ಎರಡನೇ ಮದುವೆಯ ಬಗ್ಗೆ ಪ್ರಗತಿ ಇಂಟ್ರಸ್ಟಿಂಗ್ ಕಾಮೆಂಟ್ಸ್, ಸಂಗಾತಿ ಬೇಕು ಎನ್ನಿಸುತ್ತಿದೆ ಎಂದ ಸೀನಿಯರ್ ನಟಿ…!

90 ರ ದಶಕದಿಂದ ಸಿನಿರಂಗದಲ್ಲಿ ಕಲಾವಿದೆಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡ ನಟಿ ಪ್ರಗತಿ ಇತರೆ ನಟಿಯರಂತೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಕೆಲವೊಂದು ಸಿನೆಮಾಗಳಲ್ಲಿ ನಟಿಯಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಅತ್ತೆ, ತಾಯಿ ಮೊದಲಾದ ಪಾತ್ರಗಳಲ್ಲಿ ಸಿನಿ ರಸಿಕರನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ಸೆಕೆಂಡ್ ಮ್ಯಾರೆಜ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಪ್ರಗತಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ವಯಸ್ಸಿಗೆ ಸಂಬಂಧವಿಲ್ಲ ಎಂಬಂತೆ ಹೆವಿ ವರ್ಕೌಟ್, ಡ್ಯಾನ್ಸ್, ರೀಲ್ಸ್ ಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿರುತ್ತಾರೆ. ಆಕೆಯ ಪೋಸ್ಟ್ ಗಳಿಗೆ ಅನೇಕರು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಆದರೆ ಪ್ರಗತಿ ಮಾತ್ರ ಅದ್ಯಾವುದಕ್ಕೂ ತಲೆಗೆಡಿಸಿಕೊಳ್ಳದೇ ತನ್ನಿಷ್ಟದಂತೆ ನಡೆಯುತ್ತಿರುತ್ತಾರೆ. ಇನ್ನೂ ಆಕೆ ಅನೇಕ ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಿರುತ್ತಾರೆ. ಸಂದರ್ಶನದಲ್ಲಿ ಆಕೆ ನೀಡುವ ಹೇಳಿಕೆಗಳು ಸಹ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿರುತ್ತವೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಎರಡನೇ ಮದುವೆಯಾಗುವ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ.

ನಟಿ ಪ್ರಗತಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಆಕೆ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಪ್ರಗತಿ ಸದ್ಯ ಸಿಂಗಲ್ ಮದರ್‍ ಆಗಿದ್ದಾರೆ. ಆಕೆ ಸುಮಾರು ವರ್ಷಗಳ ಹಿಂದೆಯೇ ಪತಿಯೊಂದಿಗೆ ಬೇರಯಾದರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಹಿನ್ನೆಲೆಯಲ್ಲಿ ಅದು ತಪ್ಪಾದ ನಿರ್ಣಯ ಎಂದು ಪ್ರಗತಿ ತುಂಬಾ ದುಃಖ ಪಡುತ್ತಿದ್ದಾರೆ. ನನ್ನಲ್ಲಿನ ಆವೇಶ, ಈಗೋ, ನಾನು ಏನಾದರೂ ಮಾಡಬಲ್ಲೆ ಎಂಬ ಸ್ವಭಾವದಿಂದ ಸಣ್ಣ ವಯಸ್ಸಿನಲ್ಲೇ ಮದುವೆಯಾದೆ. ಅದು ನನ್ನ ಜೀವನದಲ್ಲಿ ತುಂಬಾ ಪ್ರತಿಕೂಲಕರ ಪ್ರಭಾವ ಬೀರಿದೆ. ನಾನು ಸಿನಿಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಮೇಲೆ ಇಟ್ಟಂತಹ ಪೋಕಸ್ ನಟಿಯಾಗಿದ್ದಾಗ ಇಟ್ಟಿದ್ದರೇ ನನ್ನ ಜೀವನವೇ ಬೇರೆಯಾಗಿರುತ್ತಿತ್ತು ಎಂದಿದ್ದಾರೆ.

ಇದೇ ಸಮಯದಲ್ಲಿ ಎರಡನೇ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಮದುವೆ ಎನ್ನುವುದಕ್ಕಿಂತ ಜೊತೆಗೆ ಧೈರ್ಯವಾಗಿ ಒಬ್ಬರು ಬೇಕು ಎಂದುಕೊಳ್ಳಬಹುದು. ಒಮ್ಮೊಮ್ಮೆ ಜೊತೆಗೆ ಒಬ್ಬರು ಬೇಕು ಎನ್ನಿಸುತ್ತದೆ. ಆದರೆ ನನ್ನ ಮನಸ್ಥಿತಿಗೆ ಹೊಂದುವಂತಹ ವ್ಯಕ್ತಿ ದೊರೆಯಬೇಕು. ಕೆಲವೊಂದು ವಿಚಾರಗಳಲ್ಲಿ ನಾನು ತುಂಬಾ ನಿಖರವಾಗಿರುತ್ತೇನೆ. ನನಗೆ 20 ವರ್ಷ ವಯಸ್ಸಿದ್ದರೇ ನಾನು ಹೊಂದಿಕೊಳ್ಳುತ್ತಿದ್ದೇ ಏನೊ ಆದರೆ ಇದೀಗ ತುಂಬಾ ಕಷ್ಟ. ಎರಡನೇ ಮದುವೆಯಾಗಿ ಹೊಂದಾಣಿಕೆಯಾಗಿ ಬದುಕುವುದು ತುಂಬಾನೆ ಕಷ್ಟ ಎಂದಿದ್ದಾರೆ. ಆ ಮೂಲಕ ತಾನು ಇನ್ನೂ ಮುದುವೆಯಾಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಇನ್ನೂ  ಪ್ರಗತಿ ಸದ್ಯ ಬಹುಬೇಡಿಕೆಯುಳ್ಳ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

Previous articleNTR30 ಸಿನೆಮಾದಲ್ಲಿ ಎನ್.ಟಿ.ಆರ್ ಗೆ ಜೋಡಿಯಾಗಿ ಆ ನಟಿ ಫಿಕ್ಸ್, ಆಕೆಯ ಕೋರಿಕೆ ಸಹ ನೆರವೇರಲಿದೆಯೇ?
Next articleಶಾರ್ಟ್ ಗೌನ್ ನಲ್ಲಿ ಥೈಸ್ ಶೋ ಮೂಲಕ ಅಭಿಮಾನಿಗಳನ್ನು ಟೆಂಪ್ಟ್ ಮಾಡಿದ ಹಾಟ್ ಬ್ಯೂಟಿ ರಕುಲ್ ಪ್ರೀತ್ ಸಿಂಗ್…!