Film News

ಶಾಂತಾನು ಹಜಾರಿಕಾ ರನ್ನು ಗುಟ್ಟಾಗಿ ಮದುವೆಯಾದ್ರಾ ಶ್ರುತಿ ಹಾಸನ್, ಈ ಬಗ್ಗೆ ಸ್ಪಷ್ಟನೆ ನೀಡಿದ ಸ್ಟಾರ್ ನಟಿ…..!

ಸೌತ್ ಸಿನಿರಂಗದ ಸ್ಟಾರ್‍  ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಖತ್ ಸುದ್ದಿಯಾಗುತ್ತಿರುತ್ತಾರೆ. ಸುಮಾರು ಎರಡು ವರ್ಷಗಳಿಂದ ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಸುಮಾರು ದಿನಗಳಿಂದ ಇಬ್ಬರೂ ಸಹಜೀವನ ಸಹ ನಡೆಸುತ್ತಿದ್ದಾರೆ. ಜೊತೆಗೆ ಮುಂಬೈನಲ್ಲಿ ಪ್ಲಾಟ್ ಒಂದನ್ನು ಖರಿದೀಸಿ ಅದರಲ್ಲೇ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ಇದೀಗ ಅವರು ಗುಟ್ಟಾಗಿ ಮದುವೆಯಾದ್ರಾ ಎಂಬ ಸುದ್ದಿಯೊಂದು ಕೇಳಿಬರುತ್ತಿದ್ದು, ಅದಕ್ಕೆ ಶ್ರುತಿ ಹಾಸನ್ ಸ್ಪಷ್ಟನೆ ಸಹ ನೀಡಿದ್ದಾರೆ.

ಸಿನಿರಂಗದಲ್ಲಿ ಅನೇಕ ನಟಿಯರು ತಮ್ಮ ರಿಲೇಷನ್ ಶಿಪ್ ಬಗ್ಗೆ ಸೀಕ್ರೇಟ್ ಆಗಿಯೇ ಇಡುತ್ತಾರೆ. ಆದರೆ ಶ್ರುತಿ ಹಾಸನ್ ಮಾತ್ರ ಎಲ್ಲರಿಗಿಂತಲೂ ವಿಭಿನ್ನ ಎಂದೇ ಹೇಳಬಹುದು. ಆಕೆ ಪಾಶ್ವಾತ್ಯ ಸಂಸ್ಕೃತಿಯನ್ನು ಫಾಲೋ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ರಿಲೇಷನ್ಸ್, ಅಫೈರ್‍ ಬಗ್ಗೆ ಒಪೆನ್ ಆಗಿಯೇ ಮಾಡುತ್ತಿದ್ದಾರೆ. ಆಕೆ ತನ್ನ ಅಫೈರ್‍ ಬಗ್ಗೆ ಯಾವುದೇ ರೀತಿಯಲ್ಲೂ ನಿಗೂಡವಾಗಿ ಇಡಲಿಲ್ಲ. ಸುಮಾರು ದಿನಗಳ ಕಾಲ ಲಂಡನ್ ಮೂಲದ ಮೈಖಲ್ ಕೊರ್ಸ್ಲೆ ಎಂಬಾತನೊಂದಿಗೆ ಡೇಟಿಂಗ್ ನಡೆಸಿದರು. ಆತನೊಂದಿಗೆ ಸಹಜೀವನ ಸಹ ನಡೆಸಿದ್ದರು. ಬಳಿಕ ಆಕೆ ಆತನೊಂದಿಗೆ ಬ್ರೇಕಪ್ ಮಾಡಿಕೊಂಡರು. ಬಳಿಕ ಆಕೆ ಖ್ಯಾತ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಸದಾ ಅವರಿಬ್ಬರೂ ಕ್ಲೋಜ್ ಆಗಿ ಪೊಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ಶ್ರುತಿ ಹಾಸನ್ ಸಲಾರ್‍ ಸಿನೆಮಾದ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಡಿ.22 ರಂದು ತೆರೆಕಂಡ ಈ ಸಿನೆಮಾ ಭಾರಿ ಯಶಸ್ಸು ಕಂಡುಕೊಂಡಿದೆ. ಇದೀಗ ಶ್ರುತಿ ಹಾಸನ್ ಮದುವೆಯ ಬಗ್ಗೆ ಗಾಸಿಫ್ ಒಂದು ಭಾರಿ ಸದ್ದು ಮಾಡುತ್ತಿದೆ. ಇತ್ತೀಚಿಗೆ ಬಾಲಿವುಡ್ ಸೆಲೆಬ್ರೆಟಿಗಳ ಫ್ರೆಂಡ್ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಅಭಿಮಾನಿಯೊಬ್ಬರ ಬಳಿ ಶ್ರುತಿ ಹಾಸನ್ ಗಂಡನ ನನ್ನ ಸ್ನೇಹಿತ ಎಂದು ಹೇಳಿದ್ದ. ಈ ಕಾರಣದಿಂದ ಶ್ರುತಿ ಹಾಸನ್ ಹಾಗೂ ಶಾಂತಾನು ಹಜಾರಿಕಾ ಜೊತೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಅನುಮಾನ ಹರಿದಾಡಿತ್ತು. ಇದೀಗ ಆಕೆ ಸ್ಪಷ್ಟನೆ ನೀಡಿದ್ದಾರೆ. ನಾನು ಮದುವೆಯಾಗಿಲ್ಲ. ಎಲ್ಲರದ ಬಗ್ಗೆ ತಿಳಿಸುವ ನಾನು ಮದುವೆ ವಿಚಾರ ಮಾತ್ರ ಏಕೆ ಮುಚ್ಚಿಡುತ್ತೇನೆ. ನನ್ನ ಬಗ್ಗೆ ಏನು ಗೊತ್ತಿಲ್ಲದಂತಹವರು ಪ್ಲೀಸ್ ಸುಮ್ಮನಿರಿ ಎಂದು ಸೋಷಿಯಲ್ ಮಿಡಿಯಾ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ.

Most Popular

To Top