Film News

40 ಹುಡುಗಿಯರನ್ನು ತೃಪ್ತಿಪಡಿಸುವ ಸಾಮರ್ಥ್ಯವಿದೆ ಎಂದ ನಟ ಪೃಥ್ವಿರಾಜ್, ನಟ ಆ ರೀತಿ ಹೇಳಿದ್ದು ಯಾಕೆ?

ಸೌತ್ ಸಿನಿರಂಗದ ಖ್ಯಾತ ನಟ ಬಬ್ಲೂ ಪೃಥ್ವಿರಾಜ್ ತಮಿಳು ಸಿನೆಮಾಗಳ ಜೊತೆಗೆ ತೆಲುಗು, ಹಿಂದಿ ಹಾಗೂ ಕನ್ನಡ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಮೂಲತಃ ಬೆಂಗಳೂರು ಮೂಲದ ಈತನಿಗೆ ಸದ್ಯ 56 ವರ್ಷವಾಗಿದೆ. ವಯಸ್ಸಾದರೂ ಸಹ ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಪೃಥ್ವಿ ಪತ್ರಕರ್ತ ಬೈಲ್ವಾನ್ ನೀಡಿದ ಕಾಮೆಂಟ್ ಗಳ ಕಾರಣದಿಂದ ಆತನ ವಿರುದ್ದ ಫೈರ್‍ ಆಗಿದ್ದಾರೆ. ಅಷ್ಟಕ್ಕೂ ಬೈಲ್ವಾನ್ ಪೃಥ್ವಿ ಬಗ್ಗೆ ಹೇಳಿದ್ದಾದರೂ ಏನು, ಆತ ಕೋಪಗೊಂಡಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ನಟ ಕಂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಸಿನಿರಂಗದ ಅನೇಕ ಸೆಲೆಬ್ರೆಟಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಸೀನಿಯರ್‍ನಟ ಬಬ್ಲೂ ಪೃಥ್ವಿರಾಜ್ ರವರ ವೈಯುಕ್ತಿಕ ವಿಚಾರಗಳ ಬಗ್ಗೆ ಕೆಲವೊಂದು ಕಾಮೆಂಟ್ ಮಾಡಿದ್ದಾರೆ. ನಟ ಪೃಥ್ವಿ ತನ್ನ ಮೊದಲ ಪತ್ನಿ ಬೀನಾರವರಿಂದ ಬೇರೆಯಾಗಿದ್ದರು. ಆ ಬಳಿಕ ತನಗಿಂತ ಕಿರಿಯಳಾಗಿದ್ದ 33 ವರ್ಷ ರುಕ್ಮಿಣಿ ಶೀತಲ್ ಎಂಬಾಕೆಯೊಂದಿಗೆ ಸುತ್ತಾಡುತ್ತಿದ್ದರು. ಇದೀಗ ಆಕೆಯೊಂದಿಗೂ ಸಹ ಪೃಥ್ವಿ ಬೇರೆಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬೈಲ್ವಾನ್ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಮೊದಲ ಪತ್ನಿಯಿಂದ ಪೃಥ್ವಿರಾಜ್ 27 ವರ್ಷ ಪುತ್ರನನ್ನು ಹೊಂದಿದ್ದಾರೆ. ಆಟಿಸಂ ಕಾಯಿಲೆಯಿಂದ ಬಳಲುತ್ತಿರುವಂತಹ ಪೃಥ್ವಿ ತಂದೆಯೊಂದಿಗೆ ವಾಸವಾಗಿದ್ದಾರೆ. ತನಗೆ ಹೆಚ್ಚು ಪ್ರಾಮುಖ್ಯತೆ ಸಿಗುವುದಿಲ್ಲ, ದೈಹಿಕವಾಗಿಯೂ ಲಾಭವಿಲ್ಲ ಎಂಬ ಕಾರಣದಿಂದ ಶೀತಲ್ ಪೃಥ್ವಿರಾಜ್ ರನ್ನು ಬಿಟ್ಟು ಹೋಗಿದ್ದಾಳೆ ಎಂದು ಬೈಲ್ವಾನ್ ರಂಗನಾಥನ್ ಆರೋಪ ಮಾಡಿದ್ದರು.

