Film News

ಸೀರೆಯನ್ನುಟ್ಟು ಟಾಪ್ ಗ್ಲಾಮರ್ ಮೂಲಕ ಮೈಂಡ್ ಬ್ಲಾಕ್ ಮಾಡುತ್ತಿರುವ ಸೀನಿಯರ್ ನಟಿ ರಮ್ಯಾಕೃಷ್ಣ…..!

ದಕ್ಷಿಣ ಭಾರತದ ಸಿನೆಮಾಗಳಲ್ಲಿ ಟಾಪ್ ತಾರೆಯರಲ್ಲಿ ರಮ್ಯಕೃಷ್ಣಾ ಸಹ ಒಬ್ಬರಾಗಿದ್ದರು. ಗ್ಲಾಮರಸ್ ಕ್ವೀನ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನೂ ನಿರ್ದೇಶಕ ಕೃಷ್ಣವಂಶಿಯವರನ್ನು ಮದುವೆಯಾದ ಬಳಿಕ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು. ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಈಕೆ ಸೌತ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಜೊತೆಗೆ ಕಿರುತೆರೆಯಲ್ಲೂ ಸಹ ಕೆಲವೊಂದು ಶೋಗಳ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ನಟಿ ರಮ್ಯಕೃಷ್ಣಾ ಒಂದು ಕಾಲದಲ್ಲಿ ಗ್ಲಾಮರ್‍ ಗೆ ಕೇರಾಫ್ ಅಡ್ರಸ್ ಎಂದು ಹೇಳಲಾಗುತ್ತಿತ್ತು. ಇದೀಗ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಕೆಲವು ಡ್ಯಾನ್ಸ್ ಶೋಗಳಿಗೆ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಇನ್ನೂ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ರವರ ಒಟಿಟಿ ವೇದಿಕೆ ಆಹಾ ನಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಐಕಾನ್ ಶೋನಲ್ಲೂ ಸಹ ರಮ್ಯಕೃಷ್ಣಾ ಜಡ್ಜ್ ಆಗಿದ್ದಾರೆ. ಈ ಶೋ ಮೂಲಕ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸುತ್ತಿದ್ದಾರೆ. ಈ ಶೋನಲ್ಲಿ ಆಕೆ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ಅಭಿಮಾನಿಗಳನ್ನು ಹಾಗೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇನ್ನೂ ಈ ಶೋಗಾಗಿ ಆಕೆ ಅನೇಕ ಪೊಟೋಶೂಟ್ಸ್ ಗಳನ್ನು ಮಾಡುತ್ತಾ ಯಂಗ್ ನಟಿಯರಿಗೆ ಪೈಪೋಟಿ ನೀಡುತ್ತಿರುತ್ತಾರೆ.

ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ. ಈ ಪೊಟೋಗಳಲ್ಲಿ ಆಕೆ ಮೆರೂನ್ ಕಲರ್‍ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಗೆ ವಯಸ್ಸು 50 ಆದರೂ ಸಹ ಯಂಗ್ ನಟಿಯರನ್ನೂ ಸಹ ನಾಚಿಸುವಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆ ಮತ್ತೇರಿಸುವಂತಹ ಪೋಸ್ ಮೂಲಕ ಯುವಕರನ್ನು ಮಸ್ಮರೈಜ್ ಮಾಡುತ್ತಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಟಾಪ್ ಗ್ಲಾಮರ್‍ ಶೋ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ. ಇನ್ನೂ ಆಕೆಯ ಈ ಮಾದಕತೆಯ ಪೊಟೋಗಳನ್ನು ನೋಡಿ ಫಿದಾ ಆದ ಅಭಿಮಾನಿಗಳು ಹಾಟ್ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ.

ಇನ್ನೂ ರಮ್ಯಕೃಷ್ಣಾ ಸೆಕೆಂಡ್ ಇನ್ನೀಂಗ್ಸ್ ನಲ್ಲೂ ಸಹ ಅನೇಕ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಾಹುಬಲಿ ಸೀರಿಸ್ ಮೂಲಕ ಆಕೆಯ ಕ್ರೇಜ್ ಮತಷ್ಟು ಏರಿತ್ತು. ಆಕೆ ಕೊನೆಯದಾಗಿ ಪೂರಿ ಜಗನ್ನಾಧ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಮೂಡಿಬಂದ ಲೈಗರ್‍ ಸಿನೆಮಾದಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Most Popular

To Top