ಮಹೇಶ್ ಬಾಬು ಹಾಗೂ ನನ್ನ ವಯಸ್ಸು ಒಂದೇ, ಆತನ ತಾಯಿಯಾಗಿ ನಟಿಸಲಾರೆ ಎಂದ ಫೈರಿಂಗ್ ಸ್ಟಾರ್ ಕಸ್ತೂರಿ…!

Follow Us :

ದಶಕಗಳ ಹಿಂದೆ ಸೌತ್ ನಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದ ಕಸ್ತೂರಿ ಇದೀಗ ಸೀರಿಯಲ್ ಗಳಲ್ಲಿ ಫೇಂ ಪಡೆದುಕೊಂಡಿದ್ದಾರೆ. ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನಟಿಸುತ್ತಿದ್ದಾರೆ. ತಮಿಳಿನ ಬಿಗ್ ಬಾಸ್ ಶೋ ನಲ್ಲೂ ಸಹ ಭಾಗವಹಿಸಿದ್ದರು. ಜೊತೆಗೆ ಆಕೆಯನ್ನು ಫೈರಿಂಗ್ ಸ್ಟಾರ್‍ ಎಂದೇ ಕರೆಯಲಾಗುತ್ತದೆ. ಸಂದರ್ಶನಗಳಲ್ಲಿ ಭಾಗಿಯಾಗುತ್ತಾ ಆಕೆ ಫೈರ್‍ ಆಗುವಂತಹ ಕಾಮೆಂಟ್ ಮಾಡುತ್ತಿರುತ್ತಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸೌತ್ ನಲ್ಲಿ ಫೈರ್‍ ಬ್ರಾಂಡ್ ಎಂದೇ ಕರೆಯಲಾಗುವ ನಟಿ ಕಸ್ತೂರಿ ನಟಿಸಿದ್ದು, ಕೆಲವೇ ಸಿನೆಮಾಗಳಲ್ಲಾದರೂ ಒಳ್ಳೆಯ ಖ್ಯಾತಿ ಪಡೆದುಕೊಂಡರು. ಆಕೆಯ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಅತೀ ಕಡಿಮೆ ವಯಸ್ಸಿನಲ್ಲೇ ಆಕೆ ಮದುವೆಯಾದರು. ಮದುವೆಯಾದ ಬಳಿಕ ಸಿನಿರಂಗದಿಂದ ದೂರವೇ ಉಳಿದಿದ್ದರು. ಸಿನೆಮಾಗಳಿಂದ ದೂರವಾದ ಬಳಿಕ ಆಕೆ ವಿದೇಶದಲ್ಲಿ ಸೆಟಲ್ ಆದರು. ಇತ್ತೀಚಿಗಷ್ಟೆ ಆಕೆ ಮತ್ತೆ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟರು. ಸೀರಿಯಲ್ ಹಾಗೂ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯುಸಿಯಾಗಿರುವ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ತುಂಬಾನೆ ಆಕ್ಟೀವ್ ಆಗಿರುತ್ತಾರೆ.

ಸಂದರ್ಶನವೊಂದರಲ್ಲಿ ಕಸ್ತೂರಿ ಮಾತಾಡುತ್ತಾ, ನನಗೆ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಜೊತೆಗೆ ನಟಿಸುವ ಅವಕಾಶ ಮೂರು ಬಾರಿ ಬಂದಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅವಕಾಶಗಳು ಕೈ ಜಾರಿತ್ತು. ಜೆಂಟಿಲ್ ಮೆನ್ ಹಿಂದಿ ವರ್ಷನ್ ನಲ್ಲಿ ಚಿರಂಜೀವಿ ಪಕ್ಕ ನಟಿಸುವ ಅವಕಾಶ ಬಂದಿತ್ತು. ಅದೇ ಸಮಯದಲ್ಲಿ ನನಗೆ ಟೈಫಾಯಿಡ್ ಬಂದ ಹಿನ್ನೆಲೆಯಲ್ಲಿ ಆ ಅವಕಾಶ ಹೋಯ್ತು. ಕಳೆದ ವರ್ಷ ರಿಲೀಸ್ ಆದ ಡೆವಿಲ್ ಸಿನೆಮಾದಲ್ಲಿ ಸೀತ ಮಾಡಿದ ಪಾತ್ರ ಸಹ ನನಗೆ ಮೊದಲು ಬಂದಿತ್ತು. ಈ ಸಿನೆಮಾಗೆ ಸೈನ್ ಮಾಡಿದ ಬಳಿಕ ನಾನು ಯಂಗ್ ಆಗಿ ಕಾಣಿಸುತ್ತಿದ್ದೀನಿ ಅಂತಾ ನನ್ನ ತೆಗೆದು ಹಾಕಿದರು. ಕಾಲಾ ಸಿನೆಮಾದಲ್ಲೂ ಸಹ ರಜನಿಕಾಂತ್ ಪಕ್ಕ ನಾನು ಯಂಗ್ ಆಗಿ ಕಾಣಿಸುತ್ತೀನಿ ಅಂತಾ ನನ್ನ ಬದಲಿಗೆ ಈಶ್ವರಿ ರಾವ್ ರನ್ನು ಸೆಲೆಕ್ಟ್ ಮಾಡಿದ್ದಾರೆ ಎಂದರು.

ನಾನು ಹೆಚ್ಚು ವಯಸ್ಸಾದವಳಂತೆ ಕಾಣಿಸೊಲ್ಲ, ಅದೇ ನನ್ನ ಸಮಸ್ಯೆ, ನನ್ನ ಮುಖದಲ್ಲಿ ವಯಸ್ಸು ಕಾಣಿಸೊಲ್ಲ. ಈಗಲೂ ಬಿಳಿ ಕೂದಲು ಬರೊಲ್ಲ. ಅದಕ್ಕಾಗಿ ಕೆಲವೊಂದು ಸಿನೆಮಾಗಳಿಗೆ ನಾನೇ ಬಿಳಿ ಕೂದಲು ಹಾಕಿಕೊಳ್ಳು‌ತ್ತೇನೆ. ತಾಯಿ ಪಾತ್ರಗಳು ಬರುತ್ತಿವೆ. ಆದರೆ ಹೇಗೆ ಮಾಡೋಕೆ ಆಗುತ್ತೆ. ನನ್ನದು ಹಾಗೂ ಮಹೇಶ್ ಬಾಬು ಇಬ್ಬರ ವಯಸ್ಸು ಒಂದೇ, ಆತನಿಗೆ ಜೋಡಿಯಾಗಿ ಹೇಗೆ ನಟಿಸಬಹುದು, ತಾಯಿಯಾಗಿ ಹೇಗೆ ಮಾಡೋಕೆ ಸಾಧ್ಯ, ನೋಡಕೆ ಚೆನ್ನಾಗಿರೊಲ್ಲ ಎಂದು ಕಸ್ತೂರಿ ಹೇಳಿದ್ದು ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.