Film News

NTR30 ಸಿನೆಮಾದಲ್ಲಿ ಎನ್.ಟಿ.ಆರ್ ಗೆ ಜೋಡಿಯಾಗಿ ಆ ನಟಿ ಫಿಕ್ಸ್, ಆಕೆಯ ಕೋರಿಕೆ ಸಹ ನೆರವೇರಲಿದೆಯೇ?

NTR30 ಸಿನೆಮಾ ಘೋಷಣೆಯಾದಾಗಿನಿಂದ ಈ ಸಿನೆಮಾದಲ್ಲಿ ಎನ್.ಟಿ.ಆರ್‍ ಜೊತೆ ನಟಿಸುವ ನಟಿ ಯಾರು ಎಂಬ ವಿಚಾರ ಜೋರಾಗಿ ಹರಿದಾಡುತ್ತಿತ್ತು. ಈ ಹಿಂದೆ ಮೃಣಾಳ್ ಠಾಕೂರ್‍, ಅನನ್ಯ ಭಟ್ ಸೇರಿದಂತೆ ಅನೇಕ ನಟಿಯರ ಹೆಸರುಗಳು ಕೇಳಿಬಂದಿತ್ತು. ಪ್ಯಾನ್ ಇಂಡಿಯಾ ಸ್ಟಾರ್‍ ಆದ ಯಂಗ್ ಟೈಗರ್‍ ಎನ್.ಟಿ.ಆರ್‍ ಸಿನೆಮಾದಲ್ಲಿ ನಟಿಯನ್ನು ಆಯ್ಕೆ ಮಾಡಲು ಚಿತ್ರತಂಡ ಅನೇಕ ನಟಿಯರನ್ನು ಸಂಪರ್ಕ ಮಾಡಿದ್ದರಂತೆ. ಇದೀಗ ಒಬ್ಬ ನಟಿಯನ್ನು ಫೈನಲ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಆ ನಟಿಯ ಮನದಾಸೆ ಸಹ ನೆರವೇರಲಿದೆಯಂತೆ.

ಜೂನಿಯರ್‍ ಎನ್.ಟಿ.ಆರ್‍ RRR ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಬಳಿಕ ಆತ ಕೊರಟಾಲ ಶಿವ ಜೊತೆಗೆ NTR30 ಸಿನೆಮಾ ಘೋಷಣೆ ಆಗಿತ್ತು. ಆ ಸಿನೆಮಾ ಘೋಷಣೆಯಾಗಿ ತಿಂಗಳುಗಳು ಕಳೆದರು ಇನ್ನೂ ಸಿನೆಮಾದ ಶೂಟಿಂಗ್ ಪ್ರಾರಂಭವಾಗಲಿಲ್ಲ. ಕೆಲವು ದಿನಗಳ ಹಿಂದೆಯಷ್ಟೆ ಸಿನೆಮಾತಂಡ ಪ್ರೀ ಪ್ರೊಡಕ್ಷನ್ ಕೆಲಸಗಳು ಹಾಗೂ ಸಿನೆಮಾ ಶೂಟಿಂಗ್ ಲೊಕೇಷನ್ ಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿತ್ತು. ಇನ್ನೂ ಹೊಸ ವರ್ಷಕ್ಕೆ ಈ ಚಿತ್ರತಂಡ ಸಿನೆಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವುದರ ಜೊತೆಗೆ ಶೂಟಿಂಗ್ ಶುರುವಾಗುವ ದಿನಾಂಕದ ಬಗ್ಗೆ ಸಹ ರಿವೀಲ್ ಮಾಡಿದೆ. ಅದರಂತೆ 2024 ಏಪ್ರಿಲ್ 5 ರಂದು ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ ಫೆಬ್ರವರಿ ಮಾಹೆಯಿಂದ ಶೂಟಿಂಗ್ ಸಹ ಶುರುವಾಗುವುದಾಗಿ ತಿಳಿಸಿದ್ದಾರೆ. ಇದೀಗ ಮತ್ತೊಂದು ಸುದ್ದಿ ಈ ಸಿನೆಮಾಗೆ ಸಂಬಂಧಿಸಿದಂತೆ ಹರಿದಾಡುತ್ತಿದೆ.

