ಶಾರೀರಿಕವಾಗಿ ಮಕ್ಕಳನ್ನು ಹೆರಲು ನಾವು ಸಿದ್ದ, ಆದರೆ? ಮಕ್ಕಳನ್ನು ಪಡೆಯುವ ಬಗ್ಗೆ ರಿಯಾಕ್ಟ್ ಆದ ನರೇಶ್….!

ತೆಲುಗು ಸೀನಿಯರ್‍ ನಟ ನರೇಶ್ ಹಾಗೂ ಪವಿತ್ರಾ ಮಳ್ಳಿ ಪೆಳ್ಳಿ ಎಂಬ ಸಿನೆಮಾದಲ್ಲಿ ಜಂಟಿಯಾಗಿ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಅನೇಕ ವಿಚಾರಗಳು ಹೊರಬಂದಿವೆ. ಅವರ ವೈಯುಕ್ತಿಕವಾದ ಅನೇಕ ವಿಚಾರಗಳನ್ನು ಅವರೇ ರಿವೀಲ್ ಮಾಡಿದ್ದಾರೆ. ಟಾಲಿವುಡ್ ನಲ್ಲಿ ಬೋಲ್ಡ್ ಜೋಡಿಯಾಗಿ ಫೇಂ ಪಡೆದುಕೊಂಡ ನರೇಶ್ ಪವಿತ್ರಾ ರವರು ಮಕ್ಕಳನ್ನು ಪಡೆದುಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಚಾರ ಮಳ್ಳಿ ಪೆಳ್ಳಿ ಸಿನೆಮಾದಲ್ಲಿ ಸಹ ಮೂಡಿ ಬಂದಿದೆ. ಇದೀಗ ಮಕ್ಕಳನ್ನು ಹೆರುವ ಬಗ್ಗೆ ನರೇಶ್ ರಿಯಾಕ್ಟ್ ಆಗಿದ್ದಾರೆ. ಅಷ್ಟಕ್ಕೂ ಆತ ಹೇಳಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ಸದ್ಯ ಟಾಲಿವುಡ್ ಸಿನಿರಂಗದಲ್ಲಿ ನರೇಶ್ ಅಂಡ್ ಪವಿತ್ರಾ ರವರದ್ದೇ ಹಾಟ್ ಟಾಪಿಕ್ ಆಗಿದೆ. ಇಷ್ಟು ದಿನಗಳ ಕಾಲ ಅವರಿಬ್ಬರೂ ತಮ್ಮ ರಿಲೇಷನ್ ಶಿಪ್ ಬಗ್ಗೆ ಓಪೆನ್ ಆಗಿರಲಿಲ್ಲ. ಮಳ್ಳಿ ಪೆಳ್ಳಿ ಸಿನೆಮಾದ ಮೂಲಕ ತಮ್ಮ ರಿಲೇಷನ್ ಶಿಪ್ ಅನ್ನು ಬಹಿರಂಗ ಪಡಿಸಿದ್ದಾರೆ. ಇದೀಗ ನರೇಶ್ ಮತ್ತೊಂದು ಕ್ರೇಜ್ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ಮಕ್ಕಳನ್ನು ಹೆರುವ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಈ ಮಳ್ಳಿ ಪೆಳ್ಳಿ ಸಿನೆಮಾದಲ್ಲಿ ತಾವು ಏಕೆ ಏತಕ್ಕಾಗಿ ಹತ್ತಿರವಾದರು. ಏಕೆ ಮಕ್ಕಳನ್ನು ಹೆತ್ತರು ಎಂಬುದನ್ನು ತೋರಿಸಿದ್ದಾರೆ. ರಿಯಲ್ ಲೈಫ್ ನಲ್ಲೂ ಮಕ್ಕಳನ್ನು ಪಡೆದುಕೊಳ್ಳಲು ತಾವು ಸಿದ್ದ ಎಂದು ನರೇಶ್ ಹೇಳಿದ್ದಾರೆ. ಮಕ್ಕಳನ್ನು ಹೆರಲು ನಾನು ಹಾಗೂ ಪವಿತ್ರ ಆರೋಗ್ಯದ ಪರವಾಗಿ ಹಾಗೂ ಶಾರೀರಿಕವಾಗಿಯೂ ಫಿಟ್ ಆಗಿಯೇ ಇದ್ದೇವೆ. ಈಗಲೂ ಸಹ ನಾವು ಮಕ್ಕಳನ್ನು ಪಡೆದುಕೊಳ್ಳಬಹುದು. ಆದರೆ ನಮಗೆ 80 ವರ್ಷ ವಯಸ್ಸಾದಾಗ ಮಕ್ಕಳಿಗೆ 20 ವರ್ಷ ಆಗಿರುತ್ತದೆ. ಅಂತಹ ಅವಶ್ಯಕತೆ ನಮಗೆ ಬೇಡ ಎಂದಿದ್ದಾರೆ.

ಅಷ್ಟೇಅಲ್ಲದೇ ಇದೀಗ ನಾವು ಪತಿ ಪತ್ನಿಯಾಗಿರುವುದು ಮುಖ್ಯ. ಪವಿತ್ರ ಮಕ್ಕಳು, ನನ್ನ ಮಕ್ಕಳು ಇಬ್ಬರೂ ನಮ್ಮ ಮಕ್ಕಳು, ನಮಗೆ ಐದು ಮಂದಿ ಮಕ್ಕಳಿದ್ದಾರೆ ಎಂದು ಸಂತೋಷದಿಂದ ಬದುಕುತ್ತಿದ್ದೇವೆ. ಇದೀಗ ನರೇಶ್ ಹಂಚಿಕೊಂಡ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ನೆಟ್ಟಿಗರಿಂದ ವಿಮರ್ಶೆಗಳೂ ಸಹ ಹರಿದು ಬರುತ್ತಿವೆ. ನರೇಶ್ ಗೆ ಈಗಾಗಲೇ ಮೂರು ಮದುವೆಯಾಗಿದ್ದು ಆತನಿಗೆ ಮೂರು ಮಂದಿ ಮಕ್ಕಳಿದ್ದಾರೆ. ಪವಿತ್ರಾ ರವರಿಗೂ ಸಹ ಮದುವೆಯಾಗಿದ್ದು, ಆಕೆಗೂ ಇಬ್ಬರು ಮಕ್ಕಳಿದ್ದಾರೆ. ಇದೀಗ ನರೇಶ್ ಹಾಗೂ ಪವಿತ್ರಾ ರವರ ಐದು ಮಂದಿ ಮಕ್ಕಳೊಂದಿಗೆ ಸಂತೋಷದಿಂದ ಇರುತ್ತೇವೆ ಎಂದು ಹೇಳಿದ್ದಾರೆ.

ಇನ್ನೂ ನರೇಶ್ ಹಾಗೂ ಪವಿತ್ರಾ ಅಭಿನಯದ ಮಳ್ಳಿ ಪೆಳ್ಳಿ ಸಿನೆಮಾ ಸುಮಾರು 15 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಸಿನೆಮಾ ಡಿಜಾಸ್ಟರ್‍ ಆಗಿದೆ. ಕನಿಷ್ಟ ಕೋಟಿ ರೂಪಾಯಿ ಸಹ ಕಲೆಕ್ಷನ್ ಮಾಡಲು ವಿಫಲವಾಗಿದೆ. ತೆಲುಗು ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಈ ಸಿನೆಮಾ ರಿಲೀಸ್ ಆಗಿದ್ದು, ಈ ಸಿನೆಮಾದಲ್ಲಿ ನರೇಶ್ ಪತ್ನಿ ರಮ್ಯರಘುಪತಿ ಯವರನ್ನು ವಿಲನ್ ರಂತೆ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ.