Film News

ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೈರ್ ಬಗ್ಗೆ ಒಪೆನ್ ಆದ ನಟಿ ಪ್ರೇಮ…..!

ಸಿನಿರಂಗದಲ್ಲಿ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಂಡ ನಟಿಯರಲ್ಲಿ ಸೀನಿಯರ್‍ ನಟಿ ಪ್ರೇಮಾ ಸಹ ಒಬ್ಬರಾಗಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಜೊತೆಗೆ ಸವ್ಯಾಸಾಚಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ಆಕೆ ರಿಯಲ್ ಸ್ಟಾರ್‍ ಉಪೇಂದ್ರ ನಿರ್ದೇಶನದ ಓಂ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡ ಹಿನ್ನೆಲೆಯಲ್ಲಿ ಆಕೆ ಬಹುಬೇಡಿಕೆ ಸೃಷ್ಟಿಸಿಕೊಂಡರು.

ಇನ್ನೂ ರಿಯಲ್ ಸ್ಟಾರ್‍ ಉಪೇಂದ್ರ ರವರ ಅನೇಕ ಸಿನೆಮಾಗಳಲ್ಲಿ ಪ್ರೇಮ್ ಬಣ್ಣ ಹಚ್ಚಿದ್ದರು. ಜೊತೆಗೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ರವರ ಜೊತೆಗೆ ಹೆಚ್ಚು ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಈ ಹಾದಿಯಲ್ಲೇ ನಟ ಕಂ ನಿರ್ದೇಶಕ ಉಪೇಂದ್ರ ರವರ ಜೊತೆಗೆ ಹೆಚ್ಚು ಸಿನೆಮಾಗಳನ್ನು ಮಾಡಿದ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಹುಟ್ಟಿಕೊಂಡವು. ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್ ನಲ್ಲೂ ಸಹ ಈ ರೂಮರ್‍ ಗಳು ಜೋರಾಗಿ ಕೇಳಿಬಂದವು. ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಈ ಬಗ್ಗೆ ಮಾತನಾಡಿದ್ದಾರೆ.

ಇನ್ನೂ ತಮ್ಮ ಬಗ್ಗೆ ಕೇಳಿ ಬಂದ ಲವ್ ಅಫೈರ್‍ ಬಗ್ಗೆ ಮಾತನಾಡಿದ ಪ್ರೇಮಾ, ಕೆರಿಯರ್‍ ಪೀಕ್ ನಲ್ಲಿರುವಾಗ ಸಕ್ಸಸ್ ಕಾಣುತ್ತಿದ್ದ ಸಮಯದಲ್ಲಿ ಹೆಚ್ಚಾಗಿ ಒಬ್ಬರ ಸಿನೆಮಾದಲ್ಲಿ ಕಾಣಿಸಿಕೊಂಡರೇ ಅಂತಹ ರೂಮರ್‍ ಗಳು ಬರುವುದು ಸಾಮಾನ್ಯ. ಅಂತಹ ರೂಮರ್‍ ಗಳನ್ನು ನಾವು ಕಿವಿಗೆ ಹಾಕಿಕೊಳ್ಳಬಾರದು. ನಾನೂ ಸಹ ಎಂದೂ ಆ ಬಗ್ಗೆ ಆಲೋಚನೆ ಮಾಡಿಲ್ಲ.  ಆ ರೂಮರ್‍ ಹರಿಬಿಟ್ಟವರೂ ಸಹ ನನ್ನ ಬಳಿ ಏನೂ ಕೇಳಲಿಲ್ಲ. ಈ ಬಗ್ಗೆ ಉಪೇಂದ್ರ ಜೊತೆಗೆ ಸಹ ನಾನು ಏನು ಮಾಡಲಿಲ್ಲ. ಜೊತೆಗೆ ಉಪೇಂದ್ರ ರವರು ಒಳ್ಳೆಯ ನಿರ್ದೇಶಕರು. ಸಹಜವಾದ ನಿರ್ದೇಶನ ಮಾಡುವುದರಲ್ಲಿ ನಿಸ್ಸೀಮರು. ಅವರಲ್ಲಿ ಲಿಂಗ ತಾರತಮ್ಯ ಸಹ ಇಲ್ಲ. ತಾನು ಅಂದುಕೊಂಡಷ್ಟು ಸೀನ್ ಬರುವವರೆಗೂ ಬಿಡುವುದಿಲ್ಲ ಎಂದು ಅವರ ನಿರ್ದೇಶನದ ಬಗ್ಗೆ ಪ್ರಶಂಸೆಗಳನ್ನು ಹರಿಸಿದ್ದಾರೆ.

ಇನ್ನೂ ಉಪೇಂದ್ರ ರವರ ಜೊತೆಗೆ ಕೆಲಸ ಮಾಡಿದ್ದರಿಂದ ನಾನು ತುಂಬಾ ಚೆನ್ನಾಗಿ ಕಲಿತಿದ್ದೇನೆ. ಅನೇಕ ಸಿನೆಮಾಗಳಲ್ಲಿ ನಟಿಸಲು ಪ್ರೇರಣೆ ಆಗಿತ್ತು. ಜೊತೆಗೆ ಸಿನಿರಂಗದಲ್ಲಿ ನಟಿಸಿದ ಹಿರೋಗಳನ್ನು ಸಹ ನೆನಪಿಸಿಕೊಂಡಿದ್ದಾರೆ. ಇನ್ನೂ ಆಕೆ ಯೂಟ್ಯೂಬ್ ಚಾನೆಲ್ ಗೆ ನೀಡಿದ ಈ ಸಂದರ್ಶನದ ತುಣುಕುಗಳು ವೈರಲ್ ಆಗಿದೆ.

Most Popular

To Top