Film News

ಅಮೀಷಾ ಪಟೇಲ್ ಹುಟ್ಟುಹಬ್ಬದಂದು ಬೋಲ್ಡ್ ಪೊಟೋಗಳನ್ನು ಶೇರ್ ಮಾಡಿ ಶುಭ ಕೋರಿದ ಅಭಿಮಾನಿಗಳು…!

ಸುಮಾರು ವರ್ಷಗಳ ಹಿಂದೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ತುಂಬಾನೆ ಕ್ರೇಜ್ ಹೊಂದಿರುವ ನಟಿಯರಲ್ಲಿ ಅಮಿಷಾ ಪಟೇಲ್ ಸಹ ಒಬ್ಬರಾಗಿದ್ದಾರೆ. ಶೀಘ್ರದಲ್ಲೆ ಆಕೆ ಆಫ್ ಸೆಂಚುರಿಗೆ ಹತ್ತಿರದಲ್ಲೇ ಇದ್ದಾರೆ. ಆದರೂ ಸಹ ಆಕೆಯ ಹಾಟ್ ನೆಸ್ ಯಂಗ್ ಬ್ಯೂಟಿಯರನ್ನೂ ಸಹ ಹಿಂದೆ ಹಾಕುತ್ತಿದೆ. ಮೊದಲಿನಷ್ಟೆ ಎನರ್ಜಿ, ಮೊದಲಿನಷ್ಟೆ ಹಾಟ್ ನೆಸ್ ಪ್ರದರ್ಶನ ಮಾಡುತ್ತಾ ತಾನು ಇನ್ನೂ ಸಿನೆಮಾಗಳಲ್ಲಿ ನಟಿಯಾಗಲು ಫಿಟ್ ಆಗಿದ್ದೇನೆ ಎಂಬಂತೆ ಪೋಸ್ ಕೊಟ್ಟಿದ್ದಾರೆ. ಇದೀಗ ಆಕೆಯ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಟ್ ಪೊಟೋಗಳನ್ನು ವೈರಲ್ ಮಾಡುತ್ತಾ ಶುಭಾಷಯಗಳನ್ನು ಕೋರಿದ್ದಾರೆ.

ಹಾಟ್ ನಟಿ ಅಮಿಷಾ ಪಟೇಲ್ ಕಹೋನಾ ಪ್ಯಾರ್‍ ಹೈ ಎಂಬ ಹಿಂದಿ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡ ಈ ಬ್ಯೂಟಿ ಬಳಿಕ ಕೂಡಲೇ ತೆಲುಗು ಸಿನೆಮಾದಲ್ಲಿ ಕಾಣಿಸಿಕೊಂಡರು. ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಜೊತೆಗೆ ಬದ್ರಿ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಬಳಿಕ ಆಕೆ ಬಾಲಿವುಡ್ ಸಿನೆಮಾಗಳಲ್ಲೇ ಹೆಚ್ಚು ನಟಿಸಿದರು. ಆದರೂ ಸಹ ಅಮಿಷಾ ಪಟೇಲ್ ರನ್ನು ತೆಲುಗು ಪ್ರೇಕ್ಷಕರು ಫಾಲೋ ಮಾಡುತ್ತಲೇ ಇದ್ದಾರೆ. ಈ ಹಾದಿಯಲ್ಲೇ ಅಮಿಷಾ ಮಹೇಶ್ ಬಾಬು ಜೊತೆಗೆ ನಾನಿ, ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ ನರಸಿಂಹುಡು ಹಾಗೂ ಬಾಲಕೃಷ್ಣ ಜೊತೆಗೆ ಪರಮವೀರ ಚಕ್ರ ಸಿನೆಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಬಳಿಕ ಆಕೆ ಬಾಲಿವುಡ್ ಸಿನೆಮಾಗಳ ಮೇಲೆ ಪೋಕಸ್ ಮಾಡಿದ್ದರು. ಇನ್ನೂ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದಾರೆ.

ನಟಿ ಅಮಿಷಾ ಪಟೇಲ್ ಜೂ.9 ಕ್ಕೆ 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಮಿಷಾ ಪಟೇಲ್ ರವರಿಗೆ ಅಭಿಮಾನಿಗಳು ನೆಟ್ಟಿಗರೂ ಸೇರಿದಂತೆ ಅನೇಕ ಸಿನೆಮಾ ಸೆಲೆಬ್ರೆಟಿಗಳು ಶುಭಾಷಗಳನ್ನು ಕೋರಿದ್ದಾರೆ. ಬದ್ರಿ ಸಿನೆಮಾದ ಬಳಿಕ ಅಮಿಷಾ ನಟಿಸಿದ ಯಾವುದೇ ಸಿನೆಮಾಗಳು ಆಕೆಗೆ ಬ್ರೇಕ್ ನೀಡಲಿಲ್ಲ ಎಂದೇ ಹೇಳಬಹುದಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆಯನ್ನು ಗ್ಲಾಮರ್‍ ಬಾಂಬ್ ಎಂದೇ ಕರೆಯಲಾಗುತ್ತದೆ. 47 ವಯಸ್ಸಾದರೂ ಸಹ ಯಂಗ್ ನಟಿಯರನ್ನು ಮೀರಿಸುವಂತೆ ಗ್ಲಾಮರಸ್ ಆಗಿ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್ ಗಳಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳ್ನನು ನೀಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ.

ಇದೀಗ ಆಕೆಯ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಶುಭಾಷಯಗಳನ್ನು ಕೊರುತ್ತಿದ್ದಾರೆ.  ಇನ್ನೂ ವಯಸ್ಸು 47 ಆದರೂ ಸಹ ಆಕೆ ಇನ್ನೂ ಮದುವೆಯಾಗಿಲ್ಲ. ಸದ್ಯ ಆಕೆ ಗದರ್‍ 2 ಎಂಬ ಸಿನೆಮಾದಲ್ಲಿ ಸನ್ನಿ ಡಿಯೋಲ್ ಜೊತೆಗೆ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾ ಇದೇ ಆಗಸ್ಟ್ 11 ರಂದು ರಿಲೀಸ್ ಆಗಲಿದೆ.

Most Popular

To Top