ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಆಶಿಕಾ ರಂಗನಾಥ್, ವೈರಲ್ ಆದ ಕಾಮೆಂಟ್ಸ್…..!

ಸದ್ಯ ಸೌತ್ ಸಿನಿರಂಗದಲ್ಲಿ ಕನ್ನಡ ನಟಿಯರ ಹವಾ ಜೋರಾಗಿದೆ ಎನ್ನಬಹುದಾಗಿದೆ. ರಶ್ಮಿಕಾ, ಪೂಜಾಹೆಗ್ಡೆ, ಶ್ರೀಲೀಲಾ ರವರು ಈಗಾಗಲೇ ತಮ್ಮ ಚಾಪನ್ನು ಮೂಡಿಸಿದ್ದಾರೆ. ಬಿಗ್ ಬಜೆಟ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಈ…

ಸದ್ಯ ಸೌತ್ ಸಿನಿರಂಗದಲ್ಲಿ ಕನ್ನಡ ನಟಿಯರ ಹವಾ ಜೋರಾಗಿದೆ ಎನ್ನಬಹುದಾಗಿದೆ. ರಶ್ಮಿಕಾ, ಪೂಜಾಹೆಗ್ಡೆ, ಶ್ರೀಲೀಲಾ ರವರು ಈಗಾಗಲೇ ತಮ್ಮ ಚಾಪನ್ನು ಮೂಡಿಸಿದ್ದಾರೆ. ಬಿಗ್ ಬಜೆಟ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಈ ಸಾಲಿಗೆ ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯೂಟಿ ಎಂತಲೇ ಕರೆಯಲಾಗುವ ಆಶಿಕಾ ರಂಗನಾಥ್ ಸಹ ಟಾಲಿವುಡ್ ಗೆ ಅಮಿಗೋಸ್ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಆಕೆಗೆ ಸೌತ್ ನಲ್ಲಿ ಅನೇಕ ಆಫರ್‍ ಗಳು ಹರಿದುಬರುತ್ತಿವೆ. ಇದೀಗ ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಹಾಗೂ ರಾಕಿಂಗ್ ಸ್ಟಾರ್‍ ಯಶ್ ರವರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ಸ್ ವೈರಲ್ ಆಗುತ್ತಿವೆ.

ಸ್ಯಾಂಡಲ್ ವುಡ್ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಕಳೆದ 2016 ರಲ್ಲಿ ತೆರೆಕಂಡ ಜಾಲಿ ಭಾಯ್ಸ್ ಎಂಬ ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಯುವಕರ ಕ್ರಷ್ ಆದರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿ ಬಹುಬೇಡಿಕೆ ಸೃಷ್ಟಿಸಿಕೊಂಡರು. ತಮಿಳಿನ ಅರಸನ್ ಎಂಬ ಸಿನೆಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನೆಮಾ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಕೊಡಲಿಲ್ಲ ಎಂದೇ ಹೇಳಬಹುದು. ಬಳಿಕ ಆಕೆ ನಂದಮೂರಿ ಕಲ್ಯಾಣ್ ರಾಮ್ ಜೊತೆ ಅಮಿಗೋಸ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೂ ಎಂಟ್ರಿ  ಕೊಟ್ಟರು. ಈ ಸಿನೆಮಾದ ಮೂಲಕ ಟಾಲಿವುಡ್ ನಲ್ಲೂ ಸಹ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಆಕೆಗೆ ಟಾಲಿವುಡ್ ನಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಹರಿದು ಬರುತ್ತಿವೆ.

ಇನ್ನೂ ನಟಿ ಆಶಿಕಾ ಇತ್ತೀಚಿಗೆ ನಡೆದ ಚಿತ್ತಾರ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಯೂತ್ ಐಕಾನ್ ಅವಾರ್ಡ್ ಪಡೆದುಕೊಂಡರು. ಇನ್ನೂ ಈ ಕಾರ್ಯಕ್ರಮದ ಪ್ರೋಮೋ ಸಹ ಬಿಡುಗಡೆಯಾಗಿತ್ತು. ಪ್ರೋಮೋ ಎಲ್ಲರ ಗಮನ ಸೆಳೆದಿತ್ತು. ಈ ಪ್ರೋಮೋ ನಲ್ಲಿ ಆಶಿಕಾ ರಂಗನಾಥ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕನ್ನಡದ ನಟರಾದ ಸುದೀಪ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ದರ್ಶನ್, ಯಶ್, ಶ್ರೀಮುರಳಿ, ಧೃವಾ ಸರ್ಜಾ, ಶರಣ್ ರವರ ಪೊಟೊಗಳನ್ನು ತೋರಿಸಿ ಅವರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪೊಟೋಗಳ ಪೈಕಿ ನೀವು ಯಾವ ನಟನನ್ನು ಬೆಸ್ಟ್ ಫ್ರೆಂಡ್ ಆಗಿ ನೋಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಈ ಪ್ರಶ್ನೆಗೆ ಆಶಿಕಾ ದರ್ಶನ್ ಸರ್‍ ಎಂದು ಹೇಳುತ್ತಾರೆ. ದರ್ಶನ್ ರವರು ಸ್ನೇಹಕ್ಕೆ ತುಂಬಾನೆ ಪ್ರಾಶಸ್ತ್ಯ ಕೊಡುತ್ತಾರೆ. ಅವರ ಮನಸ್ಸು ಸಹ ತುಂಬಾ ದೊಡ್ಡದು. ಫ್ರೆಂಡ್ ಶಿಪ್ ಅಂದ್ರೆ ಡಿ ಭಾಸ್, ಡಿ ಭಾಸ್ ಅಂದ್ರೆ ಫ್ರೆಂಡ್ ಶಿಪ್ ಎಂದು ಹೇಳಿದ್ದಾರೆ.

ಇನ್ನೂ ಮುಂದುವರೆದು ಯಾವ ತರ ಗಂಡ ಇರಬೇಕೆಂದು ಪ್ರಶ್ನೆ ಕೇಳಲಾಗಿತ್ತು ಅದಕ್ಕೆ ಯಶ್ ಸರ್‍ ತರಹ ಗಂಡ ಇರಬೇಕು ಎಂದಿದ್ದಾರೆ. ಬಳಿಕ ಯಾರಿಗೆ ಪ್ರಪೋಸ್ ಮಾಡುತ್ತೀರಾ ಎಂದರೇ ಆಶಿಕಾ ಧೃವಾ ಸರ್ಜಾ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇನ್ನೂ ಆಶಿಕಾ ರಂಗನಾಥ್ ನೀಡಿದ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.