ಸಲ್ಮಾನ್ ಖಾನ್ ಜೊತೆಗೆ ಅದು ಮಾಡಿದ್ದಕ್ಕೆ ರಜನಿಕಾಂತ್ ರವರಿಗೆ ಕೋಪ ಬಂದಿತ್ತಂತೆ, ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ರಂಭಾ…..!

Follow Us :

ದಕ್ಷಿಣ ಭಾರತದ ಅನೇಕ ಸಿನೆಮಾಗಳಲ್ಲಿ ನಟಿಸಿ ಸ್ಟಾರ್‍ ನಟಿಯಾಗಿ ಖ್ಯಾತಿ ಪಡೆದವರಲ್ಲಿ ರಂಭಾ ಸಹ ಒಬ್ಬರಾಗಿದ್ದಾರೆ. ಆಕೆಗೆ ವಯಸ್ಸು 46 ಆದರೂ ಇನ್ನೂ ಹದಿಹರೆಯದ ಯುವತಿಯಂತೆ ಕಾಣಿಸುತ್ತಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಸಿನಿರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಚಾಪು ಮೂಡಿಸಿದಂತಹ ನಟಿ ರಂಭಾ. ಇಂದಿಗೂ ಸಹ ಅದೇ ರೀತಿಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಸ್ಟಾರ್‍ ನಟರ ಜೊತೆಗೆ ನಟಿಸಿ ತನ್ನದೇ ಆದ ಖ್ಯಾತಿ ಪಡೆದುಕೊಂಡ ರಂಭಾ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ತೆಲುಗಿನ ಸ್ಟಾರ್‍ ನಟ ರಾಜೇಂದ್ರ ಪ್ರಸಾದ್ ರವರ ಆ ಒಕ್ಕಟಿ ಅಡಕ್ಕು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಂಭಾ ಅಲ್ಲುಡಾ ಮಜಾಕಾ, ಬಾವಗಾರು ಬಾಗುನ್ನಾರಾ, ಅಲ್ಲರಿ ಪ್ರೇಮಿಕುಡು, ಭೈರವದ್ವೀಪಂ, ಬೊಂಬಾಯಿ ಪ್ರಿಯುಡು ಸೇರಿದಂತೆ ಅನೇಕ ಹಿಟ್ ಸಿನೆಮಾಗಳಲ್ಲಿ ಆಕೆ ನಟಿಸಿ ಭಾರಿ ಕ್ರೇಜ್ ಪಡೆದುಕೊಂಡಿದ್ದರು. ಮೆಗಾಸ್ಟಾರ್‍ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ರವರಂತಹ ಸ್ಟಾರ್‍ ಹಿರೋಗಳ ಜೊತೆಗೆ ನಟಿಸಿ ಸ್ಟಾರ್‍ ಡಂ ಪಡೆದುಕೊಂಡಿದ್ದರು. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ, ಬೋಜ್ ಪುರಿ, ಬೆಂಗಾಲಿ ಮೊದಲಾದ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದರು. ಜೊತೆಗೆ ಆಕೆ ಹಾಲಿವುಡ್ ಸಿನೆಮಾ ಒಂದರಲ್ಲೂ ಸಹ ನಟಿಸಿದ್ದು, ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವುಳಿದರು ಆದರೆ ಮದುವೆಯ ಬಳಿಕ ರಂಬಾ ಕೆಲವೊಂದು ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ಸ್ ನಲ್ಲಿ ನಟಿಸಿದ್ದರು.

ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಟಿ ರಂಭ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಅರುಣಾಚಲಂ ಸಿನೆಮಾದಲ್ಲಿ ರಜನಿಕಾಂತ್ ರವರ ಆಪ್ತ ಸಹಾಯಕಿಯಾಗಿ ನಟಿಸಿದ್ದರು. ಈ ಸಿಎನಮಾದಲ್ಲಿ ನಟಿಸುತ್ತಿರುವಾಗಲೇ ಆಕೆ ಹಿಂದಿಯಲ್ಲಿ ಸಲ್ಮಾನ್ ಖಾನ್ ರವರ ಜೊತೆಗೆ ಬಂಧನ್ ಎಂಬ ಸಿನೆಮಾದಲ್ಲಿ ಸಹ ನಟಿಸುತ್ತಿದ್ದರು. ಈ ಎರಡೂ ಸಿನೆಮಾಗಳ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿತ್ತು. ಬೆಳಗಿನ ಜಾವ ಅರುಣಾಚಲಂ ಶೂಟಿಂಗ್ ಬಳಿಕ ಮದ್ಯಾಹ್ನ ಬಂಧನ್ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದೆ. ಒಮ್ಮೆ ಸಲ್ಮಾನ್ ಖಾನ್ ಅರುಣಾಚಲಂ ಶೂಟಿಂಗ್ ಸೆಟ್ ಗೆ ಬಂದಿದ್ದರು. ಕೂಡಲೇ ನಾನು ಓಡಿಹೋಗಿ ಸಲ್ಮಾನ್ ರವರನ್ನು ಹಗ್ ಮಾಡಿಕೊಂಡೆ. ಅದನ್ನ ರಜನಿ ಸಾರ್‍ ದೂರದಿಂದ ನೋಡ್ತಾ ಇದ್ದರು. ಬಳಿಕ ಆತ ಟವಲ್ ಅನ್ನು ಎಸೆದು ಸೀರಿಯಸ್ ಆಗಿ ನಿರ್ದೇಶಕರ ಬಳಿ ಮಾತನಾಡಿದ್ದರು. ನಾನು ಏನು ನಡೆಯಿತು ಎಂದು ಕೇಳಿದರೇ ಅಸಲಿ ವಿಷಯ ಹೇಳಿದರು.

ಯಾಕಮ್ಮ ನೀನು ಆ ರೀತಿ ಮಾಡಿದ್ದೀಯಾ, ಇನ್ನು ನಿಮ್ಮೊಂದಿಗೆ ನಟಿಸೊಲ್ಲ ಎಂದು ರಜನಿ ಸಾರ್‍ ಹೇಳ್ತಾ ಇದ್ದಾರೆ ಎಂದು ಕ್ಯಾಮೆರಾಮ್ಯಾನ್ ಹೇಳಿದರು. ಇದರಿಂದ ನಾನು ತುಂಬಾನೆ ಅತ್ತುಬಿಟ್ಟೆ. ಬಳಿಕ ರಜನಿ ಸಾರ್‍ ಬಂದು ನಾನು ಯಾವ ರೀತಿ ಓಡುತ್ತಾ ಸಲ್ಮಾನ್ ಖಾನ್ ರನ್ನು ಹಗ್ ಮಾಡಿಕೊಂಡೆ ಎಂಬುದನ್ನು ಇಮಿಟೇಟ್ ಮಾಡಿ ತೋರಿಸಿದರು. ಬಳಿಕ ನಮ್ಮ ಸಿನೆಮಾ ಸೆಟ್ ನಲ್ಲಾದರೇ ಗುಡ್ ಮಾರ್ನಿಂಗ್ ಹೇಳಿ ಹೋಗುತ್ತಾಳೆ. ಆದರೆ ಹಿಂದಿ ಹಿರೋ ಬಂದರೇ ಹಗ್ ಮಾಡಿಕೊಳ್ಳುತ್ತಾಳೆ ಎಂದು ಫನ್ನಿಯಾಗಿ ಅಳಿಸಿದರು ಎಂದು ರಂಭಾ ಹೇಳಿದ್ದಾರೆ. ಇದೀಗ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.