ಒಂದು ತಿಂಗಳ ಕಾಲ ಅಲ್ಲು ಅರ್ಜುನ್ ಹೇಳಿದಂತೆ ಮಡ್ತಾರಂತೆ ಮಂಚು ಲಕ್ಷ್ಮೀ, ಅಲ್ಲು ಅರ್ಜುನ್ ಕೊಟ್ಟ ಟಾಕ್ಸ್ ಸ್ವೀಕರಿಸಿದ ನಟಿ….!

ಟಾಲಿವುಡ್ ಸ್ಟಾರ್‍ ಕಿಡ್ ಮಂಚು ಲಕ್ಷ್ಮೀ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಸಿನೆಮಾಗಳಲ್ಲಿ ಸಕ್ಸಸ್ ಕಾಣಲು ಸದ್ಯ ಆಕೆ ಮುಂಬೈನಲ್ಲಿ ಮೊಕ್ಕಾಂ ಹೂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರು ನೀಡಿದ ಟಾಕ್ಸ್ ನಂತೆ ಒಂದು ತಿಂಗಳು ಇರಲಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಪುಷ್ಪಾ ಸಿನೆಮಾದ ಮೂಲಕ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಇನ್ನೂ ಅಲ್ಲು ಅರ್ಜುನ್ ನೀಡುವಂತಹ ಅಪ್ಡೇಟ್ಸ್ ಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ ಅವರ ಅಭಿಮಾನಿಗಳು. ಸೋಷಿಯಲ್ ಮಿಡಿಯಾದಲ್ಲಿ ಸಹ ಆಕ್ಟೀವ್ ಆಗಿರುವಂತಹ ಅಲ್ಲು ಅರ್ಜುನ್ ತನ್ನ ಅಭಿಮಾನಿಗಳೊಂದಿಗೆ ಕೆಲವೊಂಡು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಅಲ್ಲು ಅರ್ಜುನ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಇಂಟ್ರಸ್ಟಿಂಗ್ ಪೋಸ್ಟ್ ಹಂಚಿಕೊಂಡಿದ್ದಾಋಎ.

ನಟ ಅಲ್ಲು ಅರ್ಜುನ್ ಕಿಡ್ ಮಂಚು ಲಕ್ಷ್ಮೀ ಗೆ ಒಂದು ಟಾಕ್ಸ್ ಕೊಟ್ಟಿದ್ದಾರೆ. ಹೊಸ ವರ್ಷದ ಸಂದರ್ಭವಾಗಿ ನಿನ್ನ ಗೋಲ್ಸ್ ಗಳನ್ನು ಪಬ್ಲಿಕ್ ಜೊತೆಗೆ ಓಪೆನ್ ಆಗಿ ಶೇರ್‍ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಈ ಚಾಲೆಂಜ್ ಮಂಚು ಲಕ್ಷ್ಮೀ ಸ್ವೀಕರಿಸಿದ್ದಾರೆ. ಈ ವಿಚಾರವನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇತ್ತಿಚಿಗೆ ಅಲ್ಲು ಅರ್ಜುನ್ ನನ್ನ ಗೋಲ್ಸ್ ಪಬ್ಲಿಕ್ ಜೊತೆಗೆ ಶೇರ್‍ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ. ನಾನು ಈ ತಿಂಗಳಲ್ಲಿ ರೈಸ್ ಹಾಗೂ ನಾನ್ ವೆಜ್ ಗೆ ದೂರವಾಗಿರಬೇಕು ಎಂದು ಚಾಲೆಂಜ್ ಸ್ವೀಕರಿಸುತ್ತಿದ್ದೇನೆ. ಅವೆರಡು ಇಲಲದೇ ನಾನು ಇರಲಾರೆ, ಅವೆರಡು ನನಗೆ ತುಂಬಾನೆ ಇಷ್ಟ, ಇನ್ನು ಏನಾಗುತ್ತದೆ ನೋಡಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಲ್ಲು ಅರ್ಜುನ್ ಆಲ್ ದಿ ಬೆಸ್ಟ್ ಎಂದು ರಿಪ್ಲೆ ಕೊಟ್ಟಿದ್ದಾರೆ.

ಇನ್ನೂ ಅಲ್ಲು ಅರ್ಜುನ್ ರವರ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಆ.15 ರಂದು ಪ್ರೇಕ್ಷಕರ ಮುಂದೆ ಬರಲಿದೆ. ಈ ಸಿನೆಮಾದ ಅಪ್ಡೇಟ್ಸ್ ಗಾಗಿ ಅಭಿಮಾನಿಗಳೂ ಸೇರಿದಂತೆ ಅನೇಕರು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಮಂಚು ಲಕ್ಷ್ಮೀ ಆದಿ ಪರ್ವಂ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅಗ್ನಿ ನಕ್ಷತ್ರಂ ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಶೀಘ್ರವೇ ತೆರೆಕಾಣಲಿದೆ.