Film News

ಮಹಾರಾಣಿ ಪಾತ್ರದಲ್ಲಿ ನಟಿಸಲಿದ್ದಾರೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ, ಶಿವಾಜಿ ಸೊಸೆಯಾಗಿ ಸ್ಯಾಂಡಲ್ ವುಡ್ ನಟಿ…..!

ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಇದೀಗ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಸೌತ್ ಅಂಡ್ ನಾರ್ತ್‌ನಲ್ಲೂ ಸ್ಟಾರ್‍ ನಟಿಯಾಗಿ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಇಲ್ಲಿಯವರೆಗೂ ಗ್ಲಾಮರಸ್ ಪಾತ್ರಗಳ ಮೂಲಕ ಸದ್ದು ಮಾಡಿದ ರಶ್ಮಿಕಾ ಇದೀಗ ಐತಿಹಾಸಿಕ ಕಥೆಯುಳ್ಳ ಸಿನೆಮಾದಲ್ಲಿ ನಟಿಸಲಿದ್ದಾರೆ. ಈ ಸಿನೆಮಾದಲ್ಲಿ ಆಕೆ ಮಹಾರಾಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ನ್ಯಾಷನಲ್ ಕ್ರಷ್ ರಶ್ಮಿಕಾಗೆ ಅದೃಷ್ಟ ಚೆನ್ನಾಗಿದೆ ಎಂದು ಹೇಳಬಹುದು. ಈ ಹಾದಿಯಲ್ಲೇ ಆಕೆ ಸೌತ್ ಅಂಡ್ ನಾರ್ತ್ ನಲ್ಲೂ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಬಾಲಿವುಡ್ ನಲ್ಲಿ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಚಾರಿತ್ಯಾತ್ಮಕ ಸಿನೆಮಾ ಒಂದರಲ್ಲಿ ರಶ್ಮಿಕಾ ಸದ್ದು ಮಾಡಲಿದ್ದಾರಂತೆ. ಮರಾಠಿ ರಾಜ್ಯದ ಸಂಸ್ಥಾಪಕ ಚತ್ರಪತಿ ಶಿವಾಸಿ ಮಹಾರಾಜ್ ರವರ ಸೊಸೆಯ ಪಾತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರಂತೆ. ಶಿವಾಜಿ ಮಹಾರಾಜರ ಹಿರಿಯ ಮಗ ಶಂಭಾಜಿ ಭೋಂಸ್ಲೆ ಜೀವನ ಆಧಾರದ ಮೇಲೆ ಬಾಲಿವುಡ್ ನಲ್ಲಿ ಸಿನೆಮಾ ಒಂದು ತೆರೆಗೆ ಬರಲಿದ್ದು, ಸಿನೆಮಾ ಕೆಲಸಗಳು ಸಹ ಶುರುವಾಗಿದೆ. ಈ ಸಿನೆಮಾಗೆ ಛಾವಾ ಎಂಬ ಟೈಟಲ್ ಸಹ ಪರಿಶೀಲನೆಯಲ್ಲಿದೆ. ಲಕ್ಷಣ್ ಉಟೇಕರ್‍ ಈ ಸಿನೆಮಾ ನಿರ್ದೇಶನ ಮಾಡಲಿದ್ದು, ಶಂಭಾಜಿ ಮಹಾರಾಜ್ ಪಾತ್ರದಲ್ಲಿ ಬಾಲಿವುಡ್ ಯಂಗ್ ಹಿರೋ ವಿಕ್ಕಿ ಕೌಶಲ್ ನಟಿಸಲಿದ್ದಾರಂತೆ. ವಿಕ್ಕಿ ಕೌಶಲ್ ಗೆ ಜೋಡಿಯಾಗಿ ಏಸುಬಾರಿ ಭೋಂಸ್ಲೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ರವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ಇನ್ನೂ ಈ ಸಿನೆಮಾ ಭಾರಿ ಬಡ್ಜೆಟ್ ನಲ್ಲಿ ತೆರೆಗೆ ಬರಲಿದೆ. ಈ ಸಿನೆಮಾದ ಕಥೆ ಹಾಗೂ ಪಾತ್ರಕ್ಕೆ ಒಳ್ಳೆಯ ಕ್ರೇಜ್ ಇರುವ ಕಾರಣ ರಶ್ಮಿಕಾ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಇದಕ್ಕಾಗಿ ರಶ್ಮಿಕಾ ಈಗಾಗಲೇ ಪ್ರಾಕ್ಟೀಸ್ ಸಹ ಶುರು ಮಾಡಿದ್ದಾರಂತೆ. ಅಂದಿನ ಕಾಲದಲ್ಲಿ ಮಹಿಳೆಯರು, ಮಹಾರಾಣಿಯರು ಅವರ ಜೀವನ ಶೈಲಿ ಹೇಗಿರುತ್ತದೆ, ಅವರ ಭಾಷೆ ಹೇಗಿರುತ್ತದೆ ಎಂಬುದನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರೆ ಜೊತೆಗೆ ಶಿಕ್ಷಣ ಸಹ ಪಡೆದುಕೊಳ್ಳುತ್ತಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಸಿನೆಮಾದ ಮೂಲಕ ರಶ್ಮಿಕಾ ಮತ್ತೊಂದು ಪ್ರಯೋಗಕ್ಕೆ ಮುಂದಾಗಲಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ಈ ಸಿನೆಮಾಗಾಗಿ ನಟ ವಿಕ್ಕಿ ಕೌಶಲ್ ಸಹ ಕುದುರೆ ಸವಾರಿ, ಕತ್ತಿ ಹಾಗೂ ಬಿಲ್ವಿದ್ದೆಯನ್ನು ಸಹ ಕಲಿಯುತ್ತಿದ್ದಾರಂತೆ. ಎಲ್ಲವನ್ನೂ ಸಿದ್ದ ಮಾಡಿಕೊಂಡು ಈ ಸಿನೆಮಾವನ್ನು ಇದೇ ಸೆಪ್ಟೆಂಬರ್‍ ಮಾಹೆಯಿಂದ ಸೆಟ್ಟೇರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ರಶ್ಮಿಕಾ ಸದ್ಯ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಯಾನಿಮಲ್ ಎಂಬ ಸಿನೆಮಾದಲ್ಲಿ ರಣಬೀರ್‍ ಕಪೂರ್‍ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದಾರೆ.

Most Popular

To Top