ನಟ ಧನುಷ್ ರವರಿಂದ ನಯನತಾರಾ ಪರಿಚಯವಾದ್ರು, ಮೇಡಂ ಮೇಡಂ ಎನ್ನುತ್ತಾ ನಯನತಾರಾ ರನ್ನು ಪ್ರೀತಿಗೆ ಬೀಳಿಸಿದ್ದರಂತೆ ವಿಘ್ನೇಶ್….!

ಸೌತ್ ಸಿನಿರಂಗದ ಸ್ಟಾರ್‍ ಲೇಡಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷ ಜೂನ್ ಮಾಹೆಯಲ್ಲಿ ಅದ್ದೂರಿಯಾಗಿ ಮದುವೆಯಾದರು. ಬಳಿಕ ಅವರು ಅನೇಕ ವಿವಾದಗಳನ್ನು ಎದುರಿಸಿದರು. ಎಲ್ಲ…

ಸೌತ್ ಸಿನಿರಂಗದ ಸ್ಟಾರ್‍ ಲೇಡಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷ ಜೂನ್ ಮಾಹೆಯಲ್ಲಿ ಅದ್ದೂರಿಯಾಗಿ ಮದುವೆಯಾದರು. ಬಳಿಕ ಅವರು ಅನೇಕ ವಿವಾದಗಳನ್ನು ಎದುರಿಸಿದರು. ಎಲ್ಲ ವಿವಾದಗಳನ್ನು ಎದುರಿಸಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ವಿಘ್ನೇಶ್ ಮೊದಲ ಬಾರಿಗೆ ತನ್ನ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ. ನನಗೆ ಧನುಷ್ ಕಾರಣದಿಂದ ನಯನತಾರಾ ಪರಿಚಯವಾದರು ಎಂದು ಹೇಳಿದ್ದಾರೆ.

ಸುಮಾರು ಆರು ವರ್ಷಗಳ ಕಾಲ ಪ್ರೀತಿಸಿದ ನಯನ್ ಅಂಡ್ ವಿಕ್ಕಿ ನಡುವೆ ಪ್ರೀತಿ ಹೇಗೆ ಹುಟ್ಟಿತ್ತು ಎಂಬುದನ್ನು ಇದೀಗ ರಿವೀಲ್ ಮಾಡಿದ್ದಾರೆ. ನಯನತಾರಾ ಸ್ಟಾರ್‍ ಲೇಡಿ ಆಗಿದ್ದಾರೆ. ಇನ್ನೂ ವಿಘ್ನೇಶ್ ಕೆಲವೊಂದು ಸಿನೆಮಾಗಳನ್ನು ಮಾತ್ರ ನಿರ್ದೇಶನ ಮಾಡಿದ್ದಾರೆ. ಇನ್ನೂ ಅವರು ಬೆಳೆಯಬೇಕಾಗಿರುವುದು ತುಂಬಾನೆ ಇದೆ. ಅವರ ನಡುವೆ ಪ್ರೀತಿ ಹೇಗೆ ಹುಟ್ಟಿತ್ತು ಎಂಬುದು ಅನೇಕರಿಗೆ ತಿಳಿಯದು. ಇದೀಗ ವಿಘ್ನೇಶ್ ತನ್ನ ಲವ್ ಸ್ಟೋರಿ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ನಟ ಧನುಷ್ ಕಾರಣದಿಂದ ನನಗೂ ನಯನತಾರಾ ಗೂ ಪರಿಚಯ ಏರ್ಪಟ್ಟಿತ್ತು. ಪೊಡಾಪೋಡಿ ಸಿನೆಮಾದ ಸೋಲು ನಾನು ನನ್ನ ಪ್ರತಿಭೆಯನ್ನು ತೋರಿಸಲು ಮುಂದಾದೆ. ಕೆರಿಯರ್‍ ನಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದೆ. ಈ ಸಮಯದಲ್ಲೇ ನಾನು ನೇನೂ ರೌಡಿನೇ ಎಂಬ ಸಿನೆಮಾದ ಕಥೆಯನ್ನು ಬರೆದೆ.

