ಬಾಲಿವುಡ್ ಬಾದ್ ಷಾಗೆ ಶಾಕ್ ಕೊಟ್ಟ ಅಭಿಮಾನಿ, ಅಭಿಮಾನಿಗೆ ಶಾರುಖ್ ಸರಿಯಾಗಿ ಕೊಟ್ರು ಕೌಂಟರ್.…..!

Follow Us :

ದೇಶದಾದ್ಯಂತ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟರ ಸಾಲಿಗೆ ಬಾಲಿವುಡ್ ಬಾದ್ ಷಾ ಎಂದೇ ಕರೆಯಲಾಗುವ ಶಾರುಖ್ ಖಾನ್ ಸಹ ಸೇರುತ್ತಾರೆ. ಈಗಲೂ ಸಹ ಅನೇಕ ಯುವತಿಯರಿಗೆ ಶಾರುಖ್ ಖಾನ್ ಎಂದರೇ ತುಂಭಾನೆ ಕ್ರೇಜ್ ಇದೆ. ಆತನ ವಯಸ್ಸು 60 ದಾಟಿದರೂ ಸಹ ಭಾರಿ ಆಕ್ಷನ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಅಭಿಮಾನಿಯೊಬ್ಬ ಶಾರುಖ್ ಖಾನ್ ಗೆ ಶಾಕ್ ಆಗುಂವತ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅದಕ್ಕೆ ಶಾರುಖ್ ಸಹ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ದೇಶದ ಸಿನಿರಂಗದಲ್ಲಿ ಭಾರಿ ಕ್ರೇಜ್ ಹೊಂದಿರುವ ನಟರ ಸಾಲಿನಲ್ಲಿ ಶಾರುಖ್ ಸಹ ಸೇರುತ್ತಾರೆ. 60ರ ವಯಸ್ಸಿನಲ್ಲಿಯೂ ಸಹ ಆಕ್ಷನ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಶಾರುಖ್ ಬ್ಯಾಕ್ ಟು ಬ್ಯಾಕ್ ಡಿಜಾಸ್ಟರ್‍ ಗಳ ಮೂಲಕ ಸಿನೆಮಾಗಳಿಂದ ದೂರವೇ ಉಳಿದರು. ಬಳಿಕ ಪಠಾನ್ ಸಿನೆಮಾದ ಮೂಲಕ ಮತ್ತೆ ಸಕ್ಸಸ್ ಕಂಡುಕೊಂಡರು. ಈ ಸಿನೆಮಾ ಆತನಿಗೆ ಬಿಗ್ ಸಕ್ಸಸ್ ಕೊಡುವುದರ ಜೊತೆಗೆ ಸೂಪರ್‍ ಹಿಟ್ ಇಲ್ಲದೇ ಇರುವಂತಹ ಬಾಲಿವುಡ್ ಗೂ ಸಹ ಒಳ್ಳೆಯ ಸಕ್ಸಸ್ ತಂದುಕೊಟ್ಟರು ಎಂದು ಹೇಳಬಹುದಾಗಿದೆ. ಇದೀಗ ಶಾರುಖ್ ಖಾನ್ ಅಭಿನಯದ ದಿವಾನಾ ಎಂಬ ಸಿನೆಮಾದ ಬಿಡುಗಡೆಯಾಗಿ 31 ವರ್ಷ ಪೂರ್ಣಗೊಳಿಸಿದ್ದು, ಈ ಸಂಬಂಧ ಶಾರುಖ್ ಸಹ ತಮ್ಮ ಅಭಿಮಾನಿಗಳೊಂದಿಗೆ ಅರ್ಧಗಂಟೆ ಚಿಟ್ ಚಾಟ್ ಮಾಡಿದ್ದಾರೆ.

ಆಸ್ಕ್ ಎಸ್.ಆರ್‍.ಕೆ ಎಂಬ ಕ್ಯಾಪ್ಷನ್ ನೊಂದಿಗೆ ಈ ಚಿಟ್ ಚಾಟ್ ನಿರ್ವಹಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಶಾರುಖ್ ಉತ್ತರಗಳನ್ನು ಸಹ ನೀಡಿದ್ದಾರೆ. ಆದರೆ ಈ ವೇಳೆ ಶಾರುಖ್ ಅಭಿಮಾನಿಯೊಬ್ಬ ಶಾಕಿಂಗ್ ಪ್ರಶ್ನೆಯನ್ನು ಕೇಳಿದ್ದಾನೆ. ನಿಮ್ಮೊಂದಿಗೆ ನಾನು ಸಿಗರೇಟ್ ಕುಡಿಯಬೇಕು ಎಂದು ಕೇಳಿದ್ದಾನೆ. ಅದನ್ನು ಶಾರುಖ್ ಶಾಕ್ ಆಗಿದ್ದಾರೆ. ನನ್ನ ಕೆಟ್ಟ ಅಭ್ಯಾಸಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅದು ನನ್ನೊಂದಿಗೆ ಇರುತ್ತದೆ ಎಂದು ಶಾರುಖ್ ಉತ್ತರ ನೀಡಿದ್ದಾರೆ. ಇನ್ನೂ ಶಾರುಖ್ ಖಾನ್ ರವರ ಈ ಉತ್ತರಕ್ಕೆ ಅನೇಕರು ಪಾಸಿಟೀವ್ ಆಗಿ ರಿಯಾಕ್ಟ್ ಆಗುತ್ತಿದ್ದಾರೆ.

ಇನ್ನೂ ಚಿಟ್ ಚಾಟ್ ನಲ್ಲಿ ಶಾರುಖ್ ಖಾನ್ ಉತ್ತರಕ್ಕೆ ಸೋಷಿಯಲ್ ಮಿಡಿಯಾದಲ್ಲಿ ವಿಭಿನ್ನ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಕೆಲವರು ಸರಿಯಾಗಿ ಹೇಳಿದ್ರಿ ಎಂದು ಹೊಗಳುತ್ತಿದ್ದರೇ ಮತ್ತೆ ಕೆಲವರು ಸ್ಮೋಕಿಂಗ್ ಅನ್ನು ಬಿಡಿ ಎಂದು ಹೇಳುತ್ತಿದ್ದಾರೆ. ಇನ್ನೂ ಶಾರುಖ್ ಸದ್ಯ ಜವಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲೇ ಈ ಸಿನೆಮಾ ತೆರೆಯ ಮೇಲೆ ಅಬ್ಬರಿಸಲಿದೆ.