Film News

ಆಧಾರಗಳಿಲ್ಲದೇ ನನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಬರೆಯಬೇಡಿ ಎಂದು ಫೈರ್ ಆದ ಸೀನಿಯರ್ ನಟಿ ಪ್ರಗತಿ….!

ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಕಲಾವಿದೆಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡ ನಟಿ ಪ್ರಗತಿ ಇತರೆ ನಟಿಯರಂತೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಕೆಲವೊಂದು ಸಿನೆಮಾಗಳಲ್ಲಿ ನಟಿಯಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಅತ್ತೆ, ತಾಯಿ ಮೊದಲಾದ ಪಾತ್ರಗಳಲ್ಲಿ ಸಿನಿ ರಸಿಕರನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ರೂಮರ್‍ ಗಳ ಬಗ್ಗೆ ಫೈರ್‍ ಆಗಿದ್ದು, ನನ್ನ ಬಗ್ಗೆ ಅಧಿಕೃತ ಮಾಹಿತಿಯಿಲ್ಲದೇ ಬರೆಯಬೇಡಿ ಎಂದು ಪ್ರಗತಿ ಆಕ್ರೋಷ ಹೊರಹಾಕಿದ್ದಾರೆ.

ಸೀನಿಯರ್‍ ನಟಿ ಪ್ರಗತಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ವಯಸ್ಸಿಗೆ ಸಂಬಂಧವಿಲ್ಲ ಎಂಬಂತೆ ಹೆವಿ ವರ್ಕೌಟ್, ಡ್ಯಾನ್ಸ್, ರೀಲ್ಸ್ ಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿರುತ್ತಾರೆ. ಆಕೆಯ ಪೋಸ್ಟ್ ಗಳಿಗೆ ಅನೇಕರು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಆದರೆ ಪ್ರಗತಿ ಮಾತ್ರ ಅದ್ಯಾವುದಕ್ಕೂ ತಲೆಗೆಡಿಸಿಕೊಳ್ಳದೇ ತನ್ನಿಷ್ಟದಂತೆ ನಡೆಯುತ್ತಿರುತ್ತಾರೆ. ಇನ್ನೂ ಆಕೆ ಅನೇಕ ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಿರುತ್ತಾರೆ. ಕಳೆದೆರಡು ದಿನಗಳಿಂದ ನಟಿ ಪ್ರಗತಿ ಖ್ಯಾತ ನಿರ್ಮಾಪಕರೊಬ್ಬರನ್ನು ಎರಡನೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಬಿರುಗಾಳಿಯಂತೆ ಹರಿದಾಡಿತ್ತು. ಆದರೆ ಅದೆಲ್ಲಾ ಕೇವಲ ರೂಮರ್‍ ಗಳು ಮಾತ್ರ ಎಂದು ತಿಳಿದುಬಂತು. ಇದೀಗ ಆಕೆ ಈ ಸುದ್ದಿಗಳನ್ನು ಹರಿಬಿಟ್ಟವರ ವಿರುದ್ದ ಫೈರ್‍ ಆಗಿದ್ದಾರೆ.

ಈ ಬಗ್ಗೆ ರಿಯಾಕ್ಟ್ ಆದ ಪ್ರಗತಿ ಅಂತಹ ಸುದ್ದಿಗಳನ್ನು ನೋಡಿದ ಕೂಡಲೇ ತುಂಬಾನೆ ನೋವಾಗುತ್ತದೆ. ಆ ರೀತಿಯಾಗಿ ಹೇಗೆ ಬರೆಯುತ್ತಾರೆ, ಈ ಬಗ್ಗೆ ಒಮ್ಮೆ ಕೇಳಬೇಕು, ಆಧಾರಗಳಿಲ್ಲದೇ ಆ ರೀತಿಯಾಗಿ ಬರೆಯುವುದು ಸಮಂಜಸವಲ್ಲ. ಒಬ್ಬರ ವೈಯುಕ್ತಿಕ ಜೀವನದ ಬಗ್ಗೆ ಆ ರೀತಿಯಾಗಿ ಬರೆಯುವುದು ತುಂಬಾನೆ ತಪ್ಪು. ನಾನು ನಟಿ ಎಂದು ನಿಮಗೆ ಇಷ್ಟ ಬಂದಂತೆ ಬರೆದರೇ ನಾನು ಅವನ್ನು ಖಂಡಿಸುತ್ತೇನೆ. ಇನ್ನು ಮುಂದೆ ನೀವು ಬರೆಯಬೇಕು ಎಂದು ಕೊಂಡರೇ ಆಧಾರಗಳನ್ನು ಇಟ್ಟುಕೊಂಡು, ನನ್ನನ್ನು ಕೇಳಿ ಬರೆಯಿರಿ ಎಂದು ಆಕ್ರೋಷ ಹೊರಹಾಕಿದ್ದಾರೆ.

ಇನ್ನೂ ಇತ್ತಿಚಿಗೆ ಪ್ರಗತಿ ವೈಟ್ ಲಿಫ್ಟಿಂಗ್ ಸಹ ಮಾಡುತ್ತಿದ್ದಾರೆ. ಕೆಲವೊಂದು ಸ್ಪರ್ಧೆಗಳಲ್ಲಿ ಸಹ ಆಕೆ ಭಾಗಿಯಾಗಿ ಬಹುಮಾನ ಗೆದ್ದಿದ್ದಾರೆ ಎನ್ನಾಲಾಗಿದೆ. ಸದ್ಯ ಪ್ರಗತಿ ತೆಲುಗು, ತಮಿಳು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ಮೆಗಾಸ್ಟಾರ್‍ ಚಿರು ಅಭಿನಯದ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸಿದ್ದರು. ಸುಳ್ಳು ಸುದ್ದಿಗಳನ್ನು ಹರಡುವವರ ಬಗ್ಗೆ ಇದೀಗ ಆಕೆ ಫೈರ್‍ ಆಗಿದ್ದಾರೆ.

Most Popular

To Top