ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಸೀನಿಯರ್ ನಟಿ ಜಯಪ್ರದ, ಹಿರೋಯಿನ್ ಗಳೇ ಕಮಿಟ್ ಮೆಂಟ್ ಕೊಡ್ತಾರೆ ಎಂದ ನಟಿ…..!

ಸಿನಿರಂಗದಲ್ಲಿ ಮಿಟೂ ಅಭಿಯಾನ ಆರಂಭವಾದ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಈ ಬಗ್ಗೆ ಅನೇಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಿರುತ್ತಾರೆ. ಇದೀಗ ಕಾಸ್ಟಿಂಗ್ ಕೌಚ್ ಬಗ್ಗೆ ಸೀನಿಯರ್‍ ನಟಿ…

ಸಿನಿರಂಗದಲ್ಲಿ ಮಿಟೂ ಅಭಿಯಾನ ಆರಂಭವಾದ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಈ ಬಗ್ಗೆ ಅನೇಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಿರುತ್ತಾರೆ. ಇದೀಗ ಕಾಸ್ಟಿಂಗ್ ಕೌಚ್ ಬಗ್ಗೆ ಸೀನಿಯರ್‍ ನಟಿ ಜಯಪ್ರದ ಶಾಕೀಂಗ್ ಕಾಮೆಂಟ್ಸ್ ಮಾಡಿದ್ದಾರೆ. ಹಿರೋಯಿನ್ ಗಳೇ ಕಮಿಟ್ ಮೆಂಟ್ ಕೊಡ್ತಾರೆ ಎಂದು ಆಕೆ ಹೇಳಿದ್ದು, ಆಕೆಯ ಈ ಹೇಳಿಕೆಗಳು ಸಿನಿವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ತೆಲುಗು ಸಿನಿರಂಗದ ಸ್ಟಾರ್‍ ನಟರಾದ ಎನ್.ಟಿ.ಆರ್‍, ಎ.ಎನ್.ಆರ್‍, ಕೃಷ್ಣ, ಶೋಭನ್ ಬಾಬು ಸೇರಿದಂತೆ ಅನೇಕ ಸ್ಟಾರ್‍ ನಟರೊಂದಿಗೆ ನಟಿಸಿ ಅಣೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡ ನಟಿಯರಲ್ಲಿ ಜಯಪ್ರದ ಸಹ ಒಬ್ಬರಾಗಿದ್ದಾರೆ. ಸಿನಿರಂಗದಲ್ಲಿ ಒಳ್ಳೆಯ ಸಕ್ಸಸ್ ಕಂಡುಕೊಂಡ ಈಕೆ ಇಂಡಸ್ಟ್ರಿಗೆ ದೂರವಾದರು. ಆದರೆ ಈಕೆಯ ಸಮಕಾಲಿನರಾದ ಅನೇಕ ನಟಿಯರು ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಿನೆಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ಆದರೆ ಜಯಪ್ರದ ಮಾತ್ರ ಸಿನೆಮಾಗಳಿಗೆ ದೂರವಾಗಿ ಸದ್ಯ ರಾಜಕೀಯಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜಕೀಯದಲ್ಲಿ ಬ್ಯುಸಿಯಾಗಿರುವಂತಹ ಜಯಪ್ರದ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಮುಂಬೈ ಮೂಲದ ನಟಿಯರ ಬಗ್ಗೆ ನೀಡಿದಂತಹ ಕಾಮೆಂಟ್ ಗಳು ಸಂಚಲನವನ್ನು ಸೃಷ್ಟಿ ಮಾಡಿದೆ.

ಸದ್ಯ ಸಿನಿರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಕೇಳಿಬರುತ್ತಿದೆ. ಅವಕಾಶಗಳನ್ನು ನೀಡಲು ಕಮಿಟ್ ಮೆಂಟ್ ಕೇಳುತ್ತಿದ್ದಾರೆ ಎಂದು ಅನೇಕರು ನಟಿಯರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಬಗ್ಗೆ ಜಯಪ್ರದ ಸಹ ಮಾತನಾಡಿದ್ದಾರೆ. ನಾವು ಸಿನಿರಂಗದಲ್ಲಿದ್ದಾಗ ಈ ಪದ ನಾವು ಕೇಳುತ್ತಲೇ ಇರಲಿಲ್ಲ. ಅವಕಾಶಗಳಿಗಾಗಿ ಅಂತಹ ಸಮಸ್ಯೆಯನ್ನು ಎದುರಿಸುವ ಅವಶ್ಯಕತೆಯೇ ಇರಲಿಲ್ಲ. ನಮ್ಮಲ್ಲಿ ಟ್ಯಾಲೆಂಟ್ ಇದ್ದರೇ ಅವಕಾಶಗಳು ಬರುತ್ತವೆ. ಇನ್ನೂ ಇಂದಿನ ಕಾಲದಲ್ಲಿ ನಿರ್ದೇಶಕ ಅಥವಾ ನಿರ್ಮಾಪಕರು ಯಾರೂ ಕಮಿಟ್ ಮೆಂಟ್ ಕೇಳುತ್ತಿಲ್ಲ. ಸ್ವತಃ ಹಿರೋಯಿನ್ ಗಳೇ ಅವರಿಗೆ ಕಮಿಟ್ ಮೆಂಟ್ ಕೇಳುತ್ತಿದ್ದಾರೆ ಎಂದು ಸಂಚಲನಾತ್ಮಕ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಮುಂಬೈ ನಿಂದ ಅನೇಕ ಹಿರೋಯಿನ್ ಗಳು ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಅವಕಾಶಗಳಿಗಾಗಿ ಈ ರೀತಿಯಾಗಿ ಕಮಿಟ್ ಮೆಂಟ್ ಕೇಳುತ್ತಿದ್ದಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ನಟಿ ಜಯಪ್ರದ ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿವಲಯದಲ್ಲೂ ಸಂಚಲನವನ್ನು ಸೃಷ್ಟಿಸಿದೆ. ಈ ಬಗ್ಗೆ ಯಾವ ರೀತಿಯ ಚರ್ಚೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.