Film News

ನನ್ನ ದೇಹದ ಆ ಭಾಗ ತೋರಿಸು ಎಂದು ನಿರ್ದೇಶಕ ಪೋರ್ಸ್ ಮಾಡಿದ್ದ ಎಂದ ಸೀನಿಯರ್ ಸ್ಟಾರ್ ನಟಿ ಆಮನಿ….!

ಸಿನಿರಂಗದಲ್ಲಿ ಆಗಾಗ ಲೈಂಗಿಕ ಕಿರುಕುಳದ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಸಿನಿರಂಗದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಬಹಿರಂಗವಾಗಿಯೇ ಕಾಮೆಂಟ್ ಮಾಡುತ್ತಿರುತ್ತಾರೆ. ಕೆರಿಯರ್‍ ನಲ್ಲಿ ಎದುರಾದಂತಹ ಲೈಂಗಿಕ ಕಿರುಕುಳ, ಕಾಸ್ಟಿಂಗ್ ಕೌಚ್ ಕುರಿತು ಹಿರೋಯಿನ್ ಗಳು, ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳು ಆಗಾಗ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಸೌತ್ ಸಿನಿರಂಗದ ಸೀನಿಯರ್‍ ನಟಿ ಆಮನಿ ಸಹ ತಮಗಾದ ಕೆಟ್ಟ ಅನುಭವವನ್ನು ಹೊರಹಾಕಿದ್ದಾರೆ.

ಸಿನಿರಂಗದಲ್ಲಿ ಅವಕಾಶ ನೀಡುವುದಾಗಿ ಕೆಲವೊಮ್ಮೆ ಕಮಿಟ್ ಮೆಂಟ್ ಕೇಳಿರುವ ಬಗ್ಗೆ ಕೆಲವೊಂದು ಸಂದರ್ಶನಗಳಲ್ಲಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಅದರಲ್ಲೂ ಕೆಲವೊಂದು ಸಂದರ್ಶನಗಳಲ್ಲಿ ಈ ಕುರಿತು ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಸೀನಿಯರ್‍ ನಟಿ ಜಯಲಲಿತಾ ಸಹ ಲೈಂಗಿಕಾ ಕಿರುಕುಳದ ಬಗ್ಗೆ ಹೇಳಿದ್ದರು. ಅದೇ ರೀತಿ ಬಿಗ್ ಬಾಸ್ ಬ್ಯೂಟಿ ಹಿಮಜ ಸಹ ಕಮಿಟ್ ಮೆಂಟ್ ಕೊಟ್ಟರೇ ಮಾತ್ರ ಸಿನೆಮಾಗಳಲ್ಲಿ ಅವಕಾಶ ಬರುತ್ತದೆ ಎಂಬುದು ರೂಮರ್‍ ಮಾತ್ರ, ಕಮಿಟ್ ಮೆಂಟ್ ಕೊಟ್ಟವರಿಗೆಲ್ಲಾ ಆಫರ್‍ ಗಳು ಬರಲ್ಲ ಎಂದು ಹೇಳಿದ್ದರು. ಇದೀಗ ಮತ್ತೋರ್ವ ಸೀನಿಯರ್‍ ನಟಿ ಆಮನಿ ಸಹ ಕಾಸ್ಟಿಂಗ್ ಕೌಚ್ ಕುರಿತು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. 90 ರ ದಶಕದಲ್ಲಿ ಸೌಂದರ್ಯ, ರಾಶಿ, ರೋಜಾ, ರಮ್ಯಕೃಷ್ಣ ಮೊದಲಾದವರ ಜೊತೆಗೆ ಹೋಮ್ಲಿ ಬ್ಯೂಟಿಯಾಗಿ ನಟಿಸಿದ ಆಮನಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

90ರ ದಶಕದಲ್ಲಿ ಅನೇಕ ಸಿನೆಮಾಗಳ ಮೂಳಕ ಫೇಂ ಪಡೆದುಕೊಂಡ ಸೀನಿಯರ್‍ ನಟಿ ಆಮನಿ ಜಂಬಲಕಿಡಿಪಂಬ, ಶುಭಲಗ್ನಂ, ಶುಭಸಂಕಲ್ಪಂ, ಆ ನಲುಗುರು, ಮಾವಿಚಿಗುರು ಸೇರಿದಂತೆ ಅನೇಕ ಸಿನೆಮಾಗಳ ಮೂಲಕ ಫೇಮಸ್ ಪಡೆದುಕೊಂಡಿದ್ದರು. ಸದ್ಯ ಆಕೆ ಸೌತ್ ನಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕೆರಿಯರ್‍ ಸಾಗಿಸುತ್ತಿರುತ್ತಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಓರ್ವ ತಮಿಳು ನಿರ್ದೇಶಕ ನನ್ನನ್ನು ಏಕಾಏಕಿ ನಿಮಗೆ ಸ್ಟ್ರೆಚ್ ಮಾರ್ಕ್ ಇದೆಯೋ ಇಲ್ಲವೋ ತೋರಿಸಿ ಎಂದು ಬಹಿರಂಗವಾಗಿ ಕೇಳಿದ್ದ. ಅದರಿಂದ ಕೂಡಲೇ ಅಲ್ಲಿಂದ ಎದ್ದು ಹೋಗಿಬಿಟ್ಟೆ. ದೇಹದಲ್ಲಿ ಹೇಳಿಕೊಳ್ಳಲಾಗದಂತಹ ಜಾಗ ತೋರಿಸು ಎಂದು ನಿರ್ದೇಶಕ ಕೇಳಿದ್ದರು. ಇದರಿಂದ ನನಗೆ ತುಂಬಾ ಕಿರಿಕಿರಿಯಾಗಿತ್ತು.

ದೊಡ್ಡ ಸಿನೆಮಾಗಳಲ್ಲಿ ನಟಿನಟರೊಂದಿಗೆ ಚೆನ್ನಾಗಿರುತ್ತಾರೆ. ಅಲ್ಲಿ ಯಾವುದೇ ನಿರ್ಬಂಧ ಇರುವುದಿಲ್ಲ. ಸಣ್ಣ-ಪುಟ್ಟ ಸಿನೆಮಾಗಳಲ್ಲಿ ಅಂತಹ ಘಟನೆಗಳು ನಡೆಯುತ್ತಿರುತ್ತದೆ. ಒಂದು ಭಾರಿ ಅವರ ಕಮಿಟ್ ಮೆಂಟ್ ಗೆ ಒಪ್ಪಿಕೊಂಡರೇ, ಅದು ಒಬ್ಬರೊಂದಿಗೆ ನಿಲ್ಲಲ್ಲ, ನನ್ನ ಜೀವನದಲ್ಲಿ ಅಂತಹ ದಿನ ಬರದ ಕಾರಣದಿಂದ ಸಂತೋಷದಿಂದ ಇದ್ದೀನಿ ಎಂದು ಆಕೆ ಹೇಳಿದ್ದಾರೆ. ಸದ್ಯ ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top