Film News

ಬಾಡಿ ಶೇಮಿಂಗ್, ಮದುವೆಯ ಬಗ್ಗೆ ಎದುರಾದ ಟ್ರೋಲ್ಸ್ ಬಗ್ಗೆ ನಟಿ ಪ್ರಿಯಮಣಿ ಹಾಟ್ ಕಾಮೆಂಟ್ಸ್ ವೈರಲ್ .…..!

ಸಿನಿರಂಗದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಜೋರು ಸದ್ದು ಮಾಡಿ, ವಯಸ್ಸಾದ ಬಳಿಕ ಸಿನಿರಂಗದಿಂದ ದೂರವುಳಿಯುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆ. ಈ ಸಾಲಿಗೆ ನಟಿ ಪ್ರಿಯಮಣಿ ಸಹ ಸೇರುತ್ತಾರೆ. ಆಕೆಗೆ ನಲವತ್ತರ ವಯಸ್ಸಾದರೂ ಸಹ ಯಂಗ್ ನಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಸಿನೆಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಇದೀಗ ಪ್ರಿಯಮಣಿ ಬಾಡಿ ಶೇಮಿಂಗ್ ಹಾಗೂ ತನ್ನ ಮದುವೆಯ ಬಗ್ಗೆ ಎದುರಾದ ಟ್ರೋ‌ಲ್ಸ್ ಬಗ್ಗೆ ಹಾಟ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಪ್ರಿಯಮಣಿ ಸುಮಾರು ವರ್ಷಗಳ ಕಾಲ ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಲ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಇದೀಗ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿದ ಈಕೆ ಸೌತ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇನ್ನೂ ಸಿನೆಮಾಗಳ ಮೂಲಕ ಒಂದು ರೀತಿಯಲ್ಲಿ ರಂಜಿಸಿದರೇ, ಕಿರುತೆರೆಯಲ್ಲಿ ಕೆಲವೊಂದು ಶೋ ಗಳ ಮೂಲಕ ಕಿರುತೆರೆ ಪ್ರೇಕ್ಷರನ್ನೂ ಸಹ ಆಕರ್ಷಣೆ ಮಾಡುತ್ತಿದ್ದಾರೆ. ಸಿನೆಮಾಗಳು ಹಾಗೂ ವೆಬ್ ಸಿರೀಸ್ ಗಳಲ್ಲೂ ಸಹ ಆಕೆ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ಕಸ್ಟಡಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಆಕೆ ಟ್ರೋಲರ್ಸ್ ಬಗ್ಗೆ ಹಾಟ್ ಕಾಮೆಂಟ್ ಮಾಡಿದ್ದಾರೆ. ತನ್ನ ಮದುವೆಯ ಸಮಯದಲ್ಲಿ ಬಂದಂತಹ ವಿಮರ್ಶೆಗಳ ಬಗ್ಗೆ ಆಕೆ ಒಪೆನ್ ಆಗಿದ್ದಾರೆ. ಆಕೆ ಯಾವ ರೀತಿಯಲ್ಲಿ ಟ್ರೋಲ್ಸ್ ಗಳನ್ನು ಎದುರಿಸಿದ್ರು ಎಂಬ ಬಗ್ಗೆ ಹಾಟ್ ಕಾಮೆಂಟ್ ಮಾಡಿದ್ದಾರೆ.

ಇತ್ತೀಚಿಗೆ ಪ್ರಿಯಮಣಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ಟ್ರೋಲ್ಸ್ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಬರುವಂತಹ ಟ್ರೋಲ್ ಗಳನ್ನು ನಾನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಬಾಡಿ ಶೇಮಿಂಗ್, ದೇಹದ ಬಣ್ಣದ ಬಗ್ಗೆ ಈಗಲೂ ಸಹ ವಿಮರ್ಶೆಗಳು ಬರುತ್ತಿರುತ್ತವೆ. ಮುಸ್ತಾಫನನ್ನು ಪ್ರೀತಿಸಿ ಮದುವೆಯಾದಾಗಲಂತೂ  ವಿಪರೀತವಾದ ವಿಮರ್ಶೆಗಳು ಎದುರಿಸಿದ್ದೇನೆ. ಎಂಗೇಜ್ ಮೆಂಟ್ ಆದಂತಹ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಾಗ ನೀನು ಏಕೆ ಮುಸ್ಲೀಂ ವ್ಯಕ್ತಿಯನ್ನು ಮದುವೆಯಾಗುತ್ತಿದ್ದೀಯಾ ಎಂದು ಅಭ್ಯಂತರ ತೋರಿದ್ದರು. ಹಿಯಾಳೀಸಿದ್ದರು. ಕಾಮೆಂಟ್ ಮಾಡಿದ ಎಲ್ಲರಿಗೂ ನಾನು ಹೇಳುವುದು ಒಂದೇ, ಇದು ನನ್ನ ಜೀವನ, ಯಾರೊಂದಿಗೆ ಜೀವನ ಸಾಗಿಸಬೇಕೆಂಬುದು ನನ್ನ ಇಷ್ಟ ಎಂದಿದ್ದಾರೆ. ಆ ಮೂಲಕ ತಾನು ಟ್ರೋಲ್ಸ್ ಗಳಿಗೆ ಪ್ರಾಮುಖ್ಯತೆ ನಿಡುವುದಿಲ್ಲ. ಟ್ರೊಲ್ ಗಳಿಂದ ನಾನು ದುಃಖ ಪಡುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ಪ್ರಿಯಮಣಿ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಪ್ರಿಯಮಣಿ ಕೆಲವೊಂದು ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಆಕೆ ತಮಿಳು, ಕನ್ನಡ ಹಾಗೂ ಹಿಂದಿಯಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಮೈದಾನ್ ಹಾಗೂ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆಯಲ್ಲಿ ಢಿ-14 ಡ್ಯಾನ್ಸ್ ಶೋಗೂ ಸಹ ಜಡ್ಜ್ ಆಗಿದ್ದರು.

Most Popular

To Top