ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆಗೆ ರಷ್ಮಿಕಾ ದುಬೈ ಪಯಣ, ವೈರಲ್ ಆದ ಪೊಟೋಸ್..!

ತೆಲುಗು ಸ್ಟಾರ್‍ ನಟ ವಿಜಯ್ ದೇವರಕೊಂಡ ಹಾಗೂ ಸ್ಟಾರ್‍ ನಟಿ ರಶ್ಮಿಕಾ ರವರ ಪ್ರೇಮ ಕಥೆ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸುಮಾರು ದಿನಗಳಿಂದ ಈ ಜೋಡಿಯ ಬಗ್ಗೆ ವಿವಿಧ ರೀತಿಯ ರೂಮರ್‍ ಗಳು ಕೇಳಿಬರುತ್ತಲೇ ಇರುತ್ತದೆ. ರೂಮರ್‍ ಗಳು ಜೋರಾದ ಸಮಯದಲ್ಲಿ ಅವರು ನಮ್ಮ ಮಧ್ಯೆ ಅಂತಹ ಯಾವುದೇ ಸಂಬಂಧವಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳುತ್ತಾರೆ. ಆದರೂ ಸಹ ಅವರ ಬಗೆಗಿನ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ರಶ್ಮಿಕಾ ವಿಜಯ್ ದೇವರಕೊಂಡ ಕುಟುಂಬದೊಂದಿಗೆ ದುಬೈಗೆ ಹಾರಿದ್ದು, ಅವರ ಬಗೆಗಿನ ಸಂಬಂಧದ ಬಗ್ಗೆ ಮತ್ತೊಮ್ಮೆ ಸುದ್ದಿ ಹರಿದಾಡುತ್ತಿದೆ.

ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹೊಸ ವರ್ಷದ ಸಂಭ್ರಮಾಚರಣೆಗೆ ಮಾಲ್ಡೀವ್ಸ್ ಗೆ ಹೋಗಿದ್ದರು ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಇದೀಗ ಈ ಜೋಡಿಯ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಇಬ್ಬರೂ ಅನೇಕ ಬಾರಿ ವೆಕೇಷನ್ ಗೆ ಹೋಗಿ ಅಲ್ಲಿನ ಪೊಟೋಗಳನ್ನು ಜಾಗ್ರತೆಯಿಂದ ಶೇರ್‍ ಮಾಡಿದರೂ ಸಹ ನೆಟ್ಟಿಗರು ಪತ್ತೆ ಹಚ್ಚಿಬಿಡುತ್ತಿದ್ದರು. ಇದೀಗ ಮತ್ತೊಮ್ಮೆ ದುಬೈ ಪ್ರವಾಸಕ್ಕೆ ಈ ಜೋಡಿ ಹೋಗಿದೆ. ಆದರೆ ಈ ಬಾರಿ ವಿಜಯ್ ದೇವರಕೊಂಡ ಕುಟುಂಬದ ಜೊತೆಗೆ ರಶ್ಮಿಕಾ ಸಹ ಹೋಗಿದ್ದಾರೆ. ಈ ಕಾರಣದಿಂದ ಅವರ ಬಗ್ಗೆ ಹರಿದಾಡುತ್ತಿರುವ ರೂಮರ್‍ ಗಳಿಗೆ ಮತಷ್ಟು ಬಲ ಸಿಕ್ಕಿದೆ ಎನ್ನಬಹುದಾಗಿದೆ.

ಇನ್ನೂ ದುಬೈನಲ್ಲಿ ವಿಜಯ್ ದೇವರಕೊಂಡ ಆತನ ಫ್ಯಾಮಿಲಿ ಯೊಂದಿಗೆ ತೆಗೆದ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಸಹ ನಗುತ್ತಾ ಕಾಣಿಸಿಕೊಂಡಿದ್ದಾರೆ. ಅವರ ಬಗ್ಗೆ ಸುಮಾರು ದಿನಗಳಿಂದ ಸುದ್ದಿ ಹರಿದಾಡುತ್ತಿದ್ದರೂ ಈ ಬಗ್ಗೆ ಇಬ್ಬರಲ್ಲಿ ಯಾರೂ ಸಹ ಬಾಯಿಬಿಟ್ಟಿರಲಿಲ್ಲ. ಇದೀಗ ವಿಜಯ್ ಫ್ಯಾಮಿಲಿ ಜೊತೆಗೆ ದುಬೈಗೆ ಹಾರಿದ್ದಾರೆ. ಈ ಹಿಂದೆ ಇಬ್ಬರೂ ಅನೇಕ ಬಾರಿ ವೆಕೇಷನ್ ಗೆ ಹೋದರೂ ಸಹ ಜಂಟಿಯಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ದುಬೈನಲ್ಲಿ ಒಂದೇ ಫ್ರೇಂ ನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ರಶ್ಮಿಕಾ ಇತ್ತಿಚಿಗೆ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಕನ್ನಡ ಸಿನೆಮಾಗಳಿಂದ ಆಕೆಯನ್ನು ಬ್ಯಾನ್ ಮಾಡಬೇಕೆಂದು ಸಹ ಈ ಹಿಂದೆ ಅನೇಕರು ಆಗ್ರಹಿಸಿದ್ದರು. ಸದ್ಯ ರಶ್ಮಿಕಾ ಪುಷ್ಪಾ-2, ಮಿಷನ್ ಮಜ್ನು, ಯಾನಿಮಲ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಖುಷಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Previous articleವರುಣ್ ತೇಜ್ ಮದುವೆಯ ಬಗ್ಗೆ ಕ್ಲಾರಿಟಿ ಕೊಟ್ಟ ನಾಗಬಾಬು, ವರುಣ್ ತೇಜ್ ಬೇರೆ ಮನೆಯಲ್ಲಿ ವಾಸವಿದ್ದಾರಂತೆ…!
Next articleಶಾರ್ಟ್ ಡ್ರೆಸ್ ನಲ್ಲಿ ಹಾಟ್ ಆಂಕರ್ ವರ್ಷಿಣಿ ಹಾಟ್ ಪೋಸ್, ಬೋಲ್ಡ್ ಆಂಕರ್ ಗ್ಲಾಮರ್ ಟ್ರೀಟ್ ಗೆ ಸೋಷಿಯಲ್ ಮಿಡಿಯಾ ಶೇಕ್..!