Uncategorized

ಆ ನಟನ ಕಾರಣದಿಂದ ಸಿನಿರಂಗದಿಂದ ಹೊರಟು ಹೋಗೋಣ ಎಂದುಕೊಂಡಿದ್ದೆ ಎಂದ ಸೀನಿಯರ ನಟಿ ಪ್ರಗತಿ…..!

90 ರ ದಶಕದಿಂದ ಸಿನಿರಂಗದಲ್ಲಿ ಕಲಾವಿದೆಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡ ನಟಿ ಪ್ರಗತಿ ಇತರೆ ನಟಿಯರಂತೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಕೆಲವೊಂದು ಸಿನೆಮಾಗಳಲ್ಲಿ ನಟಿಯಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಅತ್ತೆ, ತಾಯಿ ಮೊದಲಾದ ಪಾತ್ರಗಳಲ್ಲಿ ಸಿನಿ ರಸಿಕರನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ತನ್ನ ಕೆರಿಯರ್‍ ಆರಂಭದಲ್ಲಿ ಜರುಗಿದ ಕೆಲವೊಂದು ಘಟನೆಗಳನ್ನು ಆಕೆ ಸಂದರ್ಶನಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸೀನಿಯರ್‍ ನಟಿ ಪ್ರಗತಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ವಯಸ್ಸಿಗೆ ಸಂಬಂಧವಿಲ್ಲ ಎಂಬಂತೆ ಹೆವಿ ವರ್ಕೌಟ್, ಡ್ಯಾನ್ಸ್, ರೀಲ್ಸ್ ಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿರುತ್ತಾರೆ. ಆಕೆಯ ಪೋಸ್ಟ್ ಗಳಿಗೆ ಅನೇಕರು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಆದರೆ ಪ್ರಗತಿ ಮಾತ್ರ ಅದ್ಯಾವುದಕ್ಕೂ ತಲೆಗೆಡಿಸಿಕೊಳ್ಳದೇ ತನ್ನಿಷ್ಟದಂತೆ ನಡೆಯುತ್ತಿರುತ್ತಾರೆ. ಇನ್ನೂ ಆಕೆ ಅನೇಕ ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಿರುತ್ತಾರೆ. ಸಂದರ್ಶನದಲ್ಲಿ ಆಕೆ ನೀಡುವ ಹೇಳಿಕೆಗಳು ಸಹ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿರುತ್ತವೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ.

ನಟಿ ಪ್ರಗತಿ ಕೆರಿಯರ್‍ ಆರಂಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರಂತೆ. ಆಕೆಯ ಕೆರಿಯರ್‍ ನಲ್ಲಿ ಎದುರಿಸಿದಂತಹ ಸಮಸ್ಯೆಗಳನ್ನು ಇತ್ತೀಚಿಗೆ ಆಕೆ ಭಾಗಿಯಾಗುವಂತಹ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಮತ್ತಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಮನೆಯಲ್ಲಿ ಕುಳಿತು ತಿಂದುಕೊಂಡು ಇರುತ್ತೀಯಾ ಎಂದು ಆಕೆಯ ತಾಯಿ ನಿಂದಿಸಿದ ಮಾತುಗಳು ಆಕೆಗೆ ಕಷ್ಟಗಳು ಶುರುವಾಯ್ತಂತೆ. ಸಂಪಾದನೆ ಮಾಡಲು ಪಿಜಾ, ಎಸ್.ಟಿ.ಡಿ ಬೂತ್ ಗಳಲ್ಲೂ ಸಹ ಆಕೆ ಕೆಲಸ ಮಾಡಿದ್ದರಂತೆ. ಬಳಿಕ ಸಿನೆಮಾಗಳಲ್ಲಿ ಅವಕಾಶಗಳು ಬಂದ ಹಿನ್ನೆಲೆಯಲ್ಲಿ ಮಾಡಲಿಂಗ್ ಗೆ ಎಂಟ್ರಿ ಕೊಟ್ಟೆ. ಮಾಡಲಿಂಗ್ ಬಳಿಕ ಸಿನೆಮಾಗಳಲ್ಲಿನ ಆಫರ್‍ ಗಳನ್ನು ಸಹ ಪಡೆದುಕೊಂಡೆ. ಆದರೆ ಹಿರೋಯಿನ್ ಪಾತ್ರಗಳು ನನಗೆ ಕೂಡಿ ಬರಲಿಲ್ಲ. ಒಂದು ಸಮಯದಲ್ಲಿ ಓರ್ವ ಹಿರೋ , ನಿರ್ಮಾಪಕ ನನಗೆ ತುಂಬಾ ಕಿರಿಕಿರಿ ಕೊಟ್ಟರು. ಆತನಿಂದ ಸಿನಿರಂಗ ಬಿಟ್ಟು ಹೋಗಬೇಕು ಎಂದುಕೊಂಡಿದ್ದೆ. 20ನೇ ವಯಸ್ಸಿನಲ್ಲಿಯೇ ಮದುವೆಯಾದೆ. ಬಳಿಕ ಪತಿಯೊಂದಿಗೆ ವಿಬೇದಗಳು ಹುಟ್ಟಿಕೊಂಡು ವಿಚ್ಚೇದನ ಪಡೆದುಕೊಂಡೆ. ಮುಂದೆ ಮತ್ತೆ ಮದುವೆಯಾಗುವ ಆಲೋಚನೆ ಸಹ ಇಲ್ಲ ಎಂದಿದ್ದಾರೆ.

ಸದ್ಯ ನನಗೆ ಅವಕಾಶಗಳು ಚೆನ್ನಾಗಿಯೇ ಬರುತ್ತಿದೆ. ಆದರೆ ಈ ಹಿಂದೆ ಆಕೆ ನೀಡಿದ ಹೇಳಿಕೆಗಳು ಸಹ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಆಕೆ ನೀಡಿದ ಕಾಮೆಂಟ್ ಗಳು ವೈರಲ್ ಆಗುತ್ತಿವೆ.  ಇನ್ನೂ ಪ್ರಗತಿಗೆ ಅಷ್ಟೊಂದು ಕಿರಿಕಿರಿ ಕೊಟ್ಟಂತಹ ನಿರ್ಮಾಪಕ ಯಾರು ಎಂಬುದು ಮಾತ್ರ ಆಕೆ ಹೇಳಿಲ್ಲ. ಸೌತ್ ನಲ್ಲಿ ಆಕೆ ಎಲ್ಲಾ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಸಹ ಸದ್ದು ಮಾಡುತ್ತಿರುತ್ತಾರೆ.

Most Popular

To Top