ಈ ಆರೋಪಗಳಿಗೆ ಕೌಂಟರ್‍ ಕೊಟ್ಟ ಬಬ್ಲೂ ಪೃಥ್ವಿರಾಜ್ ಬೈಲ್ವಾನ್ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಶೀತಲ್ ಜೊತೆಗೆ ನಾನು ಬೇರೆಯಾದ ವಿಚಾರವನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ನನ್ನ ಜೀವನದಲ್ಲಿ ಮಗ ಆಟಿಸಂ ಕಾಯಿಲೆಗೆ ತುತ್ತಾದ ಎಂಬ ಅಂಶ ನಾನು ಒಪ್ಪಿಕೊಳ್ಳೋಕೆ ಆಗ್ತಾ ಇಲ್ಲ. ಈ ಕಾರಣದಿಂದ ನಾನು 9 ವರ್ಷಗಳ ಕಾಲ ಖಿನ್ನತೆಯಲ್ಲಿದ್ದು, ಸಿನೆಮಾಗಳಿಂದ ದೂರವಿದ್ದೇನೆ. ನನ್ನ ಎಲ್ಲಾ ಆಸ್ತಿಗಳನ್ನು ಸಹ ಮಾರಿದ್ದೇನೆ. ಬಳಿಕ ನಾನು ನಿಧಾನವಾಗಿ ಅದರಿಂದ ಹೊರಬಂದೆ. ಬಳಿಕ ಶೀತಲ್ ಜೊತೆ ಎಂಗೇಜ್ ಆದ ಬಳಿಕ ಮುಕ್ತವಾಗಿ ಮಾತನಾಡುವ ಮಗುವಿನಂತೆ ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಆದರೆ ಅದನ್ನು ಅನೇಕರು ಬೇರೆಯದ್ದೇ ರೀತಿಯಲ್ಲಿ ಟೀಕೆ ಮಾಡುತ್ತಿದ್ದರು.

ನನ್ನ ಬಗ್ಗೆ ಏನು ತಿಳಿಯೇ ಅನೇಕರು ಟೀಕೆ ಮಾಡುತ್ತಾರೆ. ಆದ್ದರಿಂದ ನಾನು ಈಗಿನಿಂದ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ವೈಯುಕ್ತಿಕ ಜೀವನದ ಬಗ್ಗೆ ನಾನು ಎಲ್ಲೂ ಮಾತನಾಡೊಲ್ಲ. ನಾನು ಶೀತಲ್ ಗೆ ದೈಹಿಕವಾಗಿ ತೃಪ್ತಿ ಪಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ನಾನು ಬೇರೆಯಾಗಿದ್ದೇನೆ ಎಂದು ಬೈಲ್ವಾನ್ ಹೇಳುತ್ತಾರೆ. ನಾನು ಬೈಲ್ವಾನ್ ಬೀಚ್ ನಲ್ಲಿ ನೋಡಿದ್ದು, ಆತನಿಗೆ ಒಂದು ಹೆಜ್ಜೆ ಇಡೋಕೂ ಸರಿಯಾಗಿ ಆಗಲ್ಲ. ಯೂಟ್ಯೂಬ್ ನಲ್ಲಿ ವಿಡಿಯೋ ಮಾಡಿ ಹಣ ಮಾಡುತ್ತೇನೆ. ಯಾರಾದರೂ ಒಳ್ಳೆಯದನ್ನು ಮಾತನಾಡಿದರೇ ಯಾರೂ ಕೇಳೊಲ್ಲ ಈ ಕಾರಣದಿಂದ ಬೈಲ್ವಾನ್ ಅಂತಹ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿರುತ್ತಾನೆ. ನಾನು ಬೈಲ್ವಾನ್ ಗೆ ಒಂದು ಮಾತನ್ನು ಹೇಳುತ್ತೇನೆ. ನನಗೆ ಒಂದಲ್ಲ ನಲವತ್ತು ಮಹಿಳೆಯರನ್ನು ಏಕಕಾಲದಲ್ಲಿ ತೃಪ್ತಿ ಪಡಿಸುವ ಶಕ್ತಿ ಇದೆ ಎಂದು ಕೌಂಟರ್‍ ಕೊಟ್ಟಿದ್ದು, ಪೃಥ್ವಿ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top