ಕಾಸ್ಟ್ಲಿ ಲಿಪ್ ಲಾಕ್ ದೃಶ್ಯದ ಬಗ್ಗೆ ದಶಕಗಳ ಬಳಿಕ ವಿಚಾರ ವ್ಯಕ್ತಪಡಿಸಿದ ಸೀನಿಯರ್ ನಟಿ ಮಾಧುರಿ ದೀಕ್ಷಿತ್…!

Follow Us :

ಇಂದಿನ ಸಿನೆಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳು ಸಾಮಾನ್ಯವಾಗಿರುತ್ತದೆ. ಆದರೆ 80-90 ರ ದಶಕದಲ್ಲಿ ಲಿಪ್ ಲಾಕ್, ರೊಮ್ಯಾನ್ಸ್ ಎಂಬ ದೃಶ್ಯಗಳು ಎಂದರೇ ತುಂಬಾನೆ ಸಂಚಲನ ಸೃಷ್ಟಿ ಮಾಡುತ್ತಿತ್ತು. ವಿವಿಧ ರೀತಿಯ ವಿಮರ್ಶೆಗಳು, ಟೀಕೆಗಳು ಸಹ ಎದುರಾಗುತ್ತಿತ್ತು. ಇನ್ನೂ ಈ ದೃಶ್ಯಗಳಲ್ಲಿ ನಟಿಸಿದ ನಟ/ನಟಿಯರಿಗೆ ಎಲ್ಲಾ ಕಡೆ ಪ್ರಶ್ನೆಗಳು ಎದುರಾಗುತ್ತಲೇ ಇತ್ತು. ಈ ಹಾದಿಯಲ್ಲೇ ಸೀನಿಯರ್‍  ನಟಿ ಮಾಧುರಿ ದೀಕ್ಷಿತ್ ಸಹ ಲಿಪ್ ಲಾಕ್ ದೃಶ್ಯ ವೊಂದರಲ್ಲಿ ನಟಿಸಿದ್ದು, ಆಕೆ ಸಹ ಅನೇಕ ಪ್ರಶ್ನೆಗಳನ್ನು ಎದುರಿಸಿದ್ದರಂತೆ. ಇದೀಗ ಮತ್ತೊಮ್ಮೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಮಾಧುರಿ.

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ತುಂಬಾನೆ ಕ್ರೇಜ್ ಉಳ್ಳ ನಟಿಯಾಗಿದ್ದರು. ತೆಲುಗಿನಲ್ಲೂ ಸಹ ಆಕೆಗೆ ಒಳ್ಳೆಯ ಪ್ಯಾನ್ ಫಾಲೋಯಿಂಗ್ ಇದೆ. ಅಂದಿನ ಸಮಯದಲ್ಲಿ ಅನೇಕ ಲವ್ ಸ್ಟೋರಿ ಸಿನೆಮಾಗಳಲ್ಲಿ ನಟಿಸಿ ಯುವಕರನ್ನು ಸೆಳೆದಿದ್ದರು. ಅಮಿತಾಭ್, ಸಲ್ಮಾನ್, ಅಮೀರ್‍, ಅಕ್ಷಯ್ ಸೇರಿದಂತೆ ಅನೇಖ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸಿದ್ದರು. ಬಳಿಕ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡರು. ಅಂದಿನ ಸಮಯದಲ್ಲಿ ಆಕೆಯ ಕಾಲ್ ಶೀಟ್ ಸಹ ದೊರೆಯುವುದು ತುಂಬಾನೆ ಕಷ್ಟವಾಗಿತ್ತು ಎಂದು ಸಹ ಹೇಳಲಾಗುತ್ತಿತ್ತು. ಇನ್ನೂ ಸ್ಟಾರ್‍ ನಟ ಸಂಜಯ್ ದತ್ ರವರೊಂದಿಗೆ ಪ್ರೀತಿಗೆ ಬಿದ್ದಿದ್ದು, ಬಳಿಕ ಬ್ರೇಕಪ್ ಆಗಿದ್ದು, ಬಳಿಕ ಡಿಪ್ರೆಷನ್ ಗೂ ಸಹ ಗುರಿಯಾಗಿದ್ದರು ಎಂಬ ಸುದ್ದಿ ಸಹ ಹರಿದಾಡಿತ್ತು. ಇಬ್ಬರಿಗೂ ಹೊಂದಾಣಿಕೆಯಾಗದ ಕಾರಣ ಇಬ್ಬರೂ ಬೇರೆಯಾದರು.

ಇನ್ನೂ ಮಾಧುರಿ ದೀಕ್ಷಿತ್ ಫಿರೋಜ್ ಖಾನ್ ಎಂಬ ನಿರ್ದೇಶಕನ ದಯಾವನ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ 1988 ರಲ್ಲಿ ತೆರೆಗೆ ಬಂತು. ಈ ಸಿನೆಮಾದಲ್ಲಿ ವಿನೊದ್ ಖನ್ನಾ ಹಾಗೂ ಮಾಧುರಿ ದೀಕ್ಷಿತ್ ಜೋಡಿಯಾಗಿ ನಟಿಸಿದ್ದರು. ಇನ್ನೂ ಈ ಸಿನೆಮಾದಲ್ಲಿ ಕೆಲವೊಂದು ಬೋಲ್ಡ್ ದೃಶ್ಯಗಳಿದ್ದವು. ಅವರಿಬ್ಬರ ನಡುವೆ ಇಂಟಿಮೇಟ್ ಸೀನ್ ಗಳ ಜೊತೆಗೆ ಲಿಪ್ ಲಾಕ್ ಸಹ ಇತ್ತು. ಈ ಕಾರಣದಿಂದ ಆಕೆ ಅಂದು ತುಂಬಾನೆ ಟ್ರೋಲ್ ಆಗಿದ್ದರಂತೆ. ಆದರೆ ನಿರ್ದೇಶಕರು ಹಾಗೂ ನಿರ್ಮಾಪಕರು ಆಕೆಗೆ ಕೋಟಿ ರೂಪಾಯಿ ಆಫರ್‍ ನೀಡಿದ್ದು ಅದಕ್ಕೆ ಒಪ್ಪಿಕೊಂಡರಂತೆ. ಈ ಕಾರಣದಿಂದ ಆಕೆ ತನ್ನ ಅಭಿಮಾನಿಗಳಿಂದಲೂ ಸಹ ಟ್ರೋಲ್ ಆಗಿದ್ದರು.

ಸುಮಾರು 35 ವರ್ಷಗಳ ಬಳಿಕ ನಡೆದ ಈ ವಿಚಾರವನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ ಮಾಧುರಿ ದೀಕ್ಷಿತ್. ನಾನು ಆ ಸನ್ನಿವೇಶದಲ್ಲಿ ನಟಿಸಬಾರದಿತ್ತು ಎಂದು ಇದೀಗ ದುಃಖಪಟ್ಟಿದ್ದಾರೆ. ಲಿಪ್ ಲಾಕ್ ನಂತಹ ದೃಶ್ಯಗಳು ಇದೀಗ ಕಾಮನ್ ಆದರೆ ಅಂದಿನ ಕಾಲದಲ್ಲಿ ಅದು ತುಂಬಾ ದೊಡ್ಡ ವಿಚಾರವಾಗಿರುತ್ತಿತ್ತು.