ವಯಸ್ಸಿನಲ್ಲಿರುವಂತಹ ಯುವಕರೊಂದಿಗೆ ರೊಮ್ಯಾನ್ಸ್ ಮಾಡಿದ್ರೆ ತಪ್ಪೇನು ಎಂದ ಸೀನಿಯರ್ ನಟಿ ಭೂಮಿಕಾ…..!

ಸಿನಿರಂಗದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಪರಿಚಯವಾಗಿದ್ದರೂ, ಅವರಲ್ಲಿ ಕೆಲ ನಟಿಯರು ಮಾತ್ರ ಸ್ಟಾರ್‍ ನಟಿಯಾಗುತ್ತಾರೆ. ಸ್ಟಾರ್‍ ನಟಿಯಾಗಿ ಸಾಲು ಸಾಲು ಸಿನೆಮಾಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಸಾಲಿನಲ್ಲಿ ಕ್ಯೂಟ್ ನಟಿ ಭೂಮಿಕಾ ಚಾವ್ಲಾ ಸಹ ಒಬ್ಬರಾಗಿದ್ದಾರೆ. ತೆಲುಗು ಸಿನಿರಂಗದಲ್ಲಿ ಸಾಮಾನ್ಯವಾಗಿ ಎಂಟ್ರಿಕೊಟ್ಟ ಈಕೆ, ಕಡಿಮೆ ಸಮಯದಲ್ಲೇ ಹಿಟ್ ಸಿನೆಮಾಗಳನ್ನು ಖಾತೆಗೆ ಸೇರಿಸಿಕೊಂಡರು. ಇದೀಗ ಆಕೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸಂಚಲನ ಸೃಷ್ಟಿ ಮಾಡಿದೆ.

ತೆಲುಗಿನಲ್ಲಿ ಅನೇಕ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಭೂಮಿಕ ಅನೇಕ ದೊಡ್ಡ ಸ್ಟಾರ್‍ ಗಳ ಜೊತೆ ನಟಿಸಿದ್ದಾರೆ. ಮಾಡೆಲಿಂಗ್ ಮೂಲಕ ಎಂಟ್ರಿ ಕೊಟ್ಟ ಭೂಮಿಕಾ ಅತೀ ಕಡಿಮೆ ಸಮಯದಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಟ ಸುಮಂತ್ ಅಭಿನಯದ ಯುವಕುಡು ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ನಟ ಪವನ್ ಕಲ್ಯಾಣ್ ಅಭಿನಯದ ಖುಷಿ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಖುಷಿ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಈಕೆ ಅನೇಕ ಅವಾರ್ಡ್‌ಗಳನ್ನು ದಕ್ಕಿಸಿಕೊಂಡರು. ಜೊತೆಗೆ ಸಿನೆಮಾಗಳ ಆಫರ್‍ ಗಳು ಹಾಗೂ ಫ್ಯಾನ್ ಫಾಲೋಯಿಂಗ್ ಸಹ ಹೆಚ್ಚಾಯಿತು. ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಭೂಮಿಕ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ನಟಿ ಭೂಮಿಕಾ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬಾಲಿವುಡ್ ಸ್ಟಾರ್‍ ಸಲ್ಮಾನ್ ಖಾನ್ ರವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ  ತೆಲುಗು ಸ್ಟಾರ್‍ ನಟ ವಿಕ್ಟರಿ ವೆಂಕಟೇಶ್ ಸಹ ನಟಿಸಿದ್ದಾರೆ. ವೆಂಕಟೇಶ್ ಪತ್ನಿಯ ಪಾತ್ರದಲ್ಲಿ ಭೂಮಿಕಾ ನಟಿಸಿದ್ದಾರೆ. ಇನ್ನೂ ಈ ಸಿನೆಮಾದ ಪ್ರಮೋಷನ್ ನಲ್ಲಿ ಭೂಮಿಕಾ ಸಹ ಭಾಗಿಯಾಗುತ್ತಿದ್ದು, ಈ ವೇಳೆ ಅನೇಕ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಸದ್ಯ ನಲವತ್ತರ ವಯಸ್ಸಿನಲ್ಲಿರುವ ಭೂಮಿಕಾ ಯಂಗ್ ಹಿರೋಗಳ ಜೊತೆಗೆ ರೊಮ್ಯಾನ್ಸ್ ಮಾಡಿದ್ರೆ ತಪ್ಪೇನು ಎಂದು ಶಾಕಿಂಗ್ ಕಾಮೆಂಟ್ ಮಾಡಿ‌ದ್ದಾರೆ. ಸದ್ಯ ಆಕೆ ಈ ಕಾಮೆಂಟ್ ಸಖತ್ ವೈರಲ್ ಆಗುತ್ತಿದೆ.

ಪ್ರಿಯಾಂಕಾ ಚೋಪ್ರಾ-ನಿಕ್, ಮಲೈಕಾ ಅರೋರಾ-ಅರ್ಜುನ್ ಕಪೂರ್‍ ರವರ ಸಂಬಂಧವನ್ನು ಜನರು ಏಕೆ ಒಪ್ಪುವುದಿಲ್ಲ. ಅವರನ್ನು ಏತಕ್ಕಾಗಿ ಭಿನ್ನವಾಗಿ ಕಾಣುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹಿರೋಯಿನ್ ಗಳು ತಮಗಿಂತ ಚಿಕ್ಕ ವಯಸ್ಸಿನವರ ಹಿರೋಗಳ ಜೊತೆ ರೊಮ್ಯಾನ್ಸ್ ಮಾಡುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಹೆಂಗಸರಿಗೊಂದು ನ್ಯಾಯಾ ಗಂಡಸರಿಗೊಂದು ನ್ಯಾಯವೇ ಎಂದಿದ್ದಾರೆ. ಇನ್ನೂ ಭೂಮಿಕಾ ರವರ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.