13 ವರ್ಷಕ್ಕೆ ಮದುವೆಗೆ ರೆಡಿಯಾದ ಬಾಲಕ, ಮೊದಲು ಮದುವೆ ಮಾಡಿ ಮತ್ತೆ ಸ್ಕೂಲ್ ಗೆ ಹೋಗುತ್ತೆನೆ ಎಂದು ಪಟ್ಟು ಹಿಡಿದ ಬಾಲಕ, ವೈರಲ್ ಆದ ವಿಡಿಯೋ…..!

Follow Us :

ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಬಳಕೆ ತುಂಬಾ ಆಗುತ್ತಿದೆ. ಸೋಷಿಯಲ್ ಮಿಡಿಯಾ ಬಳಸದೇ ಇರುವಂತಹವರ ಸಂಖ್ಯೆ ತುಂಬಾನೆ ವಿರಳ ಎಂದು ಹೇಳಬಹುದು. ಇದೀಗ 13 ವರ್ಷದ ಬಾಲಕ ಮೊದಲು ಮದುವೆ ಮಾಡಿ ಮತ್ತೆ ಸ್ಕೂಲ್ ಗೆ ಹೋಗುವೆ ಎಂದು ಪಟ್ಟು ಹಿಡಿದಿದ್ದು, ಬಾಲಕನ ಆಸೆಯಂತೆ ಮದುವೆ ಮಾಡಿಸಲು ಅವರ ಪೋಷಕರು ಮುಂದಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರೋದು ಪಾಕಿಸ್ತಾನದಲ್ಲಿ ಎಂದು ಹೇಳಲಾಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

13 ವರ್ಷದ ಬಾಲಕ ಹಾಗೂ 12 ವರ್ಷದ ಬಾಲಕಿಗೆ ನಿಶ್ವಿತಾರ್ಥ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎನ್ನಲಾಗಿದೆ. ದೇಶದಲ್ಲಿ ಮದುವೆಗೆ ಕನಿಷ್ಟ ವಯಸ್ಸಿನ ಕಾನೂನು ನಿರ್ಬಂಧವಿದ್ದರೂ ಸಹ ಎರಡೂ ಕುಟುಂಬಗಳ ಒಪ್ಪಿಗೆಯಿಂದಲೇ ಈ ಅಪ್ರಾಪ್ತರಿಗೆ ನಿಶ್ವಿತಾರ್ಥ ಮಾಡಲಾಗಿದೆ. ನನಗೆ ಮದುವೆ ಮಾಡಿಸಿದರೇ ಮಾತ್ರ ನಾನು ಸ್ಕೂಲಿಗೆ ಹೋಗುತ್ತೇನೆ ಎಂದು ಹಠ ಮಾಡಿದ್ದೇನೆ. ಬಾಲಕನ ಆಸೆಯಂತೆ ಮದುವೆ ಮಾಡಿಸಲು ಮುಂದಾಗಿದ್ದಾಗಿ ಪೋಷಕರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಈ ಕುರಿತು ಆಕ್ರೋಷ ಸಹ ವ್ಯಕ್ತವಾಗುತ್ತಿದೆ.

ಅಪ್ರಾಪ್ತ ಬಾಲಕ ನನಗೆ ಮದುವೆ ಮಾಡಿದರೇ ಮಾತ್ರ ಶಾಲೆಗೆ ಹೋಗುವುದಾಗಿ ಹಠ ಹಿಡಿದಿದ್ದ. ಈ ಕಾರಣದಿಂದಲೇ ಕುಟುಂಬಸ್ಥರು ಎಂಗೇಜ್ ಮೆಂಟ್ ಮಾಡಿಸಿದ್ದಾರೆ. ಈ ವೈರಲ್ ಆಗುತ್ತಿರುವ ವಿಡಿಯೋ @salaam_pakistan ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಇದು ನಿಜವಾದುದು ಅಲ್ಲ, ಮೊದಲೇ ಪ್ಲಾನ್ ಮಾಡಿ ಮಾಡಿರುವಂತಹ ವಿಡಿಯೋ ಆಗಿದೆ ಎಂದು ಕಾಮೆಂಟ್ ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.