Film News

ಈ ಜೀವನಕ್ಕೆ ಆ ಮೂರು ಸಾಕು ಎಂದು ಇಂಟ್ರಸ್ಟಿಂಗ್ ಪೋಸ್ಟ್ ಮಾಡಿದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ…!

ಸಿನಿರಂಗದಲ್ಲಿ ಕೆಲ ನಟಿಯರು ಓವರ್‍ ಆಗಿ ಗ್ಲಾಮರ್‍ ಶೋ ಮಾಡದೇ ನ್ಯಾಚುರಲ್ ಆಗಿಯೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಮಲಯಾಳಂನ ಪ್ರೇಮಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡು ಬಹುಬೇಡಿಕೆ ನಟಿಯಾದರು. ಇನ್ನೂ ಸಾಯಿ ಪಲ್ಲವಿ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆಗಾಗ ಒಂದೊಂದು ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಆಕೆ ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನು ಕಾಣಿಸಿಕೊಂಡಿದ್ದಾರೆ.

ನಟಿ ಸಾಯಿಪಲ್ಲವಿ ರವರ ಹೊಸ ಸಿನೆಮಾ ಇನ್ನೂ ಘೋಷಣೆಯಾಗಿಲ್ಲ. ನಟಿ ಸಾಯಿ ಪಲ್ಲವಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು ಅವರ ಹೊಸ ಸಿನೆಮಾದ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ. ಮೂಲತಃ ತಮಿಳು ಮೂಲದವರಾದರೂ ಸಹ ಸಾಯಿಪಲ್ಲವಿ ಅಪಾರ ಸಂಖ್ಯೆಯ ತೆಲುಗು ಅಭಿಮಾನಿಗಳನ್ನೂ ಸಹ ಪಡೆದುಕೊಂಡಿದ್ದಾರೆ. ಫಿದಾ, ಎಂಸಿಎ, ಲವ್ ಸ್ಟ್ರೋರಿ, ಶ್ಯಾಮಸಿಂಗರಾಯ್ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು. ಈ ಸಿನೆಮಾಗಳಲ್ಲಿ ಆಕೆ ಪವರ್‍ ಪುಲ್ ರೋಲ್ ಪ್ಲೇ ಮಾಡಿದ್ದರು. ಇನ್ನೂ ಕಥೆಯಲ್ಲಿ ಪ್ರಧಾನ್ಯತೆಯಿದ್ದರೇ ಮಾತ್ರ ಆಕೆ ನಟಿಸುತ್ತಾರೆ. ಇದೇ ಆಕೆಯ ಸಕ್ಸಸ್ ಗೆ ಕಾರಣ ಎಂದೂ ಸಹ ಹೇಳಲಾಗುತ್ತದೆ.

ಇನ್ನೂ ನಟಿ ಸಾಯಿ ಪಲ್ಲವಿ ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿರುವುದಿಲ್ಲ. ಆಗಾಗ ಕೆಲವೊಮ್ಮೆ ಇಂಟ್ರಸ್ಟಿಂಗ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜೀವನದಲ್ಲಿ ನಗು, ಆಸೆಗಳು, ಕೃತಜ್ಞತೆಗಳು ಈ ಮೂರು ಇದ್ದರೇ ಸಾಕು, ಸಂತೋಷದಿಂದ ಜೀವನ ಸಾಗಿಸಬಹುದು ಎಂದು ಪೋಸ್ಟ್ ಮೂಲಕ ಪರೋಕ್ಷವಾಗಿ ಹೇಳಿದ್ದಾರೆ. ಸದ್ಯ ಆಕೆ ಪೋಸ್ಟ್ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಸಾಯಿ ಪಲ್ಲವಿ ವಿರಾಟ ಪರ್ವಂ, ಗಾರ್ಗಿ ಸಿನೆಮಾದ ಬಳಿಕ ಬೇರೆ ಸಿನೆಮಾಗಳನ್ನು ಮಾಡಲಿಲ್ಲ. ಗಾರ್ಗಿ ಹಾಗೂ ವಿರಾಟಪರ್ವಂ ಎರಡೂ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಶ್ಯಾಮಸಿಂಗರಾಯ್ ಸಿನೆಮಾದ ಬಳಿಕ ಆಕೆಗೆ ಯಾವುದೇ ಸಿನೆಮಾ ಹಿಟ್ ತಂದುಕೊಡಲಿಲ್ಲ. ಆದರೂ ಸಹ ಆಕೆಯ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ ಎನ್ನಬಹುದಾಗಿದೆ. ಇನ್ನೂ ಆಕೆಯ ಸಿನೆಮಾಗಳಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನೂ ಆಕೆ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ವೈದ್ಯ ವೃತ್ತಿಯನ್ನು ಮುಂದುವರೆಸುತ್ತಾರೆ. ಮದುವೆಯಾಗಲಿದ್ದಾರೆ ಈ ಕಾರಣದಿಂದಲೇ ಆಕೆ ಸಿನೆಮಾಗಳಿಂದ ದೂರ ಉಳಿದಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಒಳ್ಳೆಯ ಪಾತ್ರಗಳಿರುವ ಸಿನೆಮಾಗಾಗಿ ಆಕೆ ಕಾಯುತ್ತಿದ್ದಾರೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳುವ ಮೂಲಕ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದರು.

Most Popular

To Top