ಕ್ಯೂಟಿ, ಇಬ್ಬರನ್ನೂ ಹ್ಯಾಂಡಲ್ ಮಾಡೋಕೆ ಆಗುತ್ತಾ ಎಂದ ಅಲ್ಲು ಅರ್ಜುನ್, ವೈರಲ್ ಆದ ಪೋಸ್ಟ್….!

Follow Us :

ರಾಷ್ಟ್ರೀಯ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡ ನಟ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಇಡೀ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡರು. ವಿವಿಧ ದೇಶಗಳಲ್ಲಿ ಅವರಿಗಾಗಿಯೇ ಫ್ಯಾನ್ ಬೇಸ್ ಏರ್ಪಟ್ಟಿದೆ. ಪ್ಯಾನ್ ಇಂಡಿಯಾ ಸ್ಟಾರ್‍ ಆಗಿರುವ ಅಲ್ಲು ಅರ್ಜುನ್ ಸದ್ಯ ಪುಷ್ಪಾ-2 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 15 ರಂದು ಈ ಸಿನೆಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದು, ಅಭಿಮಾನಿಗಳು ಈ ಸಿನೆಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ನಟ ಅಲ್ಲು ಅರ್ಜುನ್ ರವರಿಗೆ ಪುಷ್ಪಾ ಸಿನೆಮಾಗಾಗಿ ರಾಷ್ಟ್ರೀಯ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡರು. ಈ ಅವಾರ್ಡ್ ಪಡೆದುಕೊಂಡ ತೆಲುಗು ಸಿನಿರಂಗದ ಮೊದಲ ನಟ ಎಂಬ ಖ್ಯಾತಿಗೂ ಗುರಿಯಾಗಿದ್ದರು. ಇನ್ನೂ ಇತ್ತೀಚಿಗಷ್ಟೆ ದುಬೈನಲ್ಲಿ ಮೆಡಂ ಟೂಸ್ಪಾಡ್ಸ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ರವರ ಮೇಣದ ವಿಗ್ರಹವನ್ನು ತಯಾರಿಸಿದ್ದರು. ಈ ಹಿಂದೆ ದುಬೈಗೆ ಹೋದಾಗ ಮೇಣದ ಪ್ರತಿಮೆ ತಯಾರಿಸಲು ಅಳತೆಗಳನ್ನು ಸಹ ಕೊಟ್ಟು ಬಂದಿದ್ದರು. ಈ ಮೇಣದ ಪ್ರತಿಮೆಯನ್ನು ಅಲ್ಲು ಅರ್ಜುನ್ ತಮ್ಮ ಕೈಯಾರೆ ಮಾ.28 ರಂದು ಅನಾವರಣಗೊಳಿಸಿದರು. ಈ ಸಂಬಂಧ ಕೆಲವೊಂದು ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಮ್ಮ ಕುಟುಂಬ ಸಮೇತ ಭಾಗಿಯಾಗಿದ್ದರು.

ಇನ್ನೂ ಈ ಪ್ರತಿಮೆಯ ಬಳಿ ಅಲ್ಲು ಅರ್ಜುನ್ ಕುಟುಂಬಸ್ಥರೆಲ್ಲಾ ಪೊಟೋಗಳನ್ನು ತೆಗೆದುಕೊಂಡಿದ್ದರು. ಈ ಸಂಬಂಧ ಪೊಟೋಗಳನ್ನು ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಮೂಲಕ ಹಂಚಿಕೊಂಡಿದ್ದರು. ಈ ಪೊಟೋಗಳನ್ನು ಸ್ನೇಹಾರೆಡ್ಡಿ ಸಹ ಅಲ್ಲು ಅರ್ಜುನ್ ಜೊತೆಗೆ ಪ್ರತಿಮೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಪೊಟೋಗಳನ್ನು ಶೇರ್‍ ಮಾಡಿದ ಅಲ್ಲು ಅರ್ಜುನ್ ಕ್ಯೂಟಿ ಇಬ್ಬರು ಅಲ್ಲು ಅರ್ಜುನ್ ರನ್ನು ಹ್ಯಾಂಡಲ್ ಮಾಡೋಕೆ ಆಗುತ್ತಾ ಎಂದು ಫನ್ನಿಯಾಗಿ ಕಾಮೆಮಠ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಇನ್ನೂ ದೊಡ್ಡ ಮ್ಯೂಸಿಯಂ ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣಗೊಂಡಿದ್ದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೇ ಅನೇಕ ಸಿನೆಮಾ ಸೆಲೆಬ್ರೆಟಿಗಳಿಗೂ ಖುಷಿಯ ವಿಚಾರವಾಗಿದೆ. ಈ ಪೊಟೋಗಳನ್ನು ವೈರಲ್ ಮಾಡುತ್ತಾ, ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.