ನನ್ನನ್ನು ನೋಡಿ ಹುಡುಗರೂ ಸಹ ಕಣ್ಣು ಹೊಡೆಯುತ್ತಾರೆ ಎಂದ ನರೇಶ್, ಬೋಲ್ಡ್ ಸ್ಟೇಟ್ ಮೆಂಟ್ ನೀಡಿದ ನಟ……..!

Follow Us :

ಟಾಲಿವುಡ್ ನಲ್ಲಿ ಕಳೆದ ವರ್ಷ ಭಾರಿ ಸುದ್ದಿ ಮಾಡಿದ್ದು, ಸೀನಿಯರ್‍ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ರವರ ಬಗ್ಗೆ ಎಂದು ಹೇಳಿದರೇ ತಪ್ಪಾಗಲಾರದು. ಸುಮಾರು ದಿನಗಳ ಕಾಲ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿವಲಯದಲ್ಲಿ ಈ ಜೋಡಿಯದ್ದೇ ಸದ್ದು. ಜೊತೆಗೆ ನರೇಶ್ ಹಾಗೂ ಪವಿತ್ರಾ ತಮ್ಮ ಸಂಬಂಧವನ್ನು ಸಹ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಸದ್ಯ ಎಲ್ಲವೂ ಸೈಲೆಂಟ್ ಆಗಿದ್ದು, ನರೇಶ್ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ಕೆಲವೊಂದು ಬೋಲ್ಡ್ ಸ್ಟೇಟ್ ಮೆಂಟ್ ನೀಡಿದ್ದು, ಅವರ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟ ನರೇಶ್ ಹಾಗೂ ಪವಿತ್ರಾ ಲೊಕೇಶ್ ಮಳ್ಳಿ ಪೆಳ್ಳಿ ಸಿನೆಮಾದ ಮೂಲಕ ತಮ್ಮ ರಿಲೇಷನ್ ಶಿಪ್ ಅನ್ನು ಬಹಿರಂಗ ಪಡಿಸಿದ್ದರು. ಈ ಸಿನೆಮಾದಲ್ಲಿ ಅವರ ಜೀವನದಲ್ಲಾದ ಅನೇಕ ಘಟನೆಗಳ ಬಗ್ಗೆ ಚಿತ್ರೀಕರಿಸಲಾಗಿದೆ. ಈ ಸಿನೆಮಾ ಸಹ ತುಂಬಾನೆ ವಿವಾದ ಸೃಷ್ಟಿಸಿತ್ತು. ಸದ್ಯ ಎಲ್ಲಾವೂ ತಣ್ಣಗಾಗಿದ್ದು, ಶೀಘ್ರದಲ್ಲೇ ನರೇಶ್ ಭೀಮಾ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ನಟ ಗೋಪಿಚಂದ್ ನಟಿಸಿದ್ದಾರೆ. ಇತ್ತೀಚಿಗಷ್ಟೆ ಈ ಸಿನೆಮಾದ ಟ್ರೈಲರ್‍ ಲಾಂಚ್ ಈವೆಂಟ್ ನಡೆದಿತ್ತು. ಈ ವೇಳೆ ನಟ ನರೇಶ್ ಮಾತನಾಡಿದ್ದರು. ಈವೆಂಟ್ ನಲ್ಲಿ ಮಾತನಾಡುತ್ತಾ ನರೇಶ್ ಯುವಕನಂತೆ ಕೆಲವೊಂದು ಮಾತುಗಳನ್ನು ಆಡಿದ್ದಾರೆ. ಆತ ತಮ್ಮ ಮಾತುಗಳ ಮೂಲಕ ಯುವಕರಲ್ಲಿ ಮತಷ್ಟು ಜೋಷ್ ಬರುವಂತೆ ಮಾಡಿದ್ದಾರೆ.

ಇನ್ನೂ ಭಿಮಾ ಸಿನೆಮಾದ ಟ್ರೈಲರ್‍ ಲಾಂಚ್ ಈವೆಂಟ್ ನಲ್ಲಿ ನಟ ನರೇಶ್ ಮಾತನಾಡುತ್ತಾ ಈ ಟ್ರೈಲರ್‍ ನೋಡಿದ ಬಳಿಕ ಮಾತುಗಳು ಬರಲಿಲ್ಲ. ಇದೊಂದು ಮಾಸ್, ಕ್ಲಾಸ್ ಎಲ್ಲವೂ ಇರುವ ಆಲ್ ರೌಂಡರ್‍ ಎಂಟರ್‍ ಟ್ರೈನರ್‍ ಸಿನೆಮಾ ಆಗಿದೆ. ನಟ ಗೋಪಿಚಂದ್, ನಟಿ ಮಾಳವಿಕ ಶರ್ಮಾ, ಪ್ರಿಯಾ ಭವಾನಿ ಶಂಕರ್‍, ನಿರ್ದೇಶಕ ಹರ್ಷಾ, ನಿರ್ಮಾಪಕ ಕೆಕೆ ರಾಧಾಮೋಹನ್ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ. ಈ ವೇಳೆ ನಟ ರಘುಬಾಬು ಸಹ ಭಾಗಿಯಾಗಿದ್ದರು. ಈ ವೇಳೆ ಅವರ ಹೆಸರನ್ನು ಹೇಳುತ್ತಾ ನಾವಿಬ್ಬರೂ ಕ್ಲಾಸ್ ಮೇಟ್ಸ್. ಜೊತೆಗೆ ಗ್ಲಾಸ್ ಮೇಟ್ಸ್ ಸಹ ಹೌದು, ಇಬ್ಬರೂ ಜೊತೆಗೆ ನೀರು ಕುಡಿಯುತ್ತೇವೆ ಎಂದು ಹೇಳಿದ್ದಾರೆ. ಈ ಸಿನೆಮಾ ನೋಡಿದ ಬಳಿಕ ನೀವೆಲ್ಲಾ ನನ್ನ ನೋಡಿ ಕಣ್ಣು ಹೊಡೆಯುತ್ತೀರಾ ಎಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಈ ಹೇಳಿಕೆಯನ್ನು ಆತ ಯುವಕರನ್ನು ಉದ್ದೇಶಿಸಿ ಹೇಳಿದ್ದಾರೆ ಎನ್ನಲಾಗಿದೆ. ಆತ ನೀಡಿದ ಈ ಬೋಲ್ಡ್ ಕಾಮೆಂಟ್ ಇದೀಗ ಭಾರಿ ವೈರಲ್ ಆಗುತ್ತಿದೆ.