ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡ ಸೀನಿಯರ್ ನಟಿ ಪ್ರಗತಿ, ಅಂದುಕೊಂಡಿದ್ದನ್ನು ಸಾಧಿಸಿದ ನಟಿ……!

Follow Us :

ಕಳೆದ 90 ರ ದಶಕದಿಂದ ಸಿನಿರಂಗದಲ್ಲಿ ಕಲಾವಿದೆಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡ ಕ್ಯಾರೆಕ್ಟರ್‍ ಆರ್ಟಿಸ್ಟ್ ಪ್ರಗತಿ ಇತರೆ ನಟಿಯರಂತೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇದೀಗ ತೆಲುಗು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಅತ್ತೆ, ತಾಯಿ ಮೊದಲಾದ ಪಾತ್ರಗಳಲ್ಲಿ ಸಿನಿ ರಸಿಕರನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ನಟಿಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೌತ್ ಸ್ಟಾರ್‍ ಕ್ಯಾರೆಕ್ಟರ್‍ ಆರ್ಟಿಸ್ಟ್ ಪ್ರಗತಿ ಸಿನೆಮಾಗಳಲ್ಲಿ ನಟಿಸುವುದರ ಜೊತೆಗೆ ಫಿಟ್ ನೆಸ್ ಗೂ ಸಹ ಆದ್ಯತೆ ನೀಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಜಿಮ್ ಮಾಡುತ್ತಾ ಪೊಟೋಗಳು, ವಿಡಿಯೋಗಳು ಹಂಚಿಕೊಳ್ಳುತ್ತಿರುತ್ತಾರೆ. ಶೂಟಿಂಗ್ ಇಲ್ಲದೇ ಇದ್ದರೇ ಆಕೆ ಹೆಚ್ಚಾಗಿ ಜಿಮ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಅನೇಕರು ಆಕೆ ಸೋಷಿಯಲ್ ಮಿಡಿಯಾಗಾಗಿ ಫಿಟ್ ನೆಸ್ ಮೈಂಟೈನ್ ಮಾಡುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಕೆ ಇದೀಗ ದೊಡ್ಡ ಸಾಧನೆ ಮಾಡಿದ್ದು, ಆಕೆಯ ಕಸರತ್ತಿನ ಹಿಂದೆ ಇರುವ ಉದ್ದೇಶ ಏನು ಎಂಬುದು ತಿಳಿದಿದೆ. ವೈಯಿಟ್ ಲಿಫ್ಟಿಂಗ್ ಮಾಡುವ ಅನೇಕ ಸ್ಪರ್ಧೆಗಳಲ್ಲಿ ಸಹ ಆಕೆ ಭಾಗಿಯಾಗಿದ್ದರು. ಇದೀಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ನ್ಯಾಷನಲ್ ಪವರ್‍ ಲಿಫ್ಟಿಂಗ್ ಚಾಂಪಿಯನ್ ಆಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಪುರುಷರು ಹಾಗೂ ಮಹಿಳೆಯರ ರಾಷ್ಟ್ರೀಯ ಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಡೆದಿತ್ತು. ಈ ಸ್ಪರ್ಧೆಯಲ್ಲಿ ನಟಿ ಪ್ರಗತಿ ಭಾಗಿಯಾಗಿ ಮೂರನೇ ಸ್ಥಾನ ಪಡೆದುಕೊಮಡಿದ್ದಾರೆ. ಬೆಂಗಳೂರಿನ ಇಂಜನಿಯರ್ಸ್ ಅಸೋಸಿಯೇಷನ್ ಆಡಿಟೋರಿಯಂ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಪ್ರೊಫೆಷನಲ್ ಪವರ್‍ ಲಿಫ್ಟರ್‍ ಗಳ ಜೊತೆಗೆ ಪೈಪೋಟಿಗೆ ಬಿದ್ದು ಪ್ರಗತಿ ಮೂರನೇ ಪದಕ ಪಡೆದುಕೊಂಡಿದ್ದಾರೆ. ಇನ್ನೂ ಪ್ರಗತಿ ಮಾಡಿದ ಸಾಧನೆಗೆ ತಮ್ಮ ಅಭಿಮಾನಿಗಳ ಜೊತೆಗೆ ಅನೇಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಇನ್ನೂ ಪ್ರಗತಿ ಸಿನೆಮಾಗಳ ಜೊತೆಗೆ ಕೆಲವೊಂದು ಕಿರುತೆರೆ ಧಾರವಾಹಿಗಳಲ್ಲೂ ಸಹ ನಟಿಸುತ್ತಿದ್ದಾರೆ. ತಮಿಳು ಸಿನೆಮಾದ ಮೂಲಕ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಗೆ ಸುಮಾರು ಹತ್ತು ಸಿನೆಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಬಳಿಕ ಸಾಲು ಸಾಲು ಧಾರವಾಹಿಹಳಲ್ಲಿ ನಟಿಸಿದ್ದರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.