Film News

ಮಂಚು ಮನೋಜ್ ಮದುವೆ ಸಂಭ್ರಮ ಶುರು, ಮದುವೆಗಾಗಿ ಮಹಾ ಮಂತ್ರ ಪೂಜೆ ನಿರ್ವಹಿಸಿದ ಮಂಚು ಕುಟುಂಬ…!

ಸುಮಾರು ದಿನಗಳಿಂದ ಮಂಚು ಮೋಹನ್ ಬಾಬು ಪುತ್ರ ಮಂಚು ಮನೋಜ್ ಹಾಗೂ ರಾಜಕಾರಣಿ ಭೂಮಾ ನಾಗಿರೆಡ್ಡಿ ಎಂಬುವವರ ಪುತ್ರಿ ಭೂಮಾ ಮೋನಿಕಾ ರೆಡ್ಡಿ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಈ ಹಿಂದೆ ಅನೇಕ ಬಾರಿ ಅವರ  ಮದುವೆಯ ಬಗ್ಗೆ ಪ್ರಸ್ತಾಪಗಳು ಬಂದಿದೆ. ಇದೀಗ ಅವರ ಮದುವೆ ದಿನಾಂಕದ ಬಗ್ಗೆ ಸುದ್ದಿ ಕೇಳಿಬರುತ್ತಿದ್ದು, ಅದರಂತೆ ಮಾರ್ಚ್-3 ರಂದು ಮನೋಜ್ ಹಾಗೂ ಮೋನಿಕಾ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಮದುವೆ ಕೆಲಸಗಳನ್ನು ಮಂಚು ಲಕ್ಷ್ಮೀ ರವರೇ ಮುಂದೆ ನಿಂತು ನೋಡಿಕೊಳ್ಳುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಮಂಚು ಮನೋಜ್ ಹಾಗೂ ಭೂಮಾ ಮೋನಿಕ ರವರ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಮಾರ್ಚ್-3 ರಂದು ಅವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಅವರ ಮದುವೆ ಎಲ್ಲಿ ನಡೆಯಲಿದೆ ಎಂಬ ಸುದ್ದಿ ಸಹ ಇನ್ನೂ ತಿಳಿದು ಬಂದಿಲ್ಲ. ಆದರೆ ಮದುವೆ ಮಾತ್ರ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಇದೀಗ ಮಂಚು ಲಕ್ಷ್ಮೀ ಮನೆಯಲ್ಲಿ ಒಂದು ಪೂಜಾ ಕಾರ್ಯಕ್ರಮ ನೆರವೇರುತ್ತಿದೆ. ಮಹಾ ಮಂತ್ರ ಯಾಗ ಎಂಬ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಂಬಂಧ ಮಂಚು ಲಕ್ಷ್ಮೀ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಗಳು ಹಾಜರಾಗಿದ್ದರು ಎನ್ನಲಾಗಿದೆ. ಇನ್ನೂ ಈ ಸಂಬಂಧ ಕೆಲವೊಂದು ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಸಹ ಆಗುತ್ತಿವೆ.

ಕಳೆದ ವರ್ಷ ಗಣೇಶ ಉತ್ಸವದ ಸಮಯದಲ್ಲಿ ಮನೋಜ್ ಹಾಗೂ ಮೋನಿಕಾ ಜೋಡಿಯಾಗಿ ಭಾಗವಹಿಸಿ ಪ್ರತ್ಯೇಕ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅಂದಿನಿಂದ ಇವರಿಬ್ಬರ ಬಗ್ಗೆ ರೂಮರ್‍ ಗಳು ಹುಟ್ಟಿಕೊಂಡವು. ಸುಮಾರು ದಿನಗಳಿಂದ ಇವರಿಬ್ಬರೂ ಅತ್ಯಂತ ಹತ್ತಿರವಾಗಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಒಂದೇ ಮನೆಯಲ್ಲಿ ಸಹಜೀವನ ಸಹ ನಡೆಸುತ್ತಿದ್ದಾರೆ ಎಂದೂ ಸಹ ಸುದ್ದಿಗಳು ಕೇಳಿಬಂದಿತ್ತು. ಇದೀಗ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಇನ್ನೂ ಈಗಾಗಲೇ ಮನೋಜ್ ಹಾಗೂ ಮೋನಿಕಾರವರಿಗೆ ಬೇರೆಯವರೊಂದಿಗೆ ಮದುವೆಯಾಗಿತ್ತು. ಮನೋಜ್ ಪ್ರಣತಿ ಎಂಬಾಕೆಯೊಂದಿಗೆ ಮದುವೆಯಾಗಿ ವಿಚ್ಚೇದನ ಪಡೆದುಕೊಂಡಿದ್ದರು. ಮೋನಿಕಾ ಸಹ ತನ್ನ ಪತಿಯೊಂದಿಗೆ ಬೇರೆಯಾಗಿದ್ದಾರೆ.

ಇನ್ನೂ ಮದುವೆಗೂ ಮುಂಚೆಯೇ ಮೋನಿಕಾ ಹಾಗೂ ಮನೋಜ್ ಗೆ ಪರಿಚಯ ಇತ್ತು ಎನ್ನಲಾಗಿದೆ. ಆದರೆ ಅವರಿಬ್ಬರಿಗೂ ಬೇರೆಯವರೊಂದಿಗೆ ಮದುವೆಯಾಗಿದೆ. ಇದೀಗ ಮನೋಜ್ ಹಾಗೂ ಭೂಮಿಕಾ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಈ ಮದುವೆ ಮನೋಜ್ ತಂದೆ ಮೋಹನ್ ಬಾಬು ರವರಿಗೆ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಮನೋಜ್ ಕುಟುಂಬದಿಂದ ದೂರವಿದ್ದಾರೆ ಎಂದೂ ಸಹ ಹೇಳಲಾಗಿತ್ತು. ಆದರೆ ಮಂಚು ಲಕ್ಷ್ಮೀ ಇದೆಲ್ಲಾ ರೂಮರ್‍ ಗಳಷ್ಟೆ ಎಂದು ಹೇಳಿದ್ದರು. ಇನ್ನೂ ಮನೋಜ್ ಹಾಗೂ ಭೂಮಿಕ ಮದುವೆ ನಡೆಯುತ್ತಾ ಅಥವಾ ಇದೂ ರೂಮರ್‍ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top