Film News

ಜೂನಿಯರ್ ಎನ್.ಟಿ.ಆರ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ನಟಿ ರಂಭ, ವೈರಲ್ ಆದ ಕಾಮೆಂಟ್ಸ್……!

ವರ್ಷಗಳ ಹಿಂದೆ ದಕ್ಷಿಣ ಭಾರತದ ಅನೇಕ ಸಿನೆಮಾಗಳಲ್ಲಿ ನಟಿಸಿ ಸ್ಟಾರ್‍ ನಟಿಯಾಗಿ ಖ್ಯಾತಿ ಪಡೆದವರಲ್ಲಿ ರಂಭಾ ಸಹ ಒಬ್ಬರಾಗಿದ್ದಾರೆ. ಆಕೆಗೆ ವಯಸ್ಸು 46 ಆದರೂ ಇನ್ನೂ ಹದಿಹರೆಯದ ಯುವತಿಯಂತೆ ಕಾಣಿಸುತ್ತಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಸಿನಿರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಚಾಪು ಮೂಡಿಸಿದಂತಹ ನಟಿ ರಂಭಾ. ಇಂದಿಗೂ ಸಹ ಅದೇ ರೀತಿಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಸ್ಟಾರ್‍ ನಟರ ಜೊತೆಗೆ ನಟಿಸಿ ತನ್ನದೇ ಆದ ಖ್ಯಾತಿ ಪಡೆದುಕೊಂಡ ರಂಭ ಇದೀಗ ಜೂನಿಯರ್‍ ಎನ್.ಟಿ.ಆರ್‍ ರವರ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ರಂಭ ಟಾಲಿವುಡ್ ನಲ್ಲಿ ಅಲ್ಲುಡಾ ಮಜಾಕಾ, ಬಾವಗಾರು ಬಾಗುನ್ನಾರಾ, ಅಲ್ಲರಿ ಪ್ರೇಮಿಕುಡು, ಭೈರವದ್ವೀಪಂ, ಬೊಂಬಾಯಿ ಪ್ರಿಯುಡು ಸೇರಿದಂತೆ ಅನೇಕ ಹಿಟ್ ಸಿನೆಮಾಗಳಲ್ಲಿ ಆಕೆ ನಟಿಸಿ ಭಾರಿ ಕ್ರೇಜ್ ಪಡೆದುಕೊಂಡಿದ್ದರು. ಮೆಗಾಸ್ಟಾರ್‍ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ರವರಂತಹ ಸ್ಟಾರ್‍ ಹಿರೋಗಳ ಜೊತೆಗೆ ನಟಿಸಿ ಸ್ಟಾರ್‍ ಡಂ ಪಡೆದುಕೊಂಡಿದ್ದರು. ಸದ್ಯ ಸಿನೆಮಾಗಳಿಂದ ದೂರ ಇರುವ ರಂಭಾ ತನ್ನ ಕುಟುಂಬದೊಂದಿಗೆ ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ನೀಡಿದ ಸಂದರ್ಶನವೊಂದರಲ್ಲಿ ಜೂನಿಯರ್‍ ಎನ್.ಟಿ.ಆರ್‍ ರವರ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಸಂದರ್ಶನದಲ್ಲಿ ಈಗಿನ ಹಿರೋಗಳ ಜೊತೆಗೆ ನಟಿಸುವ ಅವಕಾಶ ಬಂದರೇ ಯಾರ ಜೊತೆ ನಟಿಸುತ್ತೀರಾ ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ಆಕೆ ಪ್ರಭಾಸ್, ಮಹೇಶ್ ಬಾಬು ಜೊತೆಗೆ ಇಲ್ಲಿಯವರೆಗೂ ನಟಿಸಿಲ್ಲ. ಅವಕಾಶ ಬಂದರೇ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಬಳಿಕ ತಾನು ನಟಿಸಿದ ಐಟಂ ಸಾಂಗ್ಸ್ ಬಗ್ಗೆ ಸಹ ಮಾತನಾಡುತ್ತಾ, ನನಗೆ ನಾಚೋರೆ ನಾಚೋರೆ ಎಂಬ ಹಾಡು ಎಂದರೇ ತುಂಬಾ ಇಷ್ಟ. ಈ ಹಾಡಿನಲ್ಲಿ ಜೂನಿಯರ್‍ ಎನ್.ಟಿ.ಆರ್‍ ತುಂಬಾ ಕಷ್ಟಪಟ್ಟರೂ ಸಹ ಆ ಕ್ರೆಡಿಟ್ ಸಂಪೂರ್ಣವಾಗಿ ನಾನೆ ತೆಗೆದುಕೊಂಡೆ ಎಂದಿದ್ದಾರೆ. ಬಳಿಕ ನಿಮ್ಮೊಂದಿಗೆ ಡ್ಯಾನ್ಸ್ ಮಾಡಿದವರಲ್ಲಿ ಬೆಸ್ಟ್ ಡ್ಯಾನ್ಸರ್‍ ಯಾರು ಎಂದು ಕೇಳಿದಾಗ ಎನ್.ಟಿ.ಆರ್‍ ಬೆಸ್ಟ್ ಡ್ಯಾನ್ಸರ್‍, ಪ್ರಭುದೇವಾ ಮಾಸ್ಟರ್‍ ಒಳ್ಳೆಯ ಕೊರಿಯೋಗ್ರಾಫರ್‍ ಎಂದಿದ್ದಾರೆ.

ಇನ್ನೂ ಇದೇ ವೇಳೆ ನಟಿ ತ್ರಿಷಾ ಬಗ್ಗೆ ಸಹ ಮಾತನಾಡಿದ್ದಾರೆ. ನನಗೆ ತ್ರಿಷಾ ಎಂದರೇ ತುಂಬಾ ಇಷ್ಟ. ಆಕೆಯೊಂದಿಗೆ ನಾನು ಕೆಲವೊಂದು ಬಾರಿ ಮಾತನಾಡಿದ್ದೇನೆ. ಆಕೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಅನೇಕ ನಟಿಯರು ತಿಳಿದಿದ್ದರೂ ತಿಳಿದಿಲ್ಲ ಎಂಬಂತೆ ವರ್ತನೆ ಮಾಡುತ್ತಾರೆ ಎಂದು ರಂಭ ಹೇಳಿದ್ದಾರೆ. ಇನ್ನೂ ರಂಭ ಕಾಮೆಂಟ್ ಗಳು ಸೋಷಿಯಲ್ ಮಿಡಿಐಆದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

Most Popular

To Top