ಇನ್ನೂ ನನ್ನ ಬಳಿ ಕಥೆಯೊಂದಿದೆ ಎಂದು ತಿಳಿದ ನಟ ಧನುಷ್ ಈ ಸಿನೆಮಾವನ್ನು ಪ್ರೊಡ್ಯೂಸ್ ಮಾಡಲು ಮುಂದೆ ಬಂದರು. ನಯನತಾರಾ ರವರಿಗೆ ಕಥೆ ಹೇಳಿ ಎಂದು ಹೇಳಿದರು. ಆದರೆ ನನ್ನ ಕಥೆಯನ್ನು ನಯನತಾರಾ ಒಪ್ಪುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಅದೇ ಕಥೆಯನ್ನು ನಜ್ರಿಯಾ ರವರಿಗೆ ಹೇಳಬೇಕೆಂದುಕೊಂಡಿದ್ದೆ. ಆದರೆ ಧನುಷ್ ರವರಿಂದ ನಾನು ನಯನತಾರಾ ರವರಿಗೆ ಕಥೆಯನ್ನು ಹೇಳಲು ಭೇಟಿಯಾದೆ. ಆಕೆ ನನ್ನನ್ನು ತುಂಬಾ ಗೌರವದಿಂದ ಬರಮಾಡಿಕೊಂಡರು. ಜೊತೆಗೆ ಕಥೆಯನ್ನು ಸಹ ಒಪ್ಪಿಕೊಂಡರು. ಮೊದಲ ಭೇಟಿಯಲ್ಲೇ ನಾನು ಆಕೆಯೊಂದಿಗೆ ಪ್ರೀತಿಗೆ ಬಿದ್ದೆ. ಬಳಿಕ ಅನೇಕ ದಿನಗಳ ಕಾಲ ನಾನು ಆಕೆಯನ್ನು ಮೇಡಂ ಮೇಡಂ ಎಂದು ಸಂಭೋದಿಸುತ್ತಲೇ ಇದ್ದೆ. ಆಕೆಯ ಕ್ಯಾರಾವ್ಯಾನ್ ಒಳಗೆ ಹೋಗಲು ಸಹ ತುಂಭಾ ಭಯಪಡುತ್ತಿದೆ. ಬಳಿಕ ನಾವಿಬ್ಬರೂ ಡೇಟಿಂಗ್ ಶುರು ಮಾಡಿದೆವು. ಸುಮಾರು ದಿನಗಳ ಕಾಲ ನಾನು ಆಕೆಯನನ್ನು ಮೇಡಂ ಎಂತಲೇ ಕರೆಯುತ್ತಿದೆ. ಈ ಕಾರಣದಿಂದ ನಮ್ಮ ಪ್ರೀತಿಯ ಬಗ್ಗೆ ಯಾರಿಗೂ ತಿಳಿಯುತ್ತಿರಲಿಲ್ಲ.

ಇನ್ನೂ ನಯನತಾರಾ ಬಗ್ಗೆ ಮತಷ್ಟು ವಿಚಾರಗಳನ್ನು ನಯನತಾರಾ ಹಂಚಿಕೊಂಡಿದ್ದಾರೆ. ನಯನತಾರಾಗೆ ತುಂಬಾ ಸಿಂಪಲ್ ಆಗಿರಬೇಕೆಂದರೇ ತುಂಬಾ ಇಷ್ಟ.  ಇತ್ತೀಚಿಗೆ ತಿರುಚಿಯಲ್ಲಿ ತನ್ನ ಮಕ್ಕಳ ಯೋಗಕ್ಷೇಮಕ್ಕಾಗಿ ಪೂಜೆಗಳನ್ನು ಮಾಡಿದೆವು. ವಾಪಸ್ಸು ಹೋಗಬೇಕಾದರೇ ತಡ ಆಗುತ್ತೆ ಎಂದು ನಾವು  ರೈಲಿನಲ್ಲಿ ಬಂದೆವು ಎಂದು ವಿಘ್ನೇಶ್ ನಯನತಾರಾ ಸರಳತೆಯ ಬಗ್ಗೆ ಹೇಳಿದ್ದಾರೆ. ಇನ್ನೂ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದಾರೆ. ಮದುವೆಯಾದರೂ ಸಹ ನಯನತಾರಾ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದು ಸದ್ಯ ಆಕೆ ಬಾಲಿವುಡ್ ಬಾದ್ ಷಾ ಶಾರುಖ್ ಜೊತೆಗೆ ಜವಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.