ಬುದ್ದಿಮಾಂದ್ಯ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಬೆಳಕಿಗೆ ಬಂದ ಘಟನೆ…..!

Follow Us :

ಮಗಳನ್ನು ಕಾಪಾಡುವಂತಹ ತಂದೆಯೇ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಮಾನವೀಯ ಘಟನೆ ಬೆಳಗಾವಿಯ ಬೆಳವಟ್ಟಿ ಎಂಬ ಗ್ರಾಮದಲ್ಲಿ ನಡೆದಿದೆ. ಬುದ್ದಿಮಾಂದ್ಯ ಮಗಲ ಮೇಲೆ ಹೆತ್ತ ತಂದೆಯೇ ನಿರಂತರ ಅತ್ಯಾಚಾರವೆಸಗಿದ್ದಾನೆ. ಆಕೆ ಗರ್ಭಿಣಿಯಾಗಿ ಮಗು ಜನಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಕೆಲವೊಂದು ಕಡೆ ಹೆತ್ತವರು, ತಂದೆ, ಅಣ್ಣ, ತಮ್ಮಂದಿರಿಂದಲೇ ಅತ್ಯಾಚಾರಗಳು ನಡೆಯುತ್ತಿರುತ್ತವೆ. ಅದೇ ಮಾದರಿಯಲ್ಲಿ ಬೆಳಗಾವಿಯ ಬೆಳವಟ್ಟಿ ಎಂಬ ಗ್ರಾಮದಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದಿದೆ. ಬೆಳವಟ್ಟಿ ಗ್ರಾಮದಲ್ಲಿ ತಾಯಿಯಿಲ್ಲದ ಮಾನಸಿಕ ಅಸ್ವಸ್ಥ ಮಗಳನ್ನು ಆಕೆಯ ತಂದೆಯೇ ನಿರಂತರ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಗ್ರಾಮದ ಆಶಾ ಕಾರ್ಯಕರ್ತೆಯರ ಮೂಲಕ ತಪಾಸಣೆ ನಡೆಸಿದಾಗ ಸಂತ್ರಸ್ತೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ.

ಬಳಿಕ ಸರ್ಕಾರೇತರ ಸಂಸ್ಥೆಯೊಂದು 2023 ರ ಫೆಬ್ರವರಿ ಮಾಹೆಯಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಬುದ್ದಿಮಾಂದ್ಯೆಯ ತಂದೆಯ ಮೇಲೆ ಅನುಮಾನಗೊಂಡ ತಂದೆ ಹಾಗೂ ಸಂತ್ರಸ್ತೆಗೆ ಜನಿಸಿದ ಮಗುವಿನ ಡಿ.ಎನ್.ಎ ಪರೀಕ್ಷಿಸಿದ ಬಳಿಕ ತಂದೆಯೇ ಅತ್ಯಾಚಾರ ಮಾಡಿದ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಹ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.