ಬರೊಬ್ಬರಿ ಕೋಟಿ ರೂಪಾಯಿ ಸೇವಾ ಕಾರ್ಯಕ್ರಮಕ್ಕಾಗಿ ದೇಣಿಗೆ ಕೊಟ್ಟ ಕಾಲಿವುಡ್ ಹಿರೋ ಕಾರ್ತಿ…..!

Follow Us :

ಸಿನಿರಂಗದ ಕೆಲ ನಟ-ನಟಿಯರು ಸಿನೆಮಾಗಳ ಜೊತೆಗೆ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಕಾಲಿವುಡ್ ಸ್ಟಾರ್‍ ನಟ ಕಾರ್ತಿ ಸಹ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಬರೊಬ್ಬರಿ ಒಂದು ಕೋಟಿ ರುಪಾಯಿಗಳನ್ನು ಸಾಮಾಜಿಕ ಕಾರ್ಯಕ್ರಮಗಳಿಗಾಗಿ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಮಿಳಿನ ಸ್ಟಾರ್‍ ನಟ ಕಾರ್ತಿ ತನ್ನ ಅಣ್ಣನಾದ ಸೂರ್ಯರವಂತೆ ಒಳ್ಳೆಯ ಮನಸ್ಸುಸಹ ಹೊಂದಿದ್ದಾರೆ. ಒಳ್ಳೆಯ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುತ್ತಾರೆ. ತನ್ನದೇ ಆದ ಒಂದು ಫೌಂಡೇಷನ್ ಮೂಲಕ ಅನೇಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾರೆ. ಈ ಫೌಂಡೇಷನ್ ಮೂಲಕ ಅನೇಕರಿಗೆ ಸಹಾಯಸ್ತವನ್ನು ನೀಡಿದ್ದಾರೆ. ಇದೀಗ ಕಾರ್ತಿ ಜಪಾನ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾ ಆತನ 25ನೇ ಸಿನೆಮಾ ಆಗಿದೆ. ಈ ಸಿನೆಮಾವನ್ನು ಮತಷ್ಟು ವಿಶೇಷವಾಗಿಸಲು ಮತ್ತೊಂದು ಮಹತ್ತರ ಕೆಲಸ ಮಾಡಲು ಕಾರ್ತಿ ಮುಂದಾಗಿದ್ದಾರೆ. ಸುಮಾರು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಳ್ಳುತ್ತಿರುವ ನಟರಲ್ಲಿ ಕಾರ್ತೀ ಸಹ ಒಬ್ಬರಾಗಿದ್ದಾರೆ. ತಮಿಳಿನಲ್ಲಿ ಮಾತ್ರವಲ್ಲೇ ತೆಲುಗಿನಲ್ಲೂ ಸಹ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಕಾರ್ತಿ ಅಭಿನಯದ 25ನೇ ಸಿನೆಮಾ ಜಪಾನ್ ಇದೇ ದಿಪಾವಳಿ ಹಬ್ಬದಂದು ರಿಲೀಸ್ ಮಾಡುತ್ತಿದ್ದಾರೆ.ಈ ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದೆ. ಕಾರ್ತಿ ಕೆರಿಯರ್‍ ನಲ್ಲಿ ಜಪಾನ್ ಸಿನೆಮಾವನ್ನು ಮತಷ್ಟು ಸ್ಪೇಷಲ್ ಮಾಡಲು ಒಂದು ಕೋಟಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲು ದೇಣಿಗೆ ನೀಡಲಿದ್ದಾರೆ. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಬಡವರಿಗೆ ಆಹಾರ ನೀಡಲು ಈ ದೇಣಿಗೆ ನೀಡುತ್ತಿರುವುದಾಗಿ ಹೇಳಲಾಗಿದೆ.

ನಟ ಕಾರ್ತಿ ಕೆರಿಯರ್‍ ನಲ್ಲಿ ಜಪಾನ್ ಸಿನೆಮಾ 25ನೇ ಸಿನೆಮಾ ಆದ ಹಿನ್ನೆಲೆಯಲ್ಲಿ 25 ಲಕ್ಷ ಬಡ ಪಾಠಶಾಲೆಗಳಿಗೆ, 25 ಆಸ್ಪತ್ರೆಗಳಿಗೆ, ಉಳಿದ ಮೊತ್ತವನ್ನು ದಿನಕ್ಕೆ 25 ಸಾವಿರ ಮಂದಿಗೆ ಆಹಾರ ನೀಡಲಿದ್ದಾರೆ. ಈಗಾಗಲೇ ಅನ್ನದಾನ ಕಾರ್ಯಕ್ರಮ ಸಹ ಯಶಸ್ವಿಯಾಗಿ ನೆರವೇರುತ್ತಿದೆ ಎನ್ನಲಾಗಿದೆ. ಇನ್ನೂ ಕಾರ್ತಿ ಹಮ್ಮಿಕೊಂಡ ಈ ಕಾಯಕ್ರಮಗಳಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ಜಪಾನ್ ಸಿನೆಮಾ ಇದೇ ನ.10 ರಂದು ದೀಪಾವಳಿ ಹಬ್ಬದ ಕೊಡುಗೆಯಾಗಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.