ಸೂಪರ್ ಸ್ಟಾರ್ ರಜನಿಕಾಂತ್ ರವರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಸೀನಿಯರ್ ನಟಿ ರೋಜಾ, ಆತ ಹಿರೋ ಅಲ್ಲ ಜಿರೋ ಅಂತೆ….!

Follow Us :

ಬಸ್ ಕಂಡಕ್ಟರ್‍ ಆಗಿ ಕೆರಿಯರ್‍ ಆರಂಭಿಸಿ ಇದೀಗ ಕೇವಲ ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ಸ್ಟಾರ್‍ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಬಗ್ಗೆ ಟಾಲಿವುಡ್ ಸೀನಿಯರ್‍ ನಟಿ ಕಂ ರಾಜಕಾರಣಿ ರೋಜಾ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ದೇಶದ ಸಿನಿರಂಗದ ಸ್ಟಾರ್‍ ನಟರಲ್ಲಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ನಟರ ಸಾಲಿನಲ್ಲಿರುವ ರಜನಿಕಾಂತ್ ರವರ ನ್ನು ರಾಜಕಾರಣಿ ಕೋಡಲಿ ನಾನಿ ಅವರು ಹಿರೋ ಅಲ್ಲ ಜಿರೋ ಎಂದು ಕಾಮೆಂಟ್ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ.

ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿ ಸೀನಿಯರ್‍ ಎನ್.ಟಿ.ಆರ್‍ ರವರ ಜಯಂತಿ ಉತ್ಸವ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಲ್ಲಿ ಸೂಪರ ಸ್ಟಾರ್‍ ರಜನಿಕಾಂತ್ ರವರೂ ಸಹ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಮಾಜಿ ಸಿಎಂ ನಾರಾ ಚಂದ್ರಬಾಬು ನಾಯ್ಡು ರವರನ್ನು ಹೊಗಳಿದರು. ಚಂದ್ರಬಾಬು ನನಗೆ ಮೂವತ್ತು ವರ್ಷಗಳಿಂದ ಸ್ನೇಹಿತ, ಮೋಹನ್ ಬಾಬು ರವರು ನನಗೆ ಪರಿಚಯ ಮಾಡಿಕೊಟ್ಟರು. ಚಂದ್ರಬಾಬು ರವರೊಂದಿಗೆ ಮಾತನಾಡುತ್ತಿದ್ದರೇ ನನಗೆ ತುಂಬಾ ಜ್ಞಾನ ಬೆಳೆಯಿತು. ಇಂಡಿಯನ್ ರಾಜಕೀಯ ಮಾತ್ರವಲ್ಲದೇ ಇಡೀ ವಿಶ್ವದ ರಾಜಕೀಯ ಸಹ ಗೊತ್ತು. ಹೈದರಾಬಾದ್ ಅಭಿವೃದ್ದಿ ಕಂಡ ಬಿಲ್ ಗೇಟ್ಸ್ ನಂತವರೇ ಮೆಚ್ಚಿದ್ದಾರೆ.  ಕೆಲವು ದಿನಗಳ ಹಿಂದೆ ಜೂಬ್ಲಿ ಹಿಲ್ಸ್ ಹಾಗೂ ಬಂಜಾರಾ ಹಿಲ್ಸ್ ನೋಡಿ ಅಚ್ಚರಿಯಾಗಿದ್ದೆ. ನಾವು ಇರೋದು ಹೈದರಾಬಾದ್ ನಲ್ಲಾ ಅಥವಾ ವಿದೇಶದಲ್ಲಾ ಎಂದು ಅನ್ನಿಸಿತ್ತು. ಇನ್ನೂ ಮುಂದಿನ ದಿನಗಳಲ್ಲಿ ಚಂದ್ರಬಾಬು ನಾಯ್ಡು ರವರ ವಿಜನ್ ನಿಂದಾಗಿ ದೇಶದಲ್ಲಿ ಆಂಧ್ರಪ್ರದೇಶ ಸ್ಥಾನ ಉನ್ನತ ಶೀಖರಕ್ಕೆ ಹೋಗಲಿದೆ ಎಂದು ಪ್ರಶಂಸೆ ಮಾಡಿದ್ದರು.

