ವರುಣ್ ತೇಜ್ ಮದುವೆಯ ಬಗ್ಗೆ ಕ್ಲಾರಿಟಿ ಕೊಟ್ಟ ನಾಗಬಾಬು, ವರುಣ್ ತೇಜ್ ಬೇರೆ ಮನೆಯಲ್ಲಿ ವಾಸವಿದ್ದಾರಂತೆ…!

ತೆಲುಗು ಸಿನಿರಂಗದಲ್ಲಿ ಇತ್ತೀಚಿಗೆ ಮದುವೆಗಳು ಭರ್ಜರಿಯಾಗಿ ನಡೆಯುತ್ತಿವೆ. ಅನೇಕ ಸ್ಟಾರ್‍ ಗಳು ಈಗಾಗಲೇ ಹಸಮಣೆ ಏರುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನಿಖಿಲ್, ನಿತಿನ್ ಸೇರಿದಂತೆ ಯಂಗ್ ಹಿರೋ ನಾಗಶೌರ್ಯ ಸಹ ಮದುವೆಯಾದರು. ಇನ್ನೂ ಸಿನಿರಂಗದಲ್ಲಿ ಅನೇಕ ಸ್ಟಾರ್‍ ಗಳ ಮದುವೆಗಳು ನಡೆಯಬೇಕಿದೆ. ಮದುವೆಯಾಗದ ನಟರಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಲರ್‍ ವರುಣ್ ತೇಜ್ ಸಹ ಒಬ್ಬರಾಗಿದ್ದಾರೆ. ಕೆಲವು ದಿನಗಳಿಂದ ವರುಣ್ ತೇಜ್ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡುತ್ತಿದ್ದು, ಈ ಬಗ್ಗೆ ವರುಣ್ ತಂದೆ ನಾಗಬಾಬು ಸಂದರ್ಶನವೊಂದರಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಮೆಗಾ ಕುಟುಂಬದಿಂದ ಬಂದಂತಹ ನಟರಲ್ಲಿ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟ ಮೆಗಾ ಪ್ರಿನ್ಸ್ ವರುಣ್ ತೇಜ್ ಎರಡನೇ ಸಿನೆಮಾದ ಬಳಿಕ ದೊಡ್ಡ ಮಟ್ಟದಲ್ಲೇ ಕ್ರೇಜ್ ಪಡೆದುಕೊಂಡರು. ಮುಕುಂದ ಎಂಬ ಸಿನೆಮಾದ ಮೂಲಕ ಕೆರಿಯರ್‍ ಶುರು ಮಾಡಿದ ವರುಣ್ ಕಂಚೆ ಎಂಬ ಸಿನೆಮಾದ ಮೂಲಕ ರಾಷ್ಟ್ರೀಯ ಅವಾರ್ಡ್ ಸಹ ಗಿಟ್ಟಿಸಿಕೊಂಡರು. ಅಂದಿನಿಂದ ಪ್ರತ್ಯೇಕತೆಯಿಂದ ಕೂಡಿದ ಸಿನೆಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಫಿದಾ, ತೊಲಿಪ್ರೇಮ, ಅಂತರಿಕ್ಷಂ, ಎಫ್-2, ಗದ್ದಲಕೊಂಡ ಗಣೇಶ್ ಸೇರಿದಂತೆ ಹಲವು ಹಟಿ ಸಿನೆಮಾಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಸದ್ಯ ವರುಣ್ ಗಾಂಢಿವಧಾರಿ ಅರ್ಜುನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಇತ್ತೀಚಿಗೆ ವರುಣ್ ತೇಜ್ ಮದುವೆಯ ಬಗ್ಗೆ ಅನೇಕ ಕಥನಗಳು ಹರಿದಾಡುತ್ತಿವೆ. ಒಬ್ಬ ನಟಿಯನ್ನು ಮದುವೆಯಾಗಲಿದ್ದಾರೆ. ಸ್ಟಾರ್‍ ನಟನ ಮಗಳನ್ನು ಮದುವೆಯಾಗಲಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಈ ಬಗ್ಗೆ ನಾಗಬಾಬು ಸ್ಪಷ್ಟನೆ ನೀಡಿದ್ದಾರೆ.

ಸೀನಿಯರ್‍ ನಟ ನಾಗಬಾಬು ತನ್ನ ಪುತ್ರ ವರುಣ್ ತೇಜ್ ಮದುವೆಯ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಈ ಹಿಂದೆ ಸಹ ಅನೇಕ ಬಾರಿ ಈ ಬಗ್ಗೆ ತಿಳಿಸಿದ್ದರು. ಆದರೂ ಸಹ ರೂಮರ್‍ ಗಳು ಹರಿದಾಡುತ್ತಿರುವ ಕಾರಣದಿಂದ ಇದೀಗ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಇನ್ನೂ ವರುಣ್ ತೇಜ್ ಮದುವೆ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡುತ್ತೇವೆ. ಈ ಬಗ್ಗೆ ಈಗಾಗಲೇ ನಾನು ಏನು ಕಾಮೆಂಟ್ ಮಾಡಬಾರದು. ವರುಣ್ ತನ್ನ ಮದುವೆ ಬಗ್ಗೆ ಆತನೇ ಮಿಡಿಯಾದ ಮುಂದೆ ಬಂದು ಎಲ್ಲಾ ವಿಚಾರ ತಿಳಿಸುತ್ತಾರೆ. ಫ್ಯಾಮಿಲಿ ನಿರ್ಣಯಿಸಿದ ಹುಡುಗಿಯನ್ನೇ ವರುಣ್ ಮದುವೆಯಾಗುತ್ತಾನೆ. ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಸಹ ಆಗಲಿದೆ. ಇನ್ನೂ ನಿಹಾರಿಕಾ ಬೇರೆಯಾಗಿದ್ದಾರೆ ಅದೇ ರೀತಿ ವರುಣ್ ಸಹ ಬೇರೆಯಾಗಿದ್ದಾರೆ. ನಾನು ಅವರನ್ನು ಕಂಟ್ರೋಲ್ ಮಾಡಬೇಕೆಂದು ಎಂದೂ ಅಂದುಕೊಂಡಿಲ್ಲ. ಅವರ ಪ್ರೈವೆಸಿಯ ಬಗ್ಗೆ ಗೌರವಿಸುತ್ತೇನೆ ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ನಟ ವರುಣ್ ತೇಜ್ ಟಾಲಿವುಡ್ ಸೀನಿಯರ್‍ ಸ್ಟಾರ್‍ ನಟ ವಿಕ್ಟರಿ ವೆಂಕಟೇಶ್ ರವರ ಪುತ್ರಿಯನ್ನು ಮದುವೆಯಾಗಲಿದ್ದಾರೆ. ಈ ಬಗ್ಗೆ ಎರಡೂ ಕುಟುಂಬಗಳು ಸಹ ಈ ಬಗ್ಗೆ ಮಾತುಕತೆ ನಡೆಸಿದೆ ಎಂದು ಸುದ್ದಿ ಹರಿದಾಡಿತ್ತು. ಇದೀಗ ನಾಗಬಾಬು ನೀಡಿರುವ ಹೇಳಿಕೆಗಳ ಕಾರಣದಿಂದ ಶೀಘ್ರದಲ್ಲೇ ತೆಲುಗು ಸಿನಿರಂಗಲ್ಲಿ ಮತ್ತೊಂದು ಮದುವೆ ನಡೆಯಬಹುದಾಗಿದೆ.