ಎನ್.ಟಿ.ಆರ್‍ ಜೊತೆಗೆ ನಟಿಸುವಂತಹ ನಟಿಗಾಗಿ ತೀವ್ರ ಹುಡುಕಾಟ ನಡೆಸಿತ್ತು NTR30 ಚಿತ್ರತಂಡ. ಸುಮಾರು ಆರು ಮಂದಿಗೂ ಹೆಚ್ಚು ನಟಿಯರನ್ನು ಸಂಪರ್ಕಿಸಲಾಗಿತ್ತು ಎನ್ನಲಾಗಿದೆ. ಈ ಹಿಂದೆ ಎನ್.ಟಿ.ಆರ್‍ ಸಿನೆಮಾಗೆ ಎಂದೂ ಸಹ ಇಂತಹ ಸಮಸ್ಯೆ ಎದುರಾಗಿರಲಿಲ್ಲ. ಆಲಿಯಾ ಭಟ್, ಮಾಳವಿಕಾ ಮೋಹನನ್, ಮೃಣಾಲ್ ಠಾಕೂರ್‍, ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್, ಕಿಯಾರಾ ಅಡ್ವಾನಿ ಸೇರಿದಂತೆ ಜಾನ್ವಿ ಕಪೂರ್‍ ಹೆಸರುಗಳು ಸಹ ಕೇಳಿಬಂತು. ಆದರೆ ಇವರು ಯಾರೂ ಸಹ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಆದರೆ ಇದೀಗ ಅವರಲ್ಲಿ ಒಬ್ಬ ನಟಿ ಈ ಸಿನೆಮಾದಲ್ಲಿ ನಟಿಸೋಕೆ ಒಪ್ಪಿಗೆ ಸೂಚಿಸಿದ್ದಾರಂತೆ. ಆಕೆ ಬೇರೆ ಯಾರೂ ಅಲ್ಲ ಜಾನ್ವಿ ಕಪೂರ್‍. ಹೌದು ಜಾನ್ವಿ ಕಪೂರ್‍ ಇದೀಗ ಎನ್.ಟಿ.ಆರ್‍ ಸಿನೆಮಾದಲ್ಲಿ ನಟಿಸೋಕೆ ಒಪ್ಪಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಸಹ ಆಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಬಾಲಿವುಡ್ ಹಾಟ್ ಅಂಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸಹ ಅನೇಕ ಸಂದರ್ಶನಗಳಲ್ಲಿ ಸೌತ್ ಸಿನಿಮಾಗಳಲ್ಲಿ ನಟಿಸುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ ನಟಿಸಬೇಕೆಂದು ಸಹ ಹೇಳಿದ್ದರು. ಇದೀಗ ಕೇಳಿಬರುತ್ತಿರುವ ಸುದ್ದಿಯಿಂದ ಜಾನ್ವಿ ಕಪೂರ್‍ ಮನದಾಸೆ ಸಹ ನೆರವೇರಲಿದೆ ಎನ್ನಬಹುದಾಗಿದೆ. ಇನ್ನೂ ಈ ಸುದ್ದಿಯ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಯಿಲ್ಲ. ಸದ್ಯ ಜೂನಿಯರ್‍ ಎನ್.ಟಿ.ಆರ್‍ ಕುಟುಂಬದೊಂದಿಗೆ ಅಮೇರಿಕಾ ಟ್ರಿಪ್ ನಲ್ಲಿದ್ದಾರೆ. ಆತ ಫೆಬ್ರವರಿ ಮಾಹೆಯಲ್ಲಿ ವಾಪಸ್ಸು ಬರುವ ಸಾಧ್ಯತೆಯಿದ್ದು, ನಾನ್ ಸ್ಟಾಪ್ ಆಗಿ ಶೂಟಿಂಗ್ ಸಹ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

Most Popular

To Top