೊಲ್ವಂತೆ …..!

ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರ ಸಾಲಿಗೆ ನಟಿ ಸದಾ ಸಹ ಸೇರುತ್ತಾರೆ. ಆಕೆ ಜಯಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾಗಾಗಿ ಆಕೆಗೆ ಉತ್ತಮ ನಟಿ ಎಂಬ ಅವಾರ್ಡ್ ಸಹ ದೊರೆತಿದೆ. ಸೌಂದರ್ಯದ ಜೊತೆಗೆ ಅಭಿನಯದಲ್ಲೂ ಸೈ ಎನ್ನಿಸಿಕೊಂಡ ಈಕೆ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಆಕೆ ಮದುವೆಯ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಸದಾ ನಾರ್ತ್ ಮೂಲದ ನಟಿಯಾದರೂ ಸಹ ಹೆಚ್ಚಾಗಿ ಸೌತ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸೌತ್ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ ಈಕೆ ತೆಲುಗಿನ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಿರ್ದಶಕ ತೇಜ ಆಕೆಗೆ ಮೊದಲ ಅವಕಾಶ ನೀಡಿದರು. ಈ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಂಡು ಆಕೆಗೆ ಒಳ್ಳೆಯ ಕ್ರೇಜ್ ಸಹ ದೊರಕಿಸಿಕೊಟ್ಟಿತ್ತು. ಬಳಿಕ ಆಕೆ ಅಪರಿಚಿತುಡು ಎಂಬ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಸದ್ಯ ಸದಾ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಿನೆಮಾಗಳ ಜೊತೆಗೆ ಕಿರುತೆರೆಯ ಕೆಲವೊಂದು ಶೋ ಗಳ ಮೂಲಕ ಆಕೆ ಬ್ಯುಸಿಯಾಗಿದ್ದಾರೆ. ಕರಿಯರ್‍ ದೃಷ್ಟಿಯಲ್ಲಿ ಸದಾ ಬ್ಯುಸಿಯಾಗಿದ್ದರೂ ಸಹ ಆಕೆ ಇನ್ನೂ ಸಿಂಗಲ್ ಆಗಿಯೇ ಜೀವನ ಸಾಗಿಸುತ್ತಿದ್ದಾರೆ. ಇದೀಗ ಆಕೆ ಕಾರ್ಯಕ್ರಮವೊಂದರಲ್ಲಿ ಮದುವೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಸೀನಿಯರ್‍ ನಟಿ ಸದಾ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಿನೆಮಾಗಳು, ವೆಬ್ ಸಿರೀಸ್‌ ಗಳ ಜೊತೆಗೆ ಕಿರುತೆರೆಯ ಕೆಲವೊಂದು ಶೋಗಳಿಗೆ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಆಕೆ ಮದುವೆಯ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಆಕೆಯ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ತಾನು ಇಲ್ಲಿಯವರೆಗೂ ಮದುವೆಯಾಗದೇ ಇರಲು ಕಾರಣ ಬೇರೆ ಏನೂ ಇಲ್ಲ. ಮದುವೆಯಾದರೇ ತನಗಿರುವ ಸ್ವತಂತ್ರ ಹೋಗುತ್ತದೆಯಂತೆ. ಆದ್ದರಿಂದಲೇ ಆಕೆ ಮದುವೆ ಮಾಡಿಕೊಂಡಿಲ್ಲವಂತೆ. ಸಿಂಗಲ್ ಆಗಿಯೇ ಆಕೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರಂತೆ. ಅಷ್ಟೇಅಲ್ಲದೇ ಆಕೆಗೆ ವೈಲ್ಡ್ ಲೈಫ್ ಎಂದರೇ ತುಂಬಾ ಇಷ್ಟವಂತೆ.  ಕಾಡಿಗೆ ತೆರಳಿ ಅಲ್ಲಿನ ಪ್ರಾಣಿಗಳನ್ನು ಪೊಟೋ ತೆಗೆಯುವುದು ತನಗೆ ಇಷ್ಟವಾಗಿದ್ದು, ಮದುವೆಯಾದರು ಇದೆಲ್ಲವೂ ಆಗುವುದಿಲ್ಲ ಎಂದಿದ್ದಾರೆ.

ಅಷ್ಟೇಅಲ್ಲದೇ ಮದುವೆಯಾದ ಅನೇಕರು ವಿಚ್ಚೇದನ ಪಡೆದುಕೊಂಡು ದೂರವಾಗುತ್ತಿದ್ದಾರೆ. ಅಷ್ಟು ಮಾತ್ರಕ್ಕೆ ಮದುವೆಯಾಗುವುದು ಏಕೆ, ವಿಚ್ಚೇದನ ಪಡೆದುಕೊಳ್ಳುವುದಾದರೂ ಏಕೆ. ಈ ಎಲ್ಲಾ ಕಾರಣಗಳಿಂದ ತಾನು ಮದುವೆಗೆ ದೂರವಾಗಿರುವುದಾಗಿ ಆಕೆ ಹೇಳಿದ್ದು, ಈ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

Most Popular

To Top