Film News

ಸ್ಯಾಂಡಲ್ ಹಾಟ್ ಬ್ಯೂಟಿ ಸಂಯುಕ್ತಾ ಹೆಗ್ಡೆ ವೇಶ್ಯೆಯ ಪಾತ್ರದಲ್ಲಿ ನಟಿಸಲಿದ್ದಾರಂತೆ?

ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಹುಡುಗಿ ಎಂದೇ ಕರೆಯಲಾಗುವ ಸಂಯುಕ್ತಾ ಹೆಗಡೆ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಕಿರಿಕ್ ಪಾರ್ಟಿ ಎಂಬ ಸಿನೆಮಾ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಈ ನಟಿ, ಬಳಿಕ ಸಿನೆಮಾಗಳಲ್ಲಿ ಅಷ್ಟು ಜನಪ್ರಿಯತೆ ಪಡೆದುಕೊಳ್ಳಲಿಲ್ಲ. ಸದ್ಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ಆಕೆ ಸಿನೆಮಾ ಒಂದರಲ್ಲಿ ವೇಶ್ಯೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್‍ ಕತೆ ಹಾಗೂ ಸಂಭಾಷಣೆ ಬರೆದಿರುವ ಕ್ರೀಂ ಎಂಬ ಸಿನೆಮಾದಲ್ಲಿ ಸಂಯುಕ್ತಾ ಹೆಗ್ಡೆ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಖ್ಯಾತ ಬರಹಗಾರ ಅಗ್ನಿ ಶ್ರೀಧರ್‍ ಕ್ರೀಂ ಸಿನೆಮಾದ ಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ ಈ ಸಿನೆಮಾ ಕ್ರೈಂ ಜಗತ್ತಿನ ಮತ್ತೊಂದು ಕೋಣವನ್ನು ಅನಾವರಣಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ದಂಡುಪಾಳ್ಯದ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸುವಂತಹ ಕಥೆಯನ್ನು ಈ ಸಿನೆಮಾದ ಮೂಲಕ ತೆರೆ ಮೇಲೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ನಾಯಕಿಯಾಗಿ ಸಂಯುಕ್ತಾ ಹೆಗ್ಡೆ ನಟಿಸುತ್ತಿದ್ದಾರೆ. ದಂಡುಪಾಳ್ಯದ ಗ್ಯಾಂಗ್ ಹೆಸರಿನಲ್ಲಿ ನಡೆದ ಸರಣಿ ಕೊಲೆಗಳ ಹಿಂದೆ ಇರುವಂತಹ ಚರಿತ್ರೆಯನ್ನು ಈ ಸಿನೆಮಾದ ಮೂಲಕ ಹೊರಗಿನ ಪ್ರಪಂಚಕ್ಕೆ ತಿಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಬಗ್ಗೆ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ‌ ಅಗ್ನಿ ಶ್ರೀಧರ್‍ ನಾನು ಈ ಹಿಂದೆಯೇ ದಂಡುಪಾಳ್ಯ ಗ್ಯಾಂಗ್ ಹಿಂದಿನ ಕಥೆಯನ್ನು ಸಿನೆಮಾ ಮೂಲಕ ಹೊರತರಬೇಕು ಎಂದುಕೊಂಡಿದ್ದೆ. ಆ ಸಮಯದಲ್ಲಿ ಕೆಲ ದೊಡ್ಡ ಅಧಿಕಾರಿಗಳು ಆ ಸಿನೆಮಾ ಮಾಡದಂತೆ ನನ್ನನ್ನು ತಡೆದಿದ್ದರು. ಬಳಿಕ ದಂಡುಪಾಳ್ಯ ಹೆಸರಿನಲ್ಲಿ ಸಿನೆಮಾ ಸಹ ಬಂತು. ಆ ಸಿನೆಮಾದಲ್ಲಿ ಕೆಲವು ಕಲ್ಪಿತ ಕಥೆಗಳ ಮೂಲಕ ಕಳ್ಳರ ಗುಂಪನ್ನು ಕೊಲೆಗಡುಕರನ್ನಾಗಿಸಿದ್ದಾರೆ ಎಂಬ ಸಿಟ್ಟು ನನಗೆ ಬಂತು. ಈ ಹಿನ್ನೆಲೆಯಲ್ಲಿ ನಾನು ಕ್ರೀಂ ಎಂಬ ಹೆಸರಿನಲ್ಲಿ ಆ ಕಥೆಯನ್ನು ಹೇಳುವ ಪ್ರಯತ್ನಗಳನ್ನು ಮಾಡಿದ್ದೇನೆ. ಇನ್ನೂ ಈ ಸಿನೆಮಾದಲ್ಲಿ ಬೀದಿ ವೇಶ್ಯೆಯಾಗಿ ಸಂಯುಕ್ತಾ ನಟಿಸಿದ್ದಾರೆ. ಇನ್ನೂ ಸಂಯುಕ್ತಾ ಯಾವ ನಟಿಯೂ ಮಾಡದಂತಹ ಸಾಹಸವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಈ ಸಿನೆಮಾದ ಬಳಿಕ ಅನೇಕ ವಿವಾದಗಳು ಹುಟ್ಟಿಕೊಳ್ಳುತ್ತವೆ. ಆದರೆ ಎಲ್ಲಾ ವಿವಾದಗಳನ್ನು ನಾನು ಎದುರಿಸಲು ಸಿದ್ದವಾಗಿದ್ದೇನೆ ಎಂದು ಅಗ್ನಿ ಶ್ರೀಧರ್‍ ಹೇಳಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ರೋಷನ್ ಶ್ರೀಧರ್‍ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಡಿ.ಕೆ.ದೇವೆಂದ್ರ ನಿರ್ಮಾಣ ಮಾಡುತ್ತಿದ್ದು, ಅಭಿಷೇಕ್ ಬಸಂತ್ ನಿರ್ದೇಶನ ಮಾಡುತ್ತಿದ್ದಾರೆ.

Most Popular

To Top