ಆರ್.ಆರ್.ಆರ್ ಸಿನೆಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಗಣ್ಯರಿಂದ ಪ್ರಶಂಸೆಗಳ ಸುರಿಮಳೆ….!

Follow Us :

ಇಡೀ ವಿಶ್ವದಲ್ಲೇ ದೊಡ್ಡ ಮಟ್ಟದಲ್ಲಿ ರೆಕಾರ್ಡ್‌ಗಳನ್ನು ಸೃಷ್ಟಿಸಿರುವ RRR ಸಿನೆಮಾದ ಖಾತೆಗೆ ಮತ್ತೊಂದು ಪ್ರಶಸ್ತಿ ಸಿಕ್ಕಿದೆ. ಎರಡು ವಿಭಾಗಗಳಲ್ಲಿ ಆರ್‍.ಆರ್‍.ಆರ್‍ ಸಿನೆಮಾ ನಾಮಿನೇಟ್ ಆಗಿತ್ತು. ಇದರಲ್ಲಿ ನಾಟು ನಾಟು ಹಾಡಿಗೆ ವಿಶ್ವ ಮಟ್ಟದ ಪ್ರಶಸ್ತಿ ದೊರೆತಿದೆ. ಈಗಾಗಲೇ ಈ ಸಿನೆಮಾ ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದು, ಇದೀಗ ಜಾಗತಿಕ ಮಟ್ಟದ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿದ್ದು, ಸಿನೆಮಾ ಗಣ್ಯರು ಸೇರಿದಂತೆ ಅನೇಕರು ಶುಭಾಷಯಗಳನ್ನು ಕೋರಿದ್ದಾರೆ.

ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿದ ಬಂದ ಆರ್‍.ಆರ್‍.ಆರ್‍ ಸಿನೆಮಾ ಸದ್ಯ ಆಸ್ಕರ್‍ ರೇಸ್ ನಲ್ಲಿದೆ. ಇದೀಗ ಈ ಸಿನೆಮಾಗೆ ಜಾಗತಿಕ ಮಟ್ಟದ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿದೆ. ಸಿನೆಮಾದಲ್ಲಿನ ನಾಟು ನಾಟು ಹಾಡಿಗೆ ಈ ಅವಾರ್ಡ್ ದೊರೆತಿದೆ. ನಾಟು ನಾಟು ಹಾಡಿಗೆ ಅವಾರ್ಡ್ ಲಭಿಸಿದ್ದು, ಅತ್ಯುತ್ತಮ ಇಂಗ್ಲೀಷ್ ಯೇತರ ಸಿನೆಮಾ ಅವಾರ್ಡ್ ಕೈ ತಪ್ಪಿದೆ. ಅನೇಕ ಅಂತರಾಷ್ಟ್ರೀಯ ಅವಾರ್ಡ್‌ಗಳು RRR ಸಿನೆಮಾದ ತೆಕ್ಕೆಗೆ ಸೇರುತ್ತಿವೆ. ಲಾಸ್ ಏಂಜಿಲ್ಸ್ ನಲ್ಲಿ ನಡೆದ ಗೋಲ್ಡನ್ ಗ್ಲೋಬ್ ಅವಾರ್ಡ್ ಕಾರ್ಯಕ್ರಮದಲ್ಲಿ RRR ಯೂನಿಟ್ ಹಾಜರಾಗಿತ್ತು.ಇನ್ನೂ ಅವಾರ್ಡ್ ಘೋಷಣೆಯಾಗುತ್ತಿದ್ದಂತೆ ರಾಜಮೌಳಿ, ರಾಮಚರಣ್, ಎನ್.ಟಿ.ಆರ್‍ ಕುಣಿದು ಕುಪ್ಪಳಿಸಿದರು. ಇನ್ನೂ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಸಂತೋಷದಲ್ಲಿ ಏನು ಮಾಡಬೇಕು ಎಂಬುದೂ ಸಹ ತಿಳಿಯದೇ ಗೊಂದಲದಲ್ಲಿ ಕಂಡರು. ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಆರ್‍.ಆರ್‍.ಆರ್‍ ಯೂನಿಟ್ ಹಂಚಿಕೊಂಡಿದೆ.

ಇನ್ನೂ ಆರ್‍.ಆರ್‍.ಆರ್‍ ಸಿನೆಮಾದಿಂದ ನಾಟು ನಾಟು ಹಾಡು ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದುಕೊಂಡ ಸುದ್ದಿ ಹೊರಬರುತ್ತಿದ್ದಂತೆ, ಸಿನೆಮಾ ಗಣ್ಯರು ಸೇರಿದಂತೆ ಅನೇಕ ಸ್ಟಾರ್‍ ಗಳು ಸೋಷಿಯಲ್ ಮಿಡಿಯಾದ ಮೂಲಕ ಶುಭಾಷಯಗಳನ್ನು ಸಹ ತಿಳಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೂ ಸಹ ಟ್ವೀಟ್ ಮೂಲಕ ಶುಭಾಷಯಗಳನ್ನು ಕೋರಿದ್ದು, ಅವರ ಟ್ವೀಟ್ ಅನ್ನು ಆರ್‍.ಆರ್‍.ಆರ್‍ ತಂಡ ಸಹ ರೀ-ಟ್ವೀಟ್ ಮಾಡಿ ಧನ್ಯವಾದಗಳನ್ನು ತಿಳಿಸಿದೆ. ಅದರಂತೆ ಮೆಗಾಸ್ಟಾರ್‍ ಚಿರಂಜೀವಿ, ಪವನ್ ಕಲ್ಯಾಣ್, ನಂದಮೂರಿ ಬಾಲಕೃಷ್ಣ, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಸಹ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಇನ್ನೂ ಆರ್‍.ಆರ್‍.ಆರ್‍ ಸಿನೆಮಾ ಆಸ್ಕರ್‍ ರೇಸ್ ನಲ್ಲೂ ಸಹ ಇದೆ. ಕನಿಷ್ಟ ಒಂದು ವಿಭಾಗದಲ್ಲಾದರೂ ಆರ್‍.ಆರ್‍.ಆರ್‍ ಸಿನೆಮಾ ನಾಮಿನೇಟ್ ಆಗುವ ಸಾದ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜಮೌಳಿ, ಸಂಗೀತ ನಿರ್ದೇಶಕ ಕೀರವಾಣಿ, ಜೂನಿಯರ್‍ ಎನ್.ಟಿ.ಆರ್‍, ರಾಮ್ ಚರಣ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.