ಇದೀಗ ರಜನಿಕಾಂತ್ ರವರ ಕಾಮೆಂಟ್ ಗಳ ಬಗ್ಗೆ ಆಂಧ್ರದ ಕೆಲ ರಾಜಕೀಯ ವ್ಯಕ್ತಿಗಳು ಫೈರ್‍ ಆಗಿದ್ದಾರೆ. ಅವರಲ್ಲಿ ಸೀನಿಯರ ನಟಿ ಕಂ ರಾಜಕಾರಣಿ ರೋಜಾ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಎನ್.ಟಿ.ಆರ್‍ ರವರ ಜಯಂತಿ ಕಾರ್ಯಕ್ರಮದಲ್ಲಿ ರಜನಿಕಾಂತ್ ರವರ ಹೇಳಿಕೆಗಳು ಹಾಸ್ಯಸ್ಪದವಾಗಿದೆ. ಎನ್.ಟಿ.ಆರ್‍ ರವರ ಬೆನ್ನಿಗೆ ಚೂರಿ ಹಾಕಿದ ಚಂದ್ರಬಾಬು ರವರನ್ನು ಹೊಗಳಿರುವುದು ವಿಚಿತ್ರವಾಗಿದೆ. ಸಭೆಗೆ ಕರೆದಿದ್ದಾರೆ ಆ ಕಾರಣದಿಂದ ಚಂದ್ರಬಾಬು ರವರನ್ನು ಹೊಗಳಿದ್ದಾರೆ. ಚಂದ್ರಬಾಬು ರವರು ಅಧಿಕಾರದಲ್ಲಿದ್ದಾಗ ಎನ್.ಟಿಆರ್‍ ರವರಿಗೆ ಭಾರತರತ್ನ ಅವಾರ್ಡ್ ಬಗ್ಗೆ ನೆನಪಿಗೆ ಸಹ ಬರೋಲ್ಲ. ಚಂದ್ರಬಾಬು ರವರು 2013 ರವರೆಗೆ ಮಾತ್ರ ಮುಖ್ಯಮಂತ್ರಿಗಳಾಗಿದ್ದರು. ಅವರಿಲ್ಲದೇ 20 ವರ್ಷಗಳ ಕಾಲ ಹೈದರಾಬಾದ್ ಅಭಿವೃದ್ದಿ ಆಗಿದೆ ಎಂಬುದನ್ನು ರಜನಿಕಾಂತ್ ತಿಳಿದುಕೊಳ್ಳಬೇಕೆಂದು ರೋಜಾ ವಿಮರ್ಶೆ ಮಾಡಿದ್ದಾರೆ.

ಇನ್ನೂ ಮಾಜಿ ಮಂತ್ರಿ ಕೋಡಾಲಿ ನಾನಿ ಸಹ ರಜನಿಕಾಂತ್ ಹೇಳಿಕೆಗಳ ಬಗ್ಗೆ ಫೈರ್‍ ಆಗಿದ್ದಾರೆ. ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಅನ್ನು ಅವರು ಓದಿದ್ದಾರೆ. ರಜನಿಕಾಂತ್ ಈ ಮಟ್ಟಿಗೆ ಹೋಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಎನ್.ಟಿ.ಆರ್‍ ರವರ ಮರಣಕ್ಕೆ ಕಾರಣರಾದವರನ್ನೆ ಇಂದು ಹೊಗಳುತ್ತಾ ರಾಜಕೀಯ ಮಾಡುತ್ತಿದ್ದಾರೆ. ರಜನಿಕಾಂತ್ ಹಿರೋ ಅಲ್ಲ ಜಿರೋ ಎಂದು ಫೈರ್‍ ಆಗಿದ್ದಾರೆ. ಜೊತೆಗೆ ಪವನ್ ಕಲ್ಯಾಣ್ ರವರನ್ನು ಭಯಪಡಿಸಲು ರಜನಿಕಾಂತ್ ರವರನ್ನು ಕರೆತಂದಿದ್ದಾರೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.