ಬಡವರಿಗೆ ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮೆಗಾ ಸೊಸೆ ಉಪಾಸನಾ ಕೊಣಿದೆಲಾ….!

Follow Us :

ತೆಲುಗು ಸಿನಿರಂಗದ ಮೆಗಾ ಕುಟುಂಬದ ಸೊಸೆ ಉಪಾಸನಾ ಕೊಣಿದೆಲಾ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಪತ್ನಿ ಉಪಾಸನಾ ಸಹ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಈಗಾಗಲೆ ಉಪಾಸನಾ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಮನಸ್ಸನ್ನು ಸಾರುತ್ತಿದ್ದಾರೆ. ಇದೀಗ ಮತ್ತೊಮ್ಮೆ ಬಡವರಿಗೆ ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೆಗಾ ಸೊಸೆ ಉಪಾಸನಾ ಬಡವರಿಗೆ ಸಹಾಯಾಸ್ತ ಚಾಚಿದ್ದಾರೆ. ಹೈದರಬಾದ್ ನ ಜೂಬ್ಲಿ ಹಿಲ್ಸ್ ನಲ್ಲಿ ಹೌಸ್ ಆಫ್ ಟಾಟಾ ನಿಂದ ZOYA ಸಂಸ್ಥೆಯ ಹೊಸ ಮಳಿಗೆಯನ್ನು ಪ್ರಾರಂಭಿಸಿದ್ದರು. ಈ ಸ್ಟೋರ್‍ ಗೆ ಮುಖ್ಯ ಅತಿಥಿಯಾಗಿ ಉಪಾಸನಾ ಹಾಜರಾಗಿದ್ದರು. ಈ ಶೋ ಗಾಗಿ ಆಕೆ ಪಡೆದುಕೊಂಡ ಸಂಭಾವನೆಯನ್ನು ಬಡವರಿಗೆ ವಿರಾಳವಾಗಿ ನೀಡಿದ್ದಾರೆ. ಈ ರೆನ್ಯುಮರೇಷನ್ ಅನ್ನು ಆಕೆ ದೋಮಕೊಂಡ ಪೋರ್ಟ್ ವಿಲೇಜ್ ಡೆವೆಲಪ್‌ಮೆಂಟ್ ಟ್ರಸ್ಟ್ ಗೆ ವಿರಾಳವಾಗಿ ನೀಡಿದ್ದಾರೆ. ಆ ಟ್ರಸ್ಟ್ ಮೂಲಕ ಬಡವರಿಗೆ ಹಾಗೂ ಹಿಂದುಳಿದವರಿಗೆ ಸಹಾಯ ಮಾಡಲು ಆರ್ಥಿಕ ಸಹಾಯ ನೀಡಿದ್ದಾರೆ. ಮಹಿಳಾ ಸಬಲೀಕರಣ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಆ ಹಣವನ್ನು ಬಳಸಿಕೊಳ್ಳುವಂತೆ ಆಕೆ ವಿರಾಳ ನೀಡಿದ್ದಾರೆ.

ಅಷ್ಟೇಅಲ್ಲದೇ ZOYA ಸಂಸ್ಥೆಯ ಹೊಸ ಮಳಿಗೆಯವರು ಆಕೆಗೆ ನೀಡಿದ ಕಿವ ಓಲೆಯನ್ನು ಸಹ ಟ್ರಸ್ಟ್ ಗೆ ನೀಡಿದ್ದಾರೆ. ಇನ್ನೂ ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸಹ ಉಪಾಸನಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಉಪಾಸನಾ ಸಾಮಾಜಿಕ ಕಳಕಳಿಗೆ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಪ್ರಶಂಸೆಗಳನ್ನು ಹರಿಸಿದ್ದಾರೆ. ಜೊತೆಗೆ ದೋಮಕೊಂಡ ಪೋರ್ಟ್ ಅಂಡ್ ವಿಲೇಜ್ ಡೆವಲಪ್ ಮೆಂಟ್ ಟ್ರಸ್ಟ್ ರವರು ಸಹ ಉಪಾಸನಾ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನೂ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಹಾಗೂ ಉಪಾಸನಾ ಶೀಘ್ರದಲ್ಲೇ ತಂದೆ ತಾಯಿಯಾಗಿ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ದುಬೈನಲ್ಲಿ ಉಪಾಸನಾ ಸೀಮಂತ ಕಾರ್ಯಕ್ರಮ ಸಹ ಅದ್ದೂರಿಯಾಗಿ ನೆರವೇರಿತ್ತು. ಬಳಿಕ ಈ ಜೋಡಿ ಮಾಲ್ಡೀವ್ಸ್ ಗೆ ವೆಕೇಷನ್ ಗೆ ತೆರಳಿದರು. ಅಲ್ಲಿನ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.