Film News

ಬನ್ನಿಗೆ ಮೊದಲ ಗರ್ಲ್ ಫ್ರೆಂಡ್ ಶೃತಿ ಎಂಬಾಕೆಯಂತೆ, ಶುರುವಾಯ್ತು ಹೊಸ ಚರ್ಚೆ….!

ಟಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ಜೋಡಿಗಳಲ್ಲಿ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಜೋಡಿ ಸಹ ಒಂದಾಗಿದೆ. ಅಲ್ಲು ಅರ್ಜುನ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ತನ್ನ ಕುಟುಂಬಕ್ಕೆ ಪ್ರತ್ಯೇಕವಾದ ಸ್ಥಾನ ಹಾಗೂ ಸಮಯ ನೀಡುತ್ತಿರುತ್ತಾರೆ. ಸಿನೆಮಾ ಶೂಟಿಂಗ್ ಗಳಿಂದ ಫ್ರಿ ಸಮಯ ಸಿಕ್ಕರೇ ಸಾಕು ದೇಶ ವಿದೇಶಗಳಿಗೆ ಟ್ರಿಪ್ ಹೋಗುತ್ತಿರುತ್ತಾರೆ. ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಸ್ನೇಹಾರೆಡ್ಡಿ ಹಾಗೂ ಅಲ್ಲು ಅರ್ಜುನ್ ಪ್ರೀತಿ ಮಾಡಿ ಮತ್ತೆ ದೊಡ್ಡವರ ಒಪ್ಪಿಗೆಯ ಮೇರೆಗೆ ಮದುವೆಯಾದರು. ಇದೀಗ ಅಲ್ಲು ಅರ್ಜುನ್ ಮೊದಲ ಪ್ರೇಯಸಿ ಸ್ನೇಹಾರೆಡ್ಡಿ ಅಲ್ಲ ಎಂದು ಆತನೇ ಹೇಳಿದ್ದು, ಹೊಸದೊಂದು ಚರ್ಚೆ ಜೋರಾಗಿ ನಡೆಯುತ್ತಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಮದುವೆ ಅಷ್ಟೊಂದು ಸುಲಭವಾಗಿ ನಡೆಯಲಿಲ್ಲ ಎನ್ನಲಾಗಿದೆ. ಸ್ನೇಹಾರೆಡ್ಡಿ ತಂದೆ ಶೇಖರರೆಡ್ಡಿ ಮೊದಲಿಗೆ ಅಲ್ಲು ಅರ್ಜುನ್ ಜೊತೆಗೆ ಮದುವೆಗೆ ಒಪ್ಪಿಕೊಂಡಿರಲಿಲ್ಲವಂತೆ.  ಸಿನೆಮಾ ಮೂಲದವರಾದ ಕಾರಣದಿಂದ ಶೇಖರರೆಡ್ಡಿ ಅಭದ್ರತೆಯಾಗಿ ಭಾವಿಸಿದ್ದರಂತೆ. ಬನ್ನಿ ತಂದೆ ಅಲ್ಲು ಅರವಿಂದ್ ರವರೇ ನೇರವಾಗಿ ಕೇಳಿದರೂ ಇಲ್ಲ ಎಂದಿದ್ದರಂತೆ. ಆದರೆ ಸ್ನೇಹಾರೆಡ್ಡಿ ಮಾತ್ರ ಅಲ್ಲು ಅರ್ಜುನ್ ರವರನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ ಕಳೆದ 2011 ರ ಮಾರ್ಚ್ ಮಾಹೆಯಲ್ಲಿ ಅವರಿಬ್ಬರಿಗೂ ಮದುವೆಯನ್ನು ಮಾಡಲಾಯಿತು. ಸದ್ಯ ಈ ಜೋಡಿ ತುಂಬಾ ಸಂತೋಷದಿಂದ ಕಾಲ ಕಳೆಯುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕೆ ತನ್ನ ಪತಿ ಹಾಗೂ ಮಕ್ಕಳ ಪೊಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್ ತನ್ನ ಮೊದಲ ಪ್ರೇಯಸಿಯ ಬಗ್ಗೆ ಮಾತನಾಡಿದ್ದು, ಹೊಸ ಚರ್ಚೆಯೊಂದಕ್ಕೆ ಕಾರಣವಾಗಿದೆ.

ತೆಲುಗು ಇಂಡಿಯನ್ ಐಡಲ್ ಸೀಜನ್ 2 ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದ ಅಲ್ಲು ಅರ್ಜುನ್ ಕೆಲವೊಂದು ಇಂಟ್ರಸ್ಟಿಂಗ್ ಅಂಡ್ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನನ್ನ ಮೊದಲ ಪ್ರೇಯಸಿ ಸ್ನೇಹಾರೆಡ್ಡಿಯಲ್ಲ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಬನ್ನಿ ಅಭಿನಯದ ಹಾಡೊಂದನ್ನು ಶೃತಿ ಎಂಬ ಗಾಯಕಿ ತುಂಬಾ ಅದ್ಬುತವಾಗಿ ಹಾಡಿದ್ದರು. ಈ ಹಾಡನ್ನು ಕೇಳಿ ಅಲ್ಲು ಅರ್ಜುನ್ ಸಹ ಇಂಪ್ರೆಸ್ ಆಗಿದ್ದಾರೆ. ಆಕೆಯನ್ನು ಪ್ರಶಂಸೆ ಮಾಡಿ ಬಳಿಕ ಮಾತನಾಡಿದ ಅಲ್ಲು ಅರ್ಜುನ್, ಈ ಶೃತಿ ಎಂಬ ಹೆಸರು ನನಗೆ ತುಂಬಾ ಇಷ್ಟ. ಏಕೆಂದರೇ ನನ್ನ ಫಸ್ಟ್ ಲವರ್‍ ಹೆಸರು ಶೃತಿ ಎಂದು ಜೋರಾಗಿ ನಕ್ಕಿದ್ದಾರೆ. ಇನ್ನೂ ಈ ಹೇಳಿಕೆ ನೀಡುತ್ತಿದ್ದಂತೆ ಬನ್ನಿ ಸ್ನೇಹಾರೆಡ್ಡಿಯವರಿಗಿಂತ ಮುಂಚೆಯೇ ಶೃತಿ ಎಂಬ ಯುವತಿಯನ್ನು ಲವ್ ಮಾಡಿದ್ದರೇ ಎಂಬ ಚರ್ಚೆ ಇದೀಗ ಶುರುವಾಗಿದೆ. ಇದಕ್ಕೆ ಸ್ನೇಹಾ ಯಾವ ರೀತಿ ಫೀಲ್ ಆಗುತ್ತಾರೆ ಎಂಬ ಕಾಮೆಂಟ್ ಗಳು ಸಹ ಕೇಳಿಬರುತ್ತಿವೆ.

ಇನ್ನೂ ಅಲ್ಲು ಅರ್ಜುನ್ ರವರ ಕೆರಿಯರ್‍ ನಲ್ಲಿ ಭಾರಿ ಹೆಸರು ತಂದುಕೊಟ್ಟ ಪುಷ್ಪಾ ಸಿನೆಮಾದ ಸೀಕ್ವೆಲ್ ಪುಷ್ಪಾ 2 ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಸಿನೆಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್‍ ಮಾಹೆಯಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ ಎನ್ನಲಾಗುತ್ತಿದೆ.

Most Popular